Tuesday, October 6, 2015

ಪುಲಿಯಲ್ಲ ಇದು ಇಲಿ....

ತಮಿಳನಲ್ಲಿ ಪುಲಿ ಅಂದ್ರೆ ಇಲಿನಾ!? ನಿನ್ನೆ ಪುಲಿ ಸಿನಿಮಾ ನೋಡಿದಾಗ ಹೀಗನಿಸಿತು... ಪುಲಿ ಬಗ್ಗೆ ಒಂದೇ ಸಾಲಿನಲ್ಲಿ ಹೇಳೋದಾದ್ರೆ "ಅದ್ಬುತ setಗಳ ದೃಶ್ಯ ವೈಭವ.. ಅಗೋಚರ-ಚಮತ್ಕಾರ ಶಕ್ತಿಗಳ ದಿವ್ಯ ದರ್ಶನ ಆದ್ರೆ ಡಬ್ಬಾ (ಅಡ್ನಾಡಿ) ಡೈರೆಕ್ಷನ್" ಚಿತ್ರವನ್ನು ಒಂದು ರೀತಿ ಬಾಲಿಶವಾಗಿ ಮಾಡಿದಂತೆ ಎನ್ನುವುದಕ್ಕಿಂದ ನಿರ್ದೇಶಕ ಮಹಾಶಯ ಗಂಭೀರತೆಯನ್ನೆ ಮರೆತು ಪಾಪ ನಿರ್ಮಾಪಕರ ಜೇಬು ಖಾಲಿ ಮಾಡಿಸಿದಾನೆ ಅನ್ಸುತ್ತೆ... ಕಥೆ ಚೆನ್ನಾಗಿಯೇ ಇದೆ ಆದ್ರೆ ಕಥೆಯೊಂದಿಗೆ ಜೋಡಣೆಯಾಗಿರುವ ಪುಟ್ಟ ಮನುಷ್ಯರು.., ಮಾತಾಡೋ ಪಕ್ಷಿಗಳು, ಕಪ್ಪೆ ಅಂಡು ನೆಕ್ಕಿದ್ರೆ ದಾರಿ ತೋರಿಸುವ ಉಪಾಯಗಳು ಇವೆಲ್ಲ ಚಿತ್ರದ ಓಟಕ್ಕೆ, ಪ್ರೇಕ್ಷಕರ ಉತ್ಸಾಹಕ್ಕೆ ಮತ್ತು ಚಿತ್ರಕ್ಕೂ ಸಹ ಅಪಾಯಗಳೇ ಆಗಿವೆ.. ವೇತಾಳ ರಾಣಿಯಾಗಿ ಶ್ರೀದೇವಿ ಮತ್ತು ವೇತಾಳ ದಳಪತಿಯಾಗಿ ಸುದೀಪ ಉತ್ತಮ ಅಭಿನಯ ನೀಡಿದ್ದಾರೆ. ಆದ್ರೆ ವಿಜಯ ದಳಪತಿ ದ್ವಿಪಾತ್ರದಲ್ಲಿದ್ದರೂ ಪ್ರೇಕ್ಷಕರ ಹೃದಯ ಗೆದ್ದಿಲ್ಲ.. ಕಾರಣ ಅಷ್ಟೊಂದ ಪರಿಣಾಮಕಾರಿಯಾಗಿ ನಾಯಕತ್ವವೇ ಚಿತ್ರದಲ್ಲಿ ಇಲ್ಲದ ಮೇಲೆ ಇನ್ನೂ ನಾಯಕನಿಗೆಲ್ಲಿಯ ಒತ್ತು.. ಅತ್ತ ಕಾಮಿಡಿಯೂ ಮಾಡಲಾಗದೇ.. ಇತ್ತ ರಾಜ ಮನೆತನಗಳ ಆರ್ಭಟವನದನೂ ತೋರಿಸಲಾಗದೇ ಎರಡರ ಮಧ್ಯೆ ತೋಳಲಾಡಿದ್ದಾರೆ. ನಿರ್ದೇಶಕ ಚಿಂಬು ದೇವನ. ಗ್ರಾಫಿಕ್ಸ್ ಕುಸುರಿ, ಅದ್ಭುತ ಸೆಟಗಳು.. ಅಚ್ಚರಿ ಮೂಡಿಸುವ ಗುಡ್ಡ, ಬೆಟ್ಟಗಳು, ನಿತ್ಯ ಹರಿದ್ವರ್ಣದ ನಿಸರ್ಗದ ನೋಟ ಮಾತ್ರ ಚೆನ್ನಾಗಿದೆ...

No comments:

Post a Comment

ವರ್ಷದ ಕೊನೆ ದಿನ ಕರೆಂಟ್ ಕಟ್

 ವಿದ್ಯುತ ವ್ಯತ್ಯಯ ಧಾರವಾಡ (ಕರ್ನಾಟಕ ವಾರ್ತೆ) ಡಿ.28:* ಹೆಸ್ಕಾಂನ 110 ಕೆವಿ. ಯು.ಎ.ಎಸ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ...