Thursday, November 12, 2015

ಕಥೆ ಎಳೆದಾಟದ ಮಧ್ಯೆ ನಗೆಯ ಅಲೆ ಉಕ್ಕಿಸುವ ‘ರಾಮಲೀಲಾ’

ತೆಲುಗಿನ ‘ಲೌಕ್ಯಂ’ ಚಿತ್ರದ ರಿಮೇಕ್ ಆಗಿರುವ ರಾಮಲೀಲಾ ಕನ್ನಡದಲ್ಲಿ ಯಾವುದೇ ಹೊಸತನ ತೋರಿಲ್ಲ. ಆದರೂ ಭರ್ಜರಿ ನಗೆ ಉಕ್ಕಿಸುತ್ತದೆ. ಲೌಕ್ಯಂ ನೋಡಿದವರಿಗೆ ಚಿಕ್ಕಣ್ಣನ ಪಾತ್ರವೊಂದೇ ಹೊಸತು ಅನಿಸಬಹುದು. ಜೊತೆಗೆ ಲೌಕ್ಯಂದಲ್ಲಿನ ಬಹುತೇಕ ಹೆಸರುಗಳೇ ಇಲ್ಲಿಯೂ ಇವೆ-ಬದಲಾಗಿಲ್ಲ. ತೆಲುಗಿನಲ್ಲಿ ವೆಂಕಿ ಎಂತಿದ್ದ ನಾಯಕನ ಹೆಸರು ಇಲ್ಲಿ ರಾಮ ಆಗಿ ಬದಲಾಗಿದ್ದು ಬಿಟ್ಟರೇ, ಈತನ ತಂದೆ ಪಾತ್ರ ಮೇಕಾ ಪಾಪಾ ರಾವ್- ಮೇಕೆದಾಟು ಪಾಪಾ ರಾವ್(ರಂಗಾಯಣ ರಘು), ನಾಯಕಿ ಚಂದ್ರಕಲಾ ಅಲಿಯಾಸ್ ಚೆಂಡು(ಅಮೂಲ್ಯ), ಟ್ಯಾಕ್ಸಿ ಚಾಲಕ ಸಿಪ್ಪಿ(ಸಾಧು ಕೋಕಿಲಾ), ನಾಯಕಿಯ ಅಕ್ಕನನ್ನು ಪ್ರೀತಿ ಮಾಡುವ ಪಾತ್ರಧಾರಿ ಭರತ, ಬಾಯ್ಲಿಂಗ್ ಸ್ಟಾರ್ ಬಬ್ಲು(ಹಾಸ್ಯ ನಟ ರವಿಶಂಕರ) ಹೀಗೆ ಬಹುತೇಕ ಮೂಲ ಚಿತ್ರದ ಹೆಸರುಗಳೇ ರಿಮೇಕ್‌ನಲ್ಲಿವೆ. ಯಾವುದೇ ಹೊಸತನವಿಲ್ಲದ ಪ್ರೇಮ ಕಥೆಯಾಗಿದ್ದರೂ, ಯಾಕೋ ಕಥೆಯನ್ನು ಒಂದಿಷ್ಟು ಎಳೆಯಲಾಯಿತು ಅನಿಸಿದರೂ ಲೌಕ್ಯಂ ನೋಡದವರು ಹಾಗೂ ನೋಡಿದವರನ್ನೂ ಸಹ ಮನರಂಜಿಸಬಹುದಾದ ಅಪ್ಪಟ್ಟ ಹಾಸ್ಯಮಯ ಚಿತ್ರ ಎನ್ನಬಹುದು. ಸಾಧು ಕೋಕಿಲ ಮತ್ತು ರಂಗಾಯಣ ರಘುಗಿಂತಲೂ ಹೆಚ್ಚಾಗಿ ಹಾಸ್ಯದಲ್ಲಿ ಇಷ್ಟವಾಗೋದು ಬಾಯ್ಲಿಂಗ್ ಸ್ಟಾರ್ ಬಬ್ಲು ಪಾತ್ರಧಾರಿ ರವಿಶಂಕರ(ಖಳನಟ ರವಿಶಂಕರ ಅಲ್ಲ). ವಿಶೇಷ ಪಾತ್ರ ಮಾಡಿರುವ ಚಿಕ್ಕಣ್ಣ ಇಲ್ಲಿ ಹಿರೋಗಿಂತ ನಾನೇನೂ ಕಮ್ಮಿಯಿಲ್ಲ ಎನ್ನುವಂತೆ ಅಮೂಲ್ಯ ಜೊತೆಗೆ ಹಾಡೊಂದರಲ್ಲಿ ಹೆಜ್ಜೆ ಹಾಕಿದ್ದಾರೆ. ಚಂದ್ರಕಲಾ ಮತ್ತು ರಾಮ ಮಧ್ಯೆ ಪ್ರೀತಿ ಚಿಗುರುವ ದಿನ ರಾತ್ರಿ ಚಂದ್ರಕಲಾ ರಾಮಗೆ ‘ಹಾಯ್ ರಾಮ’ ಅಂತಾ ಮೊಬೈಲ್ ಸಂದೇಶ ಕಳುಹಿಸಿರುತ್ತಾಳೆ. ಆದರೆ ಅದಾದ ಮರುಕ್ಷಣದಲ್ಲಿ ರಾಮ್ ಗುಲಾಬಿ ಹಿಡಿದು ಅವಳ ಮನೆಗೆ ಬಂದು ಬಿಡುತ್ತಾನೆ. ಆಗ ಇಬ್ಬರು ಆಲಿಂಗನದಲ್ಲಿದ್ದಾಗ ಚಂದ್ರಕಲಾ ನಿನ್ನ ಹೆಸರೇನು ಅಂತಾ ಕೇಳುತ್ತಾಳೆ. ಆಗ ಅವನು ರಾಮ ಎನ್ನುತ್ತಾನೆ. ಹಾಗಾದರೆ ಮೊದಲೇ ಮೊಬೈಲ್ ಸಂದೇಶದಲ್ಲಿ ರಾಮ ಅಂತಾ ಕಳಿಸಿದ್ದಳಲ್ಲವ್ವ. ಇದು ಬಿಟ್ಟರೇ ಕೆಲವೊಂದು ಕಡೆ ಸೈಲೆಂಟ್ ಡೈಲಾಗ್‌ಗಳು ನಡೆಯುತ್ತಿದ್ದಾಗ ಸುಖಾ ಸುಮ್ಮನೆ ಹಿನ್ನೆಲೆ ಸಂಗೀತದಲ್ಲಿ ಅಬ್ಬರದ ಬಿಟ್ಸ್‌ಗಳು ಬರುತ್ತವೆ. ಆಗ ಕಿವಿಗೆ ಕೇಳಬೇಕಾದ ಮುಖ್ಯವಾದ ಮಾತುಗಳೇ ಗೌನವಾಗಿ ಬಿಡುತ್ತವೆ(ಇದು ನನಗೆ ಅನಿಸಿದ ತಾಂತ್ರಿಕ ದೋಷ). ಈ ರೀತಿ ಡಬ್ಬಿಂಗ್ ತೊಡಕುಗಳು ಬಹುತೇಕ ಕಡೆ ಕಂಡು ಬರುತ್ತವೆ. ಚಿರಂಜೀವಿ ಸರ್ಜಾಗಿಲ್ಲ ಹೊಡೆದಾಟಕ್ಕಿಂತ ನಗೆ ಲೀಲೆಯ ಪಾತ್ರ. ಸುಳ್ಳಿನ ಮೇಲೆ ಸುಳ್ಳು ಸೃಷ್ಟಿಸುತ್ತಾ ಕೊನೆಗೆ ಪೇಚಿಗೆ ಸಿಲುಕಿಯೂ ತನ್ನ ಪ್ರೀತಿಯನ್ನು ಉಳಿಸಿಕೊಳ್ಳುತ್ತಾನೆ. ಚಿತ್ರದ ಪಂಚಲೈನ್‌ದಲ್ಲಿರುವಂತೆ ಇದು ಪಕ್ಕ ಎಂಟರ್‌ಟ್ರೇನ್‌ಮೆಂಟ್ ಚಿತ್ರ. ಚಿತ್ರಕ್ಕೆ ಶ್ರೀಮಂತಿಕೆ ಇರಲಿ ಎನ್ನುವ ಕಾರಣಕ್ಕಾಗಿ ಮಾತ್ರ ಹಾಡುಗಳಿಗಾಗಿ ವಿದೇಶಿ ಶೂಟಿಂಗ್ ಮಾಡಲಾಗಿದೆ.

No comments:

Post a Comment

ವರ್ಷದ ಕೊನೆ ದಿನ ಕರೆಂಟ್ ಕಟ್

 ವಿದ್ಯುತ ವ್ಯತ್ಯಯ ಧಾರವಾಡ (ಕರ್ನಾಟಕ ವಾರ್ತೆ) ಡಿ.28:* ಹೆಸ್ಕಾಂನ 110 ಕೆವಿ. ಯು.ಎ.ಎಸ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ...