Thursday, October 29, 2015
ವ್ರಸ್ಟ್ ವ್ಯವಸ್ಥೆಯ ಮಧ್ಯದ ಬೆಸ್ಟ್ ಚಿತ್ರ ‘ವಾಸ್ಕೋಡಿಗಾಮಾ’
ವ್ರಸ್ಟ್ ಕಾಲೇಜ್‌ನ್ನು ಬೆಸ್ಟ್ ಮಾಡುವ ಸಂದ್ನಿಗ್ಧ ಪರಿಸ್ಥಿತಿಯಲ್ಲಿ ಪ್ರಾಧ್ಯಾಪಕಿ ಹುದ್ದೆಯಿಂದ ಪ್ರಾಚಾರ್ಯೆಯಾಗಿ ಬಡ್ತಿ ಪಡೆದ ಶಾಂತಿಯ ತೋಳಲಾಟ ಒಂದೇಡೆಯಾದರೆ. ಆ ಶಾಂತಿಯ ಪ್ರೀತಿಯ ಕ್ರಾಂತಿಯಲ್ಲಿ ಬೀಳುವ ಅದೇ ಕಾಲೇಜ್ ಪ್ರಾಧ್ಯಾಪಕ ವಾಸ್ಕೋಡಿಗಾಮಾ ಅಲಿಯಾಸ್ ವಾಸು ಡಿ. ಗಾಮನಹಳ್ಳಿ, ಆ ಕಾಲೇಜ್‌ನ ಅಧೋಗತಿಯ ಮೂಲ. ಕೊನೆಗೆ ಆತನೇ ಕಾಲೇಜೊಂದಕ್ಕಲ್ಲ. ಇಡೀ ಶಿಕ್ಷಣ ವ್ಯವಸ್ಥೆಗೆ ಪರಿವರ್ತನೆಯ ದೀಪವಾಗಿ ಗೋಚರಿಸುತ್ತಾನೆ.
ಇಂತಹ ಕಥೆಯುಳ್ಳ ವಾಸ್ಕೋಡಿಗಾಮಾ ಚಿತ್ರವನ್ನು ಕಿಶೋರ ಸಂಪೂರ್ಣವಾಗಿ ಆವರಿಸಿಕೊಂಡಂತೆ ಕಂಡು ಬಂದರೂ, ಕಾಲೇಜ್ ಕ್ಯಾಂಪಸ್‌ನ್ನು ವಿಭಿನ್ನ ಎಳೆಯೊಂದಿಗೆ ತೋರಿಸಿದ್ದಾರೆ ನಿರ್ದೇಶಕ ಮಧುಚಂದ್ರ. ಎಲ್ಲಿಯೂ ಬೇಸರವಾಗದಂತೆ ಹಾಸ್ಯಮಯವಾಗಿಯೇ ಚಿತ್ರವನ್ನು ನಿರ್ದೇಶಿಸಿದ್ದರೂ ಕೊನೆಗೆ ಬರುವ ಸಂದೇಶವನ್ನು ಮಾತ್ರ ಮೆಚ್ಚುವಂತಹುದೆ...!
ಇಂದು ವಿದ್ಯಾರ್ಥಿಗಳು ಕಾಲೇಜ್ ಕ್ಲಾಸ್‌ರೂಮ್‌ನಲ್ಲಿ ಇಷ್ಟಪಟ್ಟು ಕುಳಿತುಕೊಳ್ಳಬೇಕು ಹೊರತು ಕಷ್ಟಪಟ್ಟಲ್ಲ. ಆ ರೀತಿಯಲ್ಲಿ ನಮ್ಮ ಪಠ್ಯ ಕ್ರಮ ಇರಬೇಕು. ಬದಲಾವಣೆಗೆ ತಕ್ಕಂತೆ ಪ್ರಾಧ್ಯಾಪಕರೂ ಸಹ ಅಪ್‌ಡೇಟ್ ಆಗಬೇಕು ಎನ್ನುವುದನ್ನು ಆಕರ್ಷಣೀಯ ನಿರೂಪಣೆಯಲ್ಲಿ ಹೇಳಲಾಗಿದೆ. ಇನ್ನು ಪುಸ್ತಕದ ಬದನೆಕಾಯಿಗಿಂತ ಲೋಕದ ಜ್ಞಾನವೇ ಮುಖ್ಯ, ಪದವಿ, ಪಿಎಚ್‌ಡಿಗಳಿಗಿಂತ ನಮ್ಮ ಆಸಕ್ತಿಯ ವಿಷಯಗಳಲ್ಲಿ ಬೆಳೆದು ದೊಡ್ಡವರಾಗಬೇಕು. ಅದೇ ಜೀವನ ಸಾಧನೆಯ ಮುಖ್ಯ ಗುರಿ ಹೊರತು ಕಾಲೇಜ್ ಪಠ್ಯದ ಮಾರ್ಕ್ಸ್‌ಗಳಲ್ಲ ಎನ್ನುವುದನ್ನು ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ.
ಪೂರ್ಣಚಂದ್ರ ತೇಜಸ್ವಿ ಸಂಗೀತದಲ್ಲಿ ಹಾಡುಗಳು ಚಿತ್ರದ ಉತ್ಸಾಹಕ್ಕೆ ಒಂದು ತೇಜಸ್ಸು ನೀಡುವಂತಿವೆ. ಸುಚೇಂದ್ರಪ್ರಸಾದ ಎಂದಿನಂತೆ ಪ್ರಾಚಾರ್ಯರ ಪಾತ್ರದಲ್ಲಿ ಇಷ್ಟವಾಗುತ್ತಾರೆ. ಮಲಿಯಾಳಿ ಬೆಡಗಿ ಪಾರ್ವತಿ ನಾಯರ್ ಕಿಶೋರಗೆ ಒಳ್ಳೆ ಜಗಳಬಂಧಿ ಜೋಡಿ.
ಆದರೆ ಕೆಲವು ಕಡೆ ಪ್ರಿಂಟ್ ಸ್ಟ್ರಕ್ ಆದಂತೆ ಕಂಡು ಬಂತು(ನಾನು ಸಿನಿಮಾ ನೋಡೋಕೆ ಹೋದಾಗ ತಾಂತ್ರಿಕ ದೋಷವಿತ್ತೋ ಅಥವಾ ಮೂಲದಲ್ಲಿಯೇ ಹಾಗಿದೆಯೋ ಗೊತ್ತಿಲ್ಲ...!?) ಕಿಶೋರ ವಿದ್ಯಾರ್ಥಿ ಬೈಕ್‌ನಲ್ಲಿ ಕಾಲೇಜ್‌ಗೆ ಎಂಟ್ರಿ ಕೊಡುವಾಗ. ಕೊನೆಯಲ್ಲಿ ಕಿಶೋರನನ್ನು ಪಾಲಕರು ತಳಿಸುವಾಗ, ವಿದ್ಯಾರ್ಥಿಗಳು ತಡೆಯಲು ಹೋದಾಗ ಹೀಗೆ ಮೂರ‌್ನಾಲ್ಕು ಕಡೆ ವೇಗದ ಮತ್ತು ಘರ್ಷಣೆಯ ಸನ್ನಿವೇಶಗಳಲ್ಲಿ ದೃಶ್ಯ ನಿಂತು... ನಿಂತು ಬಂದಂತೆ ಇದೆ. ಅದು ಸಂಕಲನದ ವೈಫಲ್ಯವಾ ಗೊತ್ತಿಲ್ಲ. ಅಥವಾ ನಾನು ಚಿತ್ರ ನೋಡಲು ಹೋಗಿದ್ದ ಚಿತ್ರಮಂದಿರದ್ದಾ ಗೊತ್ತಿಲ್ಲ!?
ಇದೊಂದು ಬಿಟ್ಟರೇ ಚಿತ್ರ ಸಂಪೂರ್ಣ ಸೂಪರ್. ಕಾಲೇಜ್ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಮತ್ತು ಪಾಲಕರು ಕೂಡಿಯೇ ನೋಡಬೇಕಾದ ಸಿನಿಮಾ.
Subscribe to:
Post Comments (Atom)
ಮನೆಪಾಠ ಕೇಂದ್ರಗಳಿಗೆ ಬ್ಯಾಗ್ ಮತ್ತು ಬುಕ್ಸ್ ವಿತರಣೆ
Dharwad: ಗುರುಕುಲ ಪದ್ಧತಿಯಂತೆ ಒಬ್ಬರೇ ಶಿಕ್ಷಕರಿಂದ ನಡೆಸುವ ಈ ನವೀನ ಪ್ರಯೋಗವೇ ಏಕ ಶಿಕ್ಷಕ ವಿದ್ಯಾಲಯ ಅಂದರೆ ಮನೆಪಾಠ ಕೇಂದ್ರ ಎಂದು ವನವಾಸಿ ಕಲ್ಯಾಣ ಕರ್ನಾಟಕ ಸಂಸ್ಥ...
.jpeg)
-
ನನಗೆ ಇರುವ ಚಟಗಳಲ್ಲಿ ಟಿವಿ ನೋಡುವುದು ದೊಡ್ಡ ಚಟ. ಹೀಗಾಗಿ ಮನೆ ಹಾಗೂ ಕಚೇರಿಯಲ್ಲಿದ್ದರೂ ಸಹ ಸದಾ ಟಿವಿಯನ್ನು ನೋಡುತ್ತಲೇ ಇರುತ್ತೇನೆ. ಇನ್ನು ಹೊರಗಡೆ ಸುತ್ತಾಡುವಾಗಲೂ ...
-
ಬೆಳಗಾವಿ, ೧- ಹಣದುಬ್ಬರ ಹಾಗೂ ಬೆಲೆ ಏರಿಕೆ ಮಧ್ಯೆ ಈಗ ಬೆಳಗಾವಿ ನಗರ ಹಾಗೂ ಜಿಲ್ಲೆಯಲ್ಲಿ ಚಿಲ್ಲರೆ ನಾಣ್ಯಗಳ ಅಭಾವ ಸೃಷ್ಟಿಯಾಗಿದ್ದು, ಇದನ್ನು ಕೆಲವರು ದಂಧೆಯನ್ನಾಗಿಯೂ ...
-
ರಾಜ್ಯದಲ್ಲಿ ತನ್ನ ಖಜಾನೆ ತುಂಬಿಸಿಕೊಳ್ಳುತ್ತಿರುವ ಮಲ್ಟಿಪ್ಲೆಕ್ಸ್ಗಳು, ಒಂದಲ್ಲ ಒಂದು ರೀತಿಯಲ್ಲಿ ಕನ್ನಡ ಚಿತ್ರಗಳಿಗೆ ಧಕ್ಕೆ ಮಾಡುತ್ತಲೇ ಬರುತ್ತಿವೆ. ಕನ್ನಡ ಸಿನಿಮಾ...
No comments:
Post a Comment