Friday, October 9, 2015

ಭರಪುರ ಕಾಮಿಡಿಯ ಸಿಂಗ್ ಇಸ್ ಬ್ಲಿಂಗ್

ಆರಂಭದಿಂದ ಕೊನೆಯವರೆಗೂ ಭರಪುರ ಮನರಂಜನೆ ನೀಡುವ ಸಿಂಗ್ ಇಸ್ ಬ್ಲಿಂಗ್ ಸಂಪೂರ್ಣ ಹಾಸ್ಯಮಯ ಚಿತ್ರವಾಗಿದ್ದರೂ ತಾಯಿಯನ್ನು ಕಳೆದುಕೊಂಡ ಮಗಳ ಹುಡುಕಾಟದ ತೋಳಲಾಟ(ಯಾಮಿ ಜ್ಯಾಕ್ಸನ್-ಸಾರಾ ಪಾತ್ರ); ತಂದೆಯಿಂದ ಸದಾ ಬೈಸಿಕೊಳ್ಳುವ ಉಂಡಾಂಡಿ ಗುಂಡ ಮಗನ (ಅಕ್ಷಯಕುಮಾರ-ರಫ್ತಾರ ಸಿಂಗ್ ಪಾತ್ರ)ಪುಂಡಾಟಿಕೆ... ಡಾನ್‌ಗಳ ಅಬ್ಬರದ ಮಧ್ಯೆಯೂ ನಗೆ ಉಕ್ಕಿಸುವ ಸನ್ನಿವೇಶಗಳಿಂದಾಗಿ ಕೊಟ್ಟ ಹಣಕ್ಕೆ ಮೋಸವಿಲ್ಲದ ಚಿತ್ರ. ಪ್ರಭುದೇವ ಮತ್ತು ಅಕ್ಷಯಕುಮಾರ ಕ್ಯಾಂಬಿನೇಷನ್ ಸಕ್ಸೆಸ್ ಯಾತ್ರೆ ಈ ಚಿತ್ರದಲ್ಲಿಯೂ ಮುಂದುವರೆದಿದೆ. ಅಕ್ಷಯಕುಮಾರ ಆ್ಯಕ್ಷನ್‌ಗಳಿಗೆ ಶಾಕ್ ನೀಡುವಂತೆ ನಟಿ ಯಾಮಿಯ ಫೈಟಿಂಗ್ ದೃಶ್ಯಗಳು ಚಿತ್ರದಲ್ಲಿವೆ. ಇಲ್ಲಿ ಅಕ್ಷಯಗೆ ಫೈಟಿಂಗ್ ರಿಸ್ಕ್ ಇಲ್ಲದ ಪುಕ್ಕಲ ಪಾತ್ರ. ಹಿಂದಿ ಮತ್ತು ಪಂಜಾಬ್ ಭಾಷೆ ಬಿಟ್ಟರೇ ಬೇರೆ ಭಾಷೆಯೇ ಬರದ ಸರ್ದಾರ್(ರಫ್ತಾರ) ಪಂಜಾಬದಲ್ಲಿ ತಂದೆಯಿಂದ ಬೈಸಿಕೊಂಡು, ತಂದೆಯ ಸ್ನೇಹಿತನ ಬಳಿ ಕೆಲಸಕ್ಕಾಗಿ ಗೋವಾಗೆ ಬರುತ್ತಾನೆ. ಮೂಲ ಭಾರತೀಯಳಾದರೂ ಬೆಳದಿರುವುದೆಲ್ಲವೂ ರುಮೇನಿಯಾ ದೇಶದಲ್ಲಿಯೇ ಆಗಿದ್ದರಿಂದ ಇಂಗ್ಲಿಷ ಬಿಟ್ಟರೇ ಬೇರೆ ಭಾಷೆ ಬಾರದ ಸಾರಾ ಗೋವಾಗೆ ತನ್ನ ತಾಯಿಯನ್ನು ಹುಡುಕಿಕೊಂಡು ಬರುತ್ತಾರೆ. ಆಗ ರಫ್ತಾರಗೆ ಸಾರಾ(ರುಮೇನಿಯಾ ಡಾನ್ ಮಗಳು)ಳನ್ನು ಕಾಯುವ ಕೆಲಸ. ಈ ಮಧ್ಯೆ ಇಂಗ್ಲಿಷ ಬಾರದ ಈತ ಹಿಂದಿ ಬಾರದ ಆಕೆಯೊಂದಿಗೆ ಸಂವಹನಕ್ಕಾಗಿ ಭಾಷಾಂತರಿಯನ್ನಾಗಿ ಇಮ್ಲಿ(ಲಾರಾ ದತ್ತ)ಯನ್ನು ನೇಮಿಸಿಕೊಳ್ಳುತ್ತಾರೆ. ಆಗ ಶುರುವಾಗುವ ನಗೆ ಸಭಾಂಷಣೆಗಳು ಹೊಟ್ಟೆ ನೋವು ತರಿಸದೇ ಇರದು. ಸಾರಾ ರಫ್ತಾರ ಬಗ್ಗೆ ಹೊಗಳಿ ಹೇಳುವ ಮಾತುಗಳನ್ನು ಇಮ್ಲಿ ಬೈದು ಭಾಷಾಂತರ ಮಾಡಿ ಹೇಳುತ್ತಾರೆ. ಬೈದು ಹೇಳಿದಾಗ, ಹೊಗಳಿದ್ದಾಳೆಂದು ಹೇಳುವ ಮೂಲಕ ರಫ್ತಾರನನ್ನು ಇಕ್ಕಟ್ಟಿಗೆ ಸಿಲುಕಿಸುತ್ತಾಳೆ. ಸಾರಾಳ ಮೇಲೆ ರುಮೇನಿಯಾದ ಡಾನ್ ಒಬ್ಬ ಕಣ್ಣು ಹಾಕಿರುತ್ತಾನೆ. ಆತನ ಒತ್ತಡಕ್ಕೆ ಮಣಿದು ಅವನೊಂದಿಗೆ ಮದುವೆ ಮಾಡಿಕೊಡಲು ಸಾರಾ ತಂದೆ ಮುಂದಾಗುತ್ತಾನೆ. ಆದರೆ ಆಗ ರಫ್ತಾರ ರುಮೇನಿಯಾಗಿ ಹೋಗಿ ಆ ಡಾನ್‌ನನ್ನು ಮಣಿಸಿ ಸಾರಾಳನ್ನು ಪಡೆದುಕೊಂಡು ಹೇಗೆ ಬರುತ್ತಾನೆ ಎಂಬುದು ಟ್ವಿಸ್ಟ್. ಇತ್ತೀಚೆಗೆ ಬಂದ್ ಅಕ್ಷಯನ ಎಂಟರ್‌ಟ್ರೇನೆಮಂಟ್ ಚಿತ್ರದಂತೆ ಇದೂ ಸಹ ಸಕತ್ ಆಗಿದೆ.

No comments:

Post a Comment

ವರ್ಷದ ಕೊನೆ ದಿನ ಕರೆಂಟ್ ಕಟ್

 ವಿದ್ಯುತ ವ್ಯತ್ಯಯ ಧಾರವಾಡ (ಕರ್ನಾಟಕ ವಾರ್ತೆ) ಡಿ.28:* ಹೆಸ್ಕಾಂನ 110 ಕೆವಿ. ಯು.ಎ.ಎಸ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ...