Monday, October 26, 2015

ಸಿನಿಮಾ ಹುಚ್ಚು ಮತ್ತು ರಣಧೀರ ಕಾದಂಬರಿ...!

ಬಾಲ್ಯದಿಂದಲೂ ನನ್ನಲ್ಲಿದ್ದ ಸಿನಿಮಾ ಹುಚ್ಚು 6ನೇ ತರಗತಿಯಲ್ಲಿದ್ದಾಗೊಮ್ಮೆ ಪೇಚಿಗೆ ಸಿಲುಕಿಸಿತ್ತು. ಶಾಲೆಯಲ್ಲಿ ಅಪರೂಪಕ್ಕೊಮ್ಮೆ ಮುಖ್ಯೋಪಾಧ್ಯಾಯರ ಕೊಠಡಿಯಲ್ಲಿನ ಕಪಾಟು ತೆಗೆದು(ಆ ಪುಟ್ಟ ಕಪಾಟೇ ಹಳ್ಳಿ ಶಾಲೆಗಳ ಪಾಲಿಗೆ ಗ್ರಂಥಾಲಯ) ಪುಸ್ತಕಗಳನ್ನು ಓದಲು ಕೊಡುತ್ತಿದ್ದರು. ನಮ್ಮ ಕೆ.ಎಂ. ಹಾವಣ್ಣವರ ಗುರುಗಳು ಪ್ರಭಾರ ಮುಖ್ಯೋಪಾಧ್ಯಾಯರಾಗಿದ್ದಾಗ ಅದೊಂದು ಶನಿವಾರ ಆ ಕಪಾಟು ಓಪನ್ ಮಾಡಿಸಿ ಪುಸ್ತಕಗಳನ್ನು ಟೇಬಲ್ ಮೇಲೆ ಹರವಿಕೊಂಡಿದ್ದರು. ಆಗ ನನ್ನ ಕಣ್ಣಿಗೆ ಬಿದ್ದ ಪುಸ್ತಕ ‘ರಣಧೀರ’; ಆದಾಗಲೇ ನಮ್ಮೂರಲ್ಲಿ ಕೆಲ ಯುವಕ ಸಂಘದವರು ಆಗಾಗ ವಿಸಿಪಿ ತರಿಸಿ ತೋರಿಸುತ್ತಿದ್ದ ರಣಧೀರವನ್ನು 50 ಪೈಸೆ ಕೊಟ್ಟು ತುಂಬಾ ಸಲ ನೋಡಿ ಆಗಿತ್ತು. ಹೀಗಾಗಿ ಇದು ಅದೇ ರಣಧೀರನ ಪುಸ್ತಕ ಎಂದುಕೊಂಡು ಗಬಕ್ಕಂತ(ಛಕ್ಕನೆ) ತಗೊಂಡ ಬಿಟ್ಟೆ(ಕವರ್ ಪೇಜ್ ಹರಿದು ಹೋಗಿತ್ತು...!) ರಣಧೀರ ಪುಸ್ತಕವನ್ನು ಕೈ ಚೀಲ(ಪ್ಲಾಸ್ಟಿಕ್‌ನ ಸಿಮೆಂಟ್ ಚೀಲದಿಂದ ಮಾಡಿದ್ದ ಕೈ ಚೀಲವೇ ನಮ್ಮ ಸ್ಕೂಲ್‌ಬ್ಯಾಗ್)ದಲ್ಲಿ ಹಾಕಿಕೊಂಡು ಏನೇನೋ ಕಲ್ಪಿಸಿಕೊಂಡು ಮನಗೆ ಬಂದವನೇ, ಗಡಬಡಿಯಿಂದ(ಅವಸರವಸರವಾಗಿ) ಊಟ ಮಾಡಿ, ಪುಸ್ತಕ ತೆಗೆದು ನೋಡಿದ್ರೆ ಅದು ರಾಜಾ ರಣಧೀರ ಕಂಠೀರವ ಕುರಿತ ಪುಟಾಣಿ ಕಾದಂಬರಿಯಾಗಿತ್ತು...!

No comments:

Post a Comment

ವರ್ಷದ ಕೊನೆ ದಿನ ಕರೆಂಟ್ ಕಟ್

 ವಿದ್ಯುತ ವ್ಯತ್ಯಯ ಧಾರವಾಡ (ಕರ್ನಾಟಕ ವಾರ್ತೆ) ಡಿ.28:* ಹೆಸ್ಕಾಂನ 110 ಕೆವಿ. ಯು.ಎ.ಎಸ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ...