Wednesday, October 7, 2015

ಐರಾವತ್ ಡೈಲಾಗ್‌ನಲ್ಲಿರುವ ಬಿಲ್ಡಪ್ ಫೋರ್ಸ್ ನಿರೂಪಣೆಯಲ್ಲಿಲ್ಲ

ಮಿಸ್ಟರ್ ಐರಾವತ್ ನೋಡುವಾಗ ನಂಗೆ ಒಂದು ಸಂಶಯ ಬಂತು. ನಾನು ಬಂದಿದ್ದು ಎ.ಪಿ. ಅರ್ಜುನ ಸಿನಿಮಾಗೇನಾ? ಅಂಥಾ... ಕಾರಣ ಇದು ಎ.ಪಿ. ಅರ್ಜುನ ಅವರದೇ ಚಿತ್ರಕಥೆಯ ಸಿನಿಮಾ. ಆದರೆ ಈ ಹಿಂದೆ ನೋಡಿದ ಅದ್ದೂರಿ, ಅಂಬಾರಿ, ರಾಟೆಯ ಅರ್ಜುನ ಇವರೇನಾ ಅನಿಸುತ್ತದೆ. ಕಾರಣ ಮಿಸ್ಟರ್ ಐರಾವತ್ ಸಿನಿಮಾ ಆ ರೀತಿ ಇದೆ. ದರ್ಶನ ಅಭಿಮಾನಿಗಳ ಪಾಲಿಗೆ ಹಬ್ಬದೂಟ ಅನ್ನುವಂತೆಯೂ ಇಲ್ಲ. ಕಾರಣ ಐರಾವತ್‌ನ ಸಂಭಾಷಣೆಗಳಲ್ಲಿ ಬರುವ ಪೋರ್ಸ್‌ಗೆ ತಕ್ಕಂತಹ ಭರ್ಜರಿ ಹೊಡೆದಾಟಗಳು, ಆ್ಯಕ್ಷನ್‌ಗಳೂ ಇಲ್ಲ. ಆರಂಭದಿಂದ ಕೊನೆಯವರೆಗೂ ದರ್ಶನ ಸ್ಕ್ರೀನ್ ಬಿಟ್ಟು ಹೋಗೋದಿಲ್ಲ. ಇಡೀ ಚಿತ್ರವನ್ನು ಐರಾವತ್ ಅಂದ್ರ ದರ್ಶನ ಮತ್ತು ಐರಾವತ್‌ನ ರಾಯಲ್ ಎಲ್‌ಫಿಲ್ಡ್ ಆವರಿಸಿಕೊಂಡು ಬಿಟ್ಟಿದೆ. ಕೇವಲ- ಆರಂಭದಲ್ಲಿ ಸಿಎಂ ಮತ್ತು ಗೃಹಮಂತ್ರಿ ಐರಾವತನ ಅಜ್ಜನನ್ನು ಬೇಟಿಯಾಗಲು ಬಂದಾಗ, ಐರಾವತ ಎಸಿ ಆಫೀಸ್‌ಗೆ ಹೋದಾಗ, ಐರಾವತ ಜೈಲಿಗೆ ಹೋದಾಗ ಪ್ರಕಾಶ ರಾಜ್ ಪೊಲೀಸ್ ಠಾಣೆಗೆ ಬಂದಾಗ, ಪ್ರಕಾಶ ರಾಜ್ ಹದ್ದುಗಳಿಗೆ ಮಾಂಸ ಹಾಕುವಾಗ ಇಂತಿಪ್ಪ ದೃಶ್ಯಗಳಲ್ಲಿ ಮಾತ್ರ ಐರಾವತ್ ಇಲ್ಲ. ಐರಾವತ್ ಒಂದು ಠಾಣೆಗೆ ಸಿಮೀತವಾದ ಪೊಲೀಸ್ ಅಧಿಕಾರಿಯಾಗಿದ್ದರೂ ಪದೇ ಪದೆ ನಾನು ಏನೂ ಅಂತಾ ಸಮಸ್ತ ಕರ್ನಾಟಕಕ್ಕೆ ಗೊತ್ತು. ಕರ್ನಾಟಕದ ಜನರಿಗೆ ಗೊತ್ತು. ಕರ್ನಾಟಕದ ಆಸ್ತಿ ನಾನು. ನಾನು ಕೆಲಸ ಬಿಟ್ಟರೂ ದಿನಕ್ಕೊಂದು ಮನೆಯಲ್ಲಿ ಊಟ ಮಾಡುತ್ತಾ ಹೋದರೆ ಇಡೀ ಜನ್ಮ ಬದುಕಬಹುದು. ಕಾರಣ ಕರ್ನಾಟಕವೇ ನನ್ನನ್ನು ಸಾಕುತ್ತದೆ. ಕರ್ನಾಟಕದ ಮನೆ ಮನೆಗೆ ನಾನು ಗೊತ್ತು.... ಎಂಬಿತ್ಯಾದಿ ಡೈಲಾಗ್‌ಗಳನ್ನು ಕೇಳುವಾಗ ಯಾಕೋ ಬಿಲ್ಡಪ್ ಡೈಲಾಗಳು ಜಾಸ್ತಿ ಆಯ್ತು ಅನಿಸುವಂತಿದೆ. ಚಿತ್ರದ ಆರಂಭದಲ್ಲೊಂದು.. ಆ ಬಳಿಕ ಮಗದೊಂದು.. ಮಧ್ಯೆ ಮಧ್ಯೆ ಸಣ್ಣ ಪುಟ್ಟದ್ದು... ಕೊನೆಗೊಂದು ಹೊಡೆದಾಟ ಬಿಟ್ಟರೇ, ಐರಾವತ್‌ನ ಡೈಲಾಗ್ ಬಿಲ್ಡಪ್ ಫೋರ್ಸ್‌ಗೆ ತಕ್ಕಂತಹ ಫೈಟಿಂಗ್ ದೃಶ್ಯಗಳು ಇಲ್ಲ. ಕೆಲವು ಕಡೆ ಹಾಡು ಈಗ ಬೇಕಿತ್ತಾ!? ಅಂತಾನೂ ಅನಿಸುತ್ತದೆ. ದರ್ಶನ ಸಿನಿಮಾ ಹೇಗೆ ಇರಬೇಕು ಎಂದುಕೊಂಡು ದರ್ಶನ ಫೋರ್ಸ್ ಏನು ಅಂತ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡು ಬರುತ್ತಾರೆಯೋ ಅದೆಲ್ಲವೂ ವಸಿ ಹುಸಿಯಾಗುವುದರಲ್ಲಿ ಎರಡು ಮಾತಿಲ್ಲ. ಈ ಹಿಂದೆ ಸಾಕಷ್ಟು ಚಿತ್ರಗಳು ಕಥೆ ಮತ್ತು ನಿರ್ದೇಶನದಲ್ಲಿ ಸೋತಿದ್ದರು. ದರ್ಶನ ಅಭಿನಯ, ಹಿರೋಯಿಸ್‌ಂ ಹಾಗೂ ಫೈಟಿಂಗ್‌ಗಳು ಚಿತ್ರವನ್ನು ಓಡಿಸಿದ್ದು ಇದೆ. ಆದರೆ ಅದ್ಯಾವ ಓರ್ವ ಚತುರ ನಿರ್ದೇಶಕ ಈ ಚಿತ್ರದಲ್ಲಿ ಅದ್ಯಾವ್ ಚಮತ್ಕಾರವೂ ಇಲ್ಲ. ಹಾಸ್ಯವೂ ಸಹ ದರ್ಶನ ಸುತ್ತಲೇ ಸುತ್ತುತ್ತದೆ. ಪ್ರಕಾಶ ರಾಜ್ ಕಾಮಿಡಿಯನ್ ಪ್ಲಸ್ ಡಾನ್ ಆಗಿ ಗಮನ ಸೆಳೆಯುತ್ತಾರೆ. ಪ್ರಸಾದನ ಕಲಾವಿದನಿಗೊಂದು ಹ್ಯಾಟ್ಸ್ ಆಪ್: ಅನಂತನಾಗ್ ಮತ್ತು ಸಿತಾರರನ್ನು ವಯೋವೃದ್ಧ ದಂಪತಿಯನ್ನಾಗಿ ಮೇಕಪ್ ಮಾಡಿರುವ ಪ್ರಸಾದನ ಕಲಾವಿದನಿಗೊಂದು ಹ್ಯಾಟ್ಸ್ ಆಪ್ ಹೇಳಲೇಬೇಕು. ಕಾರಣ ಇಳಿವಯಸ್ಸಿನ ಅವರಿಬ್ಬರ ಪಾತ್ರದ ಛಾಯೆ ಅವರ ಮುಖದಲ್ಲಿಯೇ ಕಂಡು ಬಿಡುತ್ತದೆ. ಅಷ್ಟೊಂದು ಪರಿಣಾಮಕಾರಿಯಾಗಿ ಇಬ್ಬರ ಮೇಕಪ್ ಗಮನ ಸೆಳೆಯುತ್ತದೆ.

No comments:

Post a Comment

ವರ್ಷದ ಕೊನೆ ದಿನ ಕರೆಂಟ್ ಕಟ್

 ವಿದ್ಯುತ ವ್ಯತ್ಯಯ ಧಾರವಾಡ (ಕರ್ನಾಟಕ ವಾರ್ತೆ) ಡಿ.28:* ಹೆಸ್ಕಾಂನ 110 ಕೆವಿ. ಯು.ಎ.ಎಸ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ...