Thursday, July 4, 2024

ಮನೆಪಾಠ ಕೇಂದ್ರಗಳಿಗೆ ಬ್ಯಾಗ್ ಮತ್ತು ಬುಕ್ಸ್ ವಿತರಣೆ



Dharwad: ಗುರುಕುಲ ಪದ್ಧತಿಯಂತೆ ಒಬ್ಬರೇ ಶಿಕ್ಷಕರಿಂದ ನಡೆಸುವ ಈ ನವೀನ ಪ್ರಯೋಗವೇ ಏಕ ಶಿಕ್ಷಕ ವಿದ್ಯಾಲಯ ಅಂದರೆ ಮನೆಪಾಠ ಕೇಂದ್ರ ಎಂದು ವನವಾಸಿ ಕಲ್ಯಾಣ ಕರ್ನಾಟಕ ಸಂಸ್ಥೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಪ್ರದೀಪ ಗಾವಡೆ ಹೇಳಿದರು. 

ದಿ.೦೩.೦೭.೨೦೨೪ರಂದು ಧಾರವಾಡ ಜಿಲ್ಲೆಯ ಹಳೆತೇಗೂರ ಮತ್ತು ಮಾದನಬಾವಿ ಗ್ರಾಮಗಳ ಮನೆಪಾಠ ಕೇಂದಗಳಿಗೆ ವನವಾಸಿ ಕಲ್ಯಾಣ (ರಿ) ಕರ್ನಾಟಕ ವತಿಯಿಂದ ಬುಧವಾರ ಸಂಜೆ ಮಕ್ಕಳಿಗೆ ಬ್ಯಾಗ್ ಮತ್ತು ಬುಕ್ಸ್ ವಿತರಣೆ ಮಾಡಿ ಅವರು ಮಾತನಾಡಿದರು.

ಧಾರವಾಡ ಜಿಲ್ಲೆಯಾದ್ಯಾಂತ ಬುಡಕಟ್ಟು ಜನಾಂಗದ ಈ ಮನೆಪಾಠದ ಎಲ್ಲಾ ಮಕ್ಕಳಲ್ಲಿ ಸ್ವಂತಿಕೆಯ ಜೊತೆಗೆ ಶ್ರದ್ಧೆ,ನಿಷ್ಠೆ ಹಾಗೂ ಶಿಕ್ಷಣದ ಕಡೆಗೆ ಜಾಗೃತಿ ಮೂಡಿಸಿ ಮತ್ತು ಗಣಿತ, ವಿಜ್ಞಾನ ಹಾಗೂ ಸಾಮಾನ್ಯಜ್ಞಾನದಂತಹ ವಿಷಯಗಳಲ್ಲಿ ಮಕ್ಕಳನ್ನು ಪ್ರವೀಣರಾಗಿಸಲು ವನವಾಸಿ ಕಲ್ಯಾಣ ಸಂಸ್ಥೆಯ ಉದ್ದೇಶ ಎಂದರು.

ಇದೆ ಕಾರ್ಯಕ್ರಮದಲ್ಲಿ  ಧಾರವಾಡ ಜಿಲ್ಲಾ ಟೆಲಿಮೆಡಿಸನ್ ಕಾರ್ಯಕರ್ತರಾದ ಕರಬಸಪ್ಪ ರೇವಡಿಹಾಳ ಮತ್ತು ಕಲಘಟಗಿ ತಾಲ್ಲೂಕಿನ ಕಾರ್ಯಕರ್ತ ಶಿವಾಜಿ ಕಡ್ಡೆಪ್ಪನವರ ಮತ್ತು ಆಚಾರ್ಯರರಾದ ಮಂಜುಳಾ ಹುಸಣ್ಣನವರ, ಶಾಂತವ್ವ ಮೂಖಿ ಹಾಗು ಮನೆಪಾಠದ ಸಮಿತಿಯ ಅಧ್ಯಕ್ಷರು, ಸರ್ವ ಸದ್ಯರುಗಳು  ಸೇರಿದಂತೆ  ಮನೆಪಾಠ ಮಕ್ಕಳ ಪಾಲಕರು, ಪೋಷಕರು ಹಾಗು ವನವಾಸಿ ಕಲ್ಯಾಣದ ಬಂದು-ಬಳಗದವರು ಹಾಜರಿದ್ದರು.

ಇದೆ ಸಂದರ್ಭದಲ್ಲಿ ಮನೆಪಾಠದ ಮಕ್ಕಳಿಂದ ಶ್ಲೋಕ, ಭಜನೆ ಹಾಡುಗಳನ್ನು ಹಾಡಿಸಲಾಯಿತು.


                                                                                                                                                                                                                                                                                                                                                                                                                                                                                                                                                     

No comments:

Post a Comment

ಮನೆಪಾಠ ಕೇಂದ್ರಗಳಿಗೆ ಬ್ಯಾಗ್ ಮತ್ತು ಬುಕ್ಸ್ ವಿತರಣೆ

Dharwad: ಗುರುಕುಲ ಪದ್ಧತಿಯಂತೆ ಒಬ್ಬರೇ ಶಿಕ್ಷಕರಿಂದ ನಡೆಸುವ ಈ ನವೀನ ಪ್ರಯೋಗವೇ ಏಕ ಶಿಕ್ಷಕ ವಿದ್ಯಾಲಯ ಅಂದರೆ ಮನೆಪಾಠ ಕೇಂದ್ರ ಎಂದು ವನವಾಸಿ ಕಲ್ಯಾಣ ಕರ್ನಾಟಕ ಸಂಸ್ಥ...