Tuesday, January 5, 2016

ಅದ್ಭುತ ಚಿತ್ರಕಾವ್ಯ...

ಕತ್ಯಾರ ಕಾಳಜಾತ್ ಗುಸಲಿ(ಕಠಾರಿ ಕರಳಿನೊಳಗೆ ನುಸುಳಿತು)... ಮರಾಠಿಯ ಅದ್ಭುತ ಸಿನಿಮಾ ಅನ್ನುವುದಕ್ಕಿಂತ ಚಿತ್ರಕಾವ್ಯ ಅನ್ನಬಹುದು. ಅಷ್ಟೊಂದು ಆಕರ್ಷಿತವಾಗಿದೆ. ವಿಶರಂಪುರ ಎನ್ನುವ ಒಂದು ಸಾಮ್ರಾಜ್ಯ. ಅಲ್ಲಿ ಪ್ರತಿ ದಸರೆಗೂ ಸಂಗೀತ ಕಛೇರಿ ನಡೆಸಿ ಗೆದ್ದವರಿಗೆ ಒಂದು ಹವಲಿಯನ್ನು ಗೌರವವಾಗಿ ಕೊಡುವುದರ ಜೊತೆಗೆ ಆತ್ಮರಕ್ಷಣೆಗಾಗಿ ರಾಜ ಕಠಾರಿಯೊಂದನ್ನು ನೀಡುತ್ತಿರುತ್ತಾನೆ. ಆ ಕಠಾರೆ ಪಡೆಯೋದೇ ಜೀವನದ ಮುಖ್ಯ ಗುರಿಯನ್ನಾಗಿಸಿಕೊಂಡ ಅನೇಕ ಸಂಗೀತಗಾರರು ಅಲ್ಲಿರುತ್ತಾರೆ. ಈಗ ಗೆದ್ದವರು ಮುಂದಿನ.ಸೋತರೆ ಕಠಾರಿ ಮತ್ತು ಅರಮನೆ(ಹವೆಲಿ) ವಾಪಾಸ ಗೆದ್ದವರಿಗೆ ಮರಳಿಸಬೇಕು ಅನ್ನೊದು ನಿಯಮ ಅದನ್ನು ಪಡೆಯುಬ ಹಪಾಹಪಿವುಳ್ಳ ಸಂಗೀತಗಾರಲ್ಲಿ ಖಾನಸಾಹೇಬ(ಸಚಿನ ಪಿಳಗಾಂವಕರ) ಒಬ್ರು. ಆದ್ರೆ ಸತತ ೧೪ ವರ್ಷಗಳ ಕಾಲ ರಾಜ ಪಂಡಿತ ಗೌರವ ಪಂ. ಭಾನುಶಂಕರ ಶಾಸ್ತ್ರಿ(ಶಂಕರ ಮಹದೇವನ್) ಅವರಿಗೆ ಸಲ್ಲುತ್ತಾ ಇರುತ್ತದೆ. ಹದಿನಾಲ್ಕು ವರ್ಷಗಳ ಸೋಲಿನ ಹತಾಶೆ ಮತ್ತು ಗೆಲುವಿನ ಹಪಾಹಪಿಯಲ್ಲಿ ಹೊಯ್ದಾಡುವ ಖಾನಸಾಹೆಬ ೧೫ನೇ ವರ್ಷಕ್ಕೆ ಭಾನು ಶಂಕರರನ್ನು ಸೋಲಿಸುತ್ತಾನೆ. ಆದರೆ ಅದು ವಂಚನೆ ಮೂಲಕ (ಆ ವಂಚನೆ ಏನಂತ ಸಿನಿಮಾದಲ್ಲೇ ನೋಡಬೇಕು) ಆಗ ಶಾಸ್ತ್ರೀಯವರು ಹವೆಲಿ ಜೊತೆಗೆ ರಾಜ್ಯವನ್ನೇ ಬಿಟ್ಟು ಹೊಗ್ತಾರೆ. ಆಗ ಅವರನ್ನು ಹುಡುಕಿಕೊಂಡು ಬರುವ ಸದಾಶಿವ(ಬಾಲಕನಿಂದಾಗ ಇವರ ಸಂಗೀತ ಆಕರ್ಷಣೆಗೆ ಒಳಗಾದವ) ತನ್ನ ಗುರುವಿಗೆ ಪುನರ್ ಮರ್ಯಾದೆ ದೊರಕಿಸಿಕೊಡುವ ಜೊತೆಗೆ ಖಾನಸಾಹೇಬರ ಸೊಕ್ಕನ್ನು ಸಂಗೀತದಿಂದಲೇ ಸರ್ವನಾಶ ಮಾಡಲು ಪಡುವ ಸಂಗೀತ ಅಭ್ಯಾಸದ ಪ್ರಯತ್ನಗಳು ಪ್ರೇಕ್ಷಕರಲ್ಲಿ ಜೀವನೋತ್ಸಾಹ ಮೂಡಿಸುವಂತಿವೆ. ತನ್ನ ಕಂಠ ಸ್ವರವನ್ನೇ ಗಿರವಿ ಇಟ್ಟು ಪರದಾಡುವ ಪ್ರಸಂಗಗಳು ನೋಡುಗರ ಕರಳು ಚುರಕ್ ಎನ್ನುವಂತೆ ಮಾಡುತ್ತವೆ. ಆ ಸದಾಶಿವನ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ ಈ ಚಿತ್ರದ ನಿರ್ದೇಶಕರೂ ಆಗಿರುವ ಸುಭೋದ ಬಾವೆ. ಚಿತ್ರದಲ್ಲಿ ಒಟ್ಟು ೧೭ ಹಾಡುಗಳಿಗೆ. ಬಹುತೇಕ ಎಲ್ಲವೂ ಹಿಂದುಸ್ತಾನಿ ಸಂಗೀತದ ಗಾಯಕಿ ಶೈಲಿಯಲ್ಲಿವೆ. ಈ ಸಿನಿಮಾದಲ್ಲಿ ಸಂಗೀತ ಮತ್ತು ಸಂಭಾಷಣೆಗಳೇ ಕೊನೆಯವರೆಗೂ ನಿಮ್ಮನ್ನು ಮಿಸಕಾಡದಂತೆ ಮಾಡಬಲ್ಲವು. ಕಾರಣ ಸಂಭಾಷಣೆಗಳಂತೂ ಅರ್ಥಗಂಭಿತವಾಗಿವೆ ಸಿನಿಮಾದ ಆಚೆಗೂ ಜೀವನದ ಬಗ್ಗೆ ಚಿಂತೆ-ಚಿಂತನೆ ಮಾಡುವಂತಿವೆ. ೧೯೬೭ರಲ್ಲಿ ವಸಂತರಾವ್ ದೇಶಪಾಂಡೆಯವರು ರಚಿಸಿ ಮುಂಬೈನಲ್ಲಿ ಆಡಿಸಿದ್ದ ನಾಟಕವನ್ನೇ ಇಲ್ಲಿ ಸಿನಿಮಾ ಆಗಿಸಿದ್ದಾರೆ. ಬಹುತೇಕ ಹಾಡುಗಳೆಲ್ಲವೂ ಮೂಲ ನಾಟಕದ ಸಂಗಿತವನ್ನೇ ಹೊಂದಿವೆ. ಅದರಲ್ಲೂ ಕಿರವಾಣಿ ರಾಗದಲ್ಲಿರುವ "ದಿಲ್ ಕಿ ತಾಪಿಸ್" ಹಾಡು ತುಂಬಾನೇ ಸುಶ್ರಾವ್ಯವಾಗಿ ಬಂದಿದೆ. ಜೊತೆಗೆ ಕೇಳಿದ ಮೇಲೆ ಅಷ್ಟೇ ಕಾಡುತ್ತೆ ಕೂಡ. ಪಂ. ಭಾನುಶಂಕರ ಶಾಸ್ತೀ ಪಾತ್ರದಲ್ಲಿ ಖ್ಯಾತ ಗಾಯಕ ಶಂಕರ ಮಹದೇವನ ತುಂಬಾನೇ ಚೆನ್ನಾಗಿ ಅಭಿನಯಿಸಿದ್ದಾರೆ. ಸಿನಿಮಾ ಸಂಪೂರ್ಣವಾಗಿ ಸಂಗೀತ ಪ್ರಧಾನವಾಗಿದ್ದರೂ ಮನುಷ್ಯ ಜೀವನದ ಸಾರ ಇಲ್ಲಿದೆ. ಅಹಂ, ತ್ಯಾಗ, ಛಲ, ಹಪಾಹಪಿ, ಪದವಿಯ ಮೋಹ, ಪ್ರಖ್ಯಾತಿಯ ಉತ್ತುಂಗತೆಯ ಅವಾಂತರಗಳು, ಭಕ್ತಿ, ನ್ಯಾಯ, ಕಾನೂನು, ವಂಚನೆ ಹೀಗೆ ಹಲವು ಆಯಾಮಗಳು ಬಂದು ಹೊಗುತ್ತವೆ ಮರಾಠಿ ಬಲ್ಲದವರೂ ನೋಡಬಹುದು ಕಾರಣ ಇಂಗ್ಲಿಷ ಸಬ್ ಟೈಟಲ್ ಇದೆ. ✒ಡಿ.ವಿ. ಕಮ್ಮಾರ

No comments:

Post a Comment

ವರ್ಷದ ಕೊನೆ ದಿನ ಕರೆಂಟ್ ಕಟ್

 ವಿದ್ಯುತ ವ್ಯತ್ಯಯ ಧಾರವಾಡ (ಕರ್ನಾಟಕ ವಾರ್ತೆ) ಡಿ.28:* ಹೆಸ್ಕಾಂನ 110 ಕೆವಿ. ಯು.ಎ.ಎಸ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ...