Saturday, November 28, 2015

ಫಸ್ಟ್ ರ‌್ಯಾಂಕ್ ರಾಜು: ಕನ್ನಡ ಚಿತ್ರರಂಗದ ಮತ್ತೊಂದು ಗೆಲ್ಲುವ ಕುದುರೆ

ಫಸ್ಟ್ ರ‌್ಯಾಂಕ್ ರಾಜು ಪಕ್ಕಾ ಕಾಮಿಡಿಯೂ ಹೌದು...! ಪರ್ಫೆಕ್ಟ್ ಸಂದೇಶ ನೀಡುವಂತಹ ಚಿತ್ರವೂ ಹೌದು. ದ್ವಂದ್ವಾರ್ಥದ ಸಂಭಾಷಣೆಗಳಿದ್ದರೂ ಒಂದೇಡರಡು ಸನ್ನಿವೇಶಗಳಲ್ಲಿ ಮಾತ್ರ ಸ್ವಲ್ಪ ಅತೀ ಅನಿಸುತ್ತದೆ. ಅದನ್ನು ಬಿಟ್ಟರೇ ಯಾವ ರೀತಿ ನಗಿಸುತ್ತದೆಯೋ ಅದೇ ರೀತಿ ಶಿಕ್ಷಣ ವ್ಯವಸ್ಥೆಯ ಕುರಿತು ಚಿಂತನೆಗೂ ಹಚ್ಚುವಂತಹ ಒಂದು ಪಕ್ವವಾದ ಕಥೆವುಳ್ಳ ಚಿತ್ರ. ಫಸ್ಟ್ ರ‌್ಯಾಂಕ್ ವಿದ್ಯಾರ್ಥಿ ಹಾಗೂ ಷೋ ಮ್ಯಾನ್ ಕಿಲಾಡಿ ವಿದ್ಯಾರ್ಥಿಯಾಗಿ ಗುರು ನಂದನ್ ಎರಡೂ ಶೇಡ್‌ನಲ್ಲಿ ತುಂಬಾ ಇಷ್ಟವಾಗುತ್ತಾರೆ. ದಿಗಂತ ಬಳಿಕ ಕನ್ನಡಕ್ಕೆ ಮತ್ತೋರ್ವ ಚಾಕಲೇಟ್ ಹಿರೋ ಅನ್ನಬಹುದು. ಗುರುನಂದನ ನಿರ್ದೇಶಕರ ಆಶಯದ ನಿರೀಕ್ಷೆಯನ್ನೂ ಮೀರಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಮ್ಮ ಮಕ್ಕಳು ಮಾಕ್ಸ್ ಪಡೆಯುವ ಮಿಷನ್‌ನಂತೆ ಎಂದುಕೊಂಡಿರುವ ಇಂದಿನ ಪಾಲಕರನ್ನು ಪ್ರತಿನಿಧಿಸಿರುವ ಅಚ್ಯುತಕುಮಾರ ಮತ್ತು ಸುಧಾ ಬೆಳವಾಡಿ ಚಿತ್ರದ ಮತ್ತೊಂದು ಹೈಲೆಟ್ಸ್. ಇಂದಿನ ಪಾಲಕರ ಒಳ ತುಮುಲುಗಳನ್ನು.... ಮಕ್ಕಳು ಕಾನ್ವೆಂಟ್‌ಗೆ ಹೋಗುವಾಗಲೇ ಮುಂದೆ ನೀನು ದೊಡ್ಡ ಡಾಕ್ಟರ್ ಆಗಬೇಕು. ಇಂಜಿನಿಯರ್ ಆಗಬೇಕು. ಇಂತಹುದೇ ದೊಡ್ಡ ಕಂಪನಿಯಲ್ಲಿ ಉದ್ಯೋಗಿಯಾಗಬೇಕು ಎಂಬೆಲ್ಲಾ ಒತ್ತಡಗಳು ಹೇರುವ ಪಾಲಕರ ಆಶಾ ಗೋಪುರದ ಪರದಾಟಗಳನ್ನು ತುಂಬಾ ಚೆನ್ನಾಗಿ ತಮ್ಮಗಳ ಪಾತ್ರಕ್ಕಿಳಿಸಿದ್ದಾರೆ. ಸಾಧು ಕೋಕಿಲಾರಿಗೆ ಸಾಧುರೇ ಸಾಟಿ... ಸಾಧು ಪಾತ್ರ ಬಂದ ಬಳಿಕವಂತೂ ಅಷ್ಟೊತ್ತಿನವರೆಗೆ ನಕ್ಕಿದ್ದು ದುಪ್ಪಟ್ಟಾಗುತ್ತದೆ. ಆರಂಭದಿಂದಲೂ ಕೊನೆಯವರೆಗೂ ಚಿತ್ರ ಎಲ್ಲಿಯೂ ಬೇಸರ ತರಿಸುವುದಿಲ್ಲ. ಕೊನೆಯವರೆಗೂ ಎಷ್ಟು ನಗುತ್ತೆವೆಯೋ ಕೊನೆಯ ಕ್ಲೈಮ್ಯಾಕ್ಸ್‌ನಲ್ಲಿ ಇಂದಿನ ಶಿಕ್ಷಣ ವ್ಯವಸ್ಥೆಯ ಕುರಿತು ಅಷ್ಟೇ ಚಿಂತನೆಯನ್ನೂ ಮಾಡುವಂತಿದೆ. ಕೇವಲ ಪಠ್ಯ ಪುಸ್ತಕದಲ್ಲಿರುವುದನ್ನು ಮಾತ್ರ ಗಮನಿಸಬೇಕು ಎಂದು ತಂದೆ ಹೇಳಿದ್ದರಿಂದ ಸ್ನೇಹ, ಪ್ರೀತಿ, ವಿಶ್ವಾಸ ಹಾಗೂ ಜೀವನದ ಕನಿಷ್ಠ ಜ್ಞಾನವೂ ಗೊತ್ತಿಲ್ಲದನವಂತೆ ಬೆಳೆಯುವ ರಾಜು... ಮಾಕ್ಸ್ ತೆಗೆದುಕೊಳ್ಳುವಲ್ಲಿ ತುಂಬಾ ಗಟ್ಟಿಯಾಗಿದ್ದರು ಮನಸ್ಸು ಮಾತ್ರ ಗಟ್ಟಿಯಾಗಿಯೇ ಇರುವುದಿಲ್ಲ ಎಂಬುದೇ ಚಿತ್ರದ ಮುಖ್ಯ ಸಾರಾಂಶ. ಇನ್ನು ಶಿಕ್ಷಣ ವ್ಯವಸ್ಥೆಯ ಹಣ ಮಾಡುವ ದಂಧೆಯ ಕರಾಳ ಮುಖವನ್ನು ಚುಟುಕಾಗಿ ತೋರಿಸಿದ್ದಾರೆ. ಕಾಲೇಜ್ ಹುಡುಗರಂತೂ ತುಂಬಾ ಎಂಜಾಯ್ ಮಾಡಬಹುದಾದ ಚಿತ್ರವಾಗಿದ್ದು, ತಮ್ಮ ಕಾಲೇಜ್ ದಿನಗಳಲ್ಲಿ ಕೊನೆ ಬೆಂಚ್‌ನಲ್ಲಿ ಕುಳಿತುಕೊಳ್ಳುತ್ತಿದ್ದವರು ಹಾಗೂ ಈಗ ಕೊನೆ ಬೆಂಚ್‌ನಲ್ಲಿ ಕುಳಿತುಕೊಳ್ಳುತ್ತಿರುವ ವಿದ್ಯಾರ್ಥಿಗಳಂತೂ ಮುಂದಿನ ಬೆಂಚ್‌ನ ಫಸ್ಟ್ ರ‌್ಯಾಂಕುಗಳ ಅವಾಂತರಗಳನ್ನು ನೋಡಿ ಬಿದ್ದು ಬಿದ್ದು ನಗುವುದಂತೂ ಸತ್ಯ. ಒಂದಿಲ್ಲ ಒಂದು ಸನ್ನಿವೇಶ ಕೆಲ ಪ್ರೇಕ್ಷಕರಿಗೆ ತಮ್ಮ ಶಾಲಾ-ಕಾಲೇಜ್ ದಿನಗಳನ್ನು ನೆನಪಿಸಿಯೇ ನೆನಪಿಸುತ್ತವೆ!!!!

No comments:

Post a Comment

ವರ್ಷದ ಕೊನೆ ದಿನ ಕರೆಂಟ್ ಕಟ್

 ವಿದ್ಯುತ ವ್ಯತ್ಯಯ ಧಾರವಾಡ (ಕರ್ನಾಟಕ ವಾರ್ತೆ) ಡಿ.28:* ಹೆಸ್ಕಾಂನ 110 ಕೆವಿ. ಯು.ಎ.ಎಸ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ...