Sunday, December 13, 2015
ಇದು ನನ್ನ ಜೀವನದ ಅತ್ಯಮೂಲ್ಯ ಸೆಲ್ಫಿ...
ನಂಗೆ ಪಾಠ ಹೇಳಿದ ಕೆ.ಎಂ. ಹಾವಣ್ಣವರ ಸರ್ ಜೊತೆ.
ಎಡ ಕೆನ್ನೆಯನ್ನೂ ಸವರಿ, ಪಟಾರ್ ಅಂತಾ ಹೊಡೆದಿದ್ದ ಆ ನೆನಪು ಇನ್ನೂ ಇದೆ. ಹೌದು, 2ನೇ ತರಗತಿಯಲ್ಲಿದ್ದಾಗ ನಂಗೆ ಮೂರರ ಮಗ್ಗಿ ಬಂದಿರಲಿಲ್ಲ. ಇವರು ಅದಾಗಲೇ ನಮ್ಮ ಶಾಲೆಗೆ ಬಂದು ವಾರವಾಗಿತ್ತು. ನಾನು ಅವರ ಬಲಗಡೆ ಪಕ್ಕದಲ್ಲಿಯೇ ಕುಳಿತಿದ್ದೆ. ಮೂರರ ಮಗ್ಗಿ ಹೇಳು ಅಂದ್ರು, ಪೆಪ್... ಪೇ.... ಮಾಡಿದೆ..
ಎಡ ಕನ್ನೆ ಕೆಂಪಾಗಿಸಿ ಬಿಟ್ಟರು. ನಾಳೆ ಐದರವರೆಗೆ ಮಗ್ಗಿ ಬರಬೇಕು ಅಂತಾ ತಾಕೀತು ಮಾಡಿದ್ರು..
ಅಳುತ್ತ... ನಡುಗುತ್ತ ಮನೆಗೆ ಬಂದೆ. ಮರುದಿನ ನಾನು 10ರವರೆಗೂ ಮಗ್ಗಿ ಬಾಯಿಪಾಠ ಮಾಡಿಕೊಂಡು ಹಾಜರ ಆಗಿದ್ದೆ. ಅದು ನನ್ನ ಬುದ್ಧಿ ಶಕ್ತಿಯ ತಾಕತ್ತು ಅಲ್ಲಾ... ಅದು ನಮ್ಮ ಕೆ.ಎಂ. ಹಾವಣ್ಣವರ ಸರ್ ಆಶೀರ್ವಾದದ ತಾಕತ್ತು.
ಹೌದು ಮೂರನೇ ತರಗತಿಯಲ್ಲಿಯೇ ನನ್ನನ್ನು ಓವ ಸಮರ್ಥ ಭಾಷಣಕಾರನನ್ನಾಗಿಸಿ, 6ನೇ ತರಗತಿಯಿಂದ ನಾನೇ ಭಾಷಣ ಬರೆದುಕೊಂಡು ಮಾತನಾಡುವಂತೆ, 7ನೇ ತರಗತಿ ಹೊತ್ತಿಗೆ ಕೈ ಬರಹ ಪತ್ರಿಕೆ ಮಾಡಿ ನಮ್ಮೂರಲ್ಲೇ ಫೇಮಸ್ ಆಗುವಂತೆ ನನ್ನನು ಬೆಳೆಸಿದ ನನ್ನ ಪಾಲಿನ ದೇವರು ಇವರು...
ನಾವು 2ನೇ ತರಗತಿಯಲ್ಲಿದ್ದಾಗ ನಮ್ಮೂರ ಶಾಲೆಗೆ ಬಂದ ಇವರು ನಮ್ಮನ್ನಷ್ಟೇ ಸುಧಾರಿಸಲಿಲ್ಲ. ನಮ್ಮೂರ ಶಾಲೆಯ ಪರಿಸರವನ್ನು ಸುಧಾರಿಸಿದ ಆದರ್ಶ ಶಿಕ್ಷಕರು. 2ರಿಂದ 7ನೇ ತರಗತಿಯವರೆಗೂ (ಮಧ್ಯ ನಾಲ್ಕನೇ ತರಗತಿಯಲ್ಲಿದ್ದಾಗ ಐದು ತಿಂಗಳು ಅನ್ಯ ಕಾರ್ಯ ನಿಮಿತ್ತ ಹೋದಾಗ ಕಾಳಣ್ಣವರ ಮೇಡಂ ಕಲಿಸಿದ್ದು ಬಿಟ್ಟು ) ನಿರಂತರವಾಗಿ ಕಲಿಸಿದ ಗುರುಗಳಿವರು. ಇನ್ನೊಂದು ಆಶ್ಚರ್ಯದ ಸಂಗತಿ ಎಂದರೆ 7ನೇ ತರಗತಿಯವರೆಗೂ ಇವರು ಬಳಸಿದ್ದು ಒಂದೇ ಬಡಗಿ. ಅದು ಬೆತ್ತದ ಬಡಗಿಯಾಗಿತ್ತು. ಅದಕ್ಕೆ ಭರಮಪ್ಪ ಅಂತಾ ಹೆಸರಿಟ್ಟಿದ್ದರು.
ಮೂರನೇ ತರಗತಿಯಲ್ಲಿ ಕಪಾಳಕ್ಕೆ ಹೊಡಿಸಿಕೊಂಡ ನಾನು ಪುನಃ ಹೊಡೆಸಿಕೊಂಡಿದ್ದು 7ನೇ ತರಗತಿಯಲ್ಲಿದ್ದಾಗ ಅದು ಟ್ಯೂಷನ್ ಹಚ್ಚಿದ್ದ ಕಾರಣಕ್ಕೆ.
ಹೌದು, ಈಗೆಲ್ಲ ಟ್ಯೂಷನ್ ಹಚ್ಚುವುದು ಪ್ರತಿಷ್ಠೆಯ ಸಂಗತಿ. ಆದರೆ ಆಗ ಟ್ಯೂಷನ್‌ಗೆ ಹೋದ್ರೆ ಎಲ್ಲಿ ನಾನು ಸರಿಯಾಗಿ ಕಲಿಸುತ್ತಿಲ್ಲವೆನೋ ಎಂದು ನೊಂದುಕೊಂಡಿದ್ದರು ಈ ಗುರುಗಳು ನಮಗೆ ಎಕ್ಷಾ ಕ್ಲಾಸ್ ಹೇಳಿ... ನಮ್ಮ ಟ್ಯೂಷನ್ ಹಪಾಹಪಿ ತಣಿಸಿದ್ದರು. ನಮ್ಮೂರ ಎಂ.ಆರ್. ಪೆಜೋಳ್ಳಿ ಆಗಷ್ಟೆ ಎಂ.ಎ. ಮುಗಿಸಿಕೊಂಡು ಬಂದಿದ್ರು. ದಿನ ರಾತ್ರಿ ಖಾಲಿ ಇರುತ್ತೇನೆ ಎಂದುಕೊಂಡು ಒಂದು ತಾಸು ಪಾಠ ಹೇಳುತ್ತಿದ್ದರು. ಅದೇ ಟ್ಯೂಷನ್. ಇದು ತಿಳಿದು ಹಾವಣ್ಣವರ ಸರ್ ಒಂದು ಕಠಿಣ ಲೆಕ್ಕ ಮಾಡಲು ಕೊಟ್ರೂ. ಯಾರಿಗೂ ಬರಲಿಲ್ಲ. ಅದೇ ಸಿಟ್ಟಿಗೆ ಹೊಡೆದಿದ್ದರು.
ಅವರ ಕೈಯಲ್ಲಿ ಕಲಿತ ಎಲ್ಲರೂ ಇವತ್ತು ಸರ್ಕಾರಿ ನೌಕರಿಯಲ್ಲಿ ಇಲ್ಲದೇ ಇರಬಹುದು. ಕೆಲವರು ಹೊಲ ಮಾಡುತ್ತ ರೈತರಾಗಿರಬಹುದು. ಇನ್ನೂ ಕೆಲವರು ಗಡಿ ಕಾಯುವ ಸೈನಿಕರು. ಆದರೆ ಜೀವನದಲ್ಲಿ ಎಲ್ಲರೂ ಒಂದೊಂದು ಸಾಧನೆ ಮಾಡಿದ್ದೇವೆ. ಮರ್ಯಾದೆಯ ಜೀವನ ಸಾಗಿಸುತ್ತಿದ್ದೇವೆಂದರೆ. ಅದು ಈ ಗುರು ಕೊಟ್ಟ ದೀಕ್ಷೆಯೇ ಕಾರಣ.
(ಇಂದು ಹುಬ್ಬಳ್ಳಿಯಲ್ಲಿ ನಡೆದ ಜೈನ ಶಿಕ್ಷಕರ ಸಮ್ಮೇಳನದಲ್ಲಿ ಹಾವಣ್ಣವರ ಸರ್ ಭೇಟಿಯಾದ ತೆಗೆಸಿಕೊಂಡ ಸೆಲ್ಫಿ)
Subscribe to:
Post Comments (Atom)
ಮನೆಪಾಠ ಕೇಂದ್ರಗಳಿಗೆ ಬ್ಯಾಗ್ ಮತ್ತು ಬುಕ್ಸ್ ವಿತರಣೆ
Dharwad: ಗುರುಕುಲ ಪದ್ಧತಿಯಂತೆ ಒಬ್ಬರೇ ಶಿಕ್ಷಕರಿಂದ ನಡೆಸುವ ಈ ನವೀನ ಪ್ರಯೋಗವೇ ಏಕ ಶಿಕ್ಷಕ ವಿದ್ಯಾಲಯ ಅಂದರೆ ಮನೆಪಾಠ ಕೇಂದ್ರ ಎಂದು ವನವಾಸಿ ಕಲ್ಯಾಣ ಕರ್ನಾಟಕ ಸಂಸ್ಥ...
.jpeg)
-
ನನಗೆ ಇರುವ ಚಟಗಳಲ್ಲಿ ಟಿವಿ ನೋಡುವುದು ದೊಡ್ಡ ಚಟ. ಹೀಗಾಗಿ ಮನೆ ಹಾಗೂ ಕಚೇರಿಯಲ್ಲಿದ್ದರೂ ಸಹ ಸದಾ ಟಿವಿಯನ್ನು ನೋಡುತ್ತಲೇ ಇರುತ್ತೇನೆ. ಇನ್ನು ಹೊರಗಡೆ ಸುತ್ತಾಡುವಾಗಲೂ ...
-
ಬೆಳಗಾವಿ, ೧- ಹಣದುಬ್ಬರ ಹಾಗೂ ಬೆಲೆ ಏರಿಕೆ ಮಧ್ಯೆ ಈಗ ಬೆಳಗಾವಿ ನಗರ ಹಾಗೂ ಜಿಲ್ಲೆಯಲ್ಲಿ ಚಿಲ್ಲರೆ ನಾಣ್ಯಗಳ ಅಭಾವ ಸೃಷ್ಟಿಯಾಗಿದ್ದು, ಇದನ್ನು ಕೆಲವರು ದಂಧೆಯನ್ನಾಗಿಯೂ ...
-
ರಾಜ್ಯದಲ್ಲಿ ತನ್ನ ಖಜಾನೆ ತುಂಬಿಸಿಕೊಳ್ಳುತ್ತಿರುವ ಮಲ್ಟಿಪ್ಲೆಕ್ಸ್ಗಳು, ಒಂದಲ್ಲ ಒಂದು ರೀತಿಯಲ್ಲಿ ಕನ್ನಡ ಚಿತ್ರಗಳಿಗೆ ಧಕ್ಕೆ ಮಾಡುತ್ತಲೇ ಬರುತ್ತಿವೆ. ಕನ್ನಡ ಸಿನಿಮಾ...
No comments:
Post a Comment