Sunday, August 2, 2015

ಸದಾ ಸ್ನೇಹಜೀವಿ.

ಇವತ್ತು...ಸ್ನೇಹಿತರ ದಿನವಂತೆ... ಅಂದ್ರೆ ಉಳಿದ ದಿನಗಳು ಸ್ನೇಹಿತರಿಗಾಗಿ ಇಲ್ಲವೇ... ಸ್ನೇಹಿತರ ದಿನಗಳು ಅಲ್ಲವೇ... ಇವತ್ತೊಂದು ದಿನ ಮಾತ್ರವೇ ಸ್ನೇಹ ಅನ್ಯೋನ್ಯವಾಗಿರುತ್ತದೆಯೇ...? ವಿಷ್ ಮಾಡಿದರೇ ಮಾತ್ರವೇ ನಿಜವಾದ ಸ್ನೇಹವೇ...? ಇಂತಹ ತಹರೇವಾರಿ ಪ್ರಶ್ನೆಗಳು ಗೊಂದಲ ಮೂಡಿಸಲು ಕಾರಣ.. ಬೆಳಗ್ಗೆಯಿಂದ ವಾಟ್ಸಾಪ್‌ನಲ್ಲಿ ನಾನ್ ಸಾಪ್ಟ್ ಆಗಿ ಬರುತ್ತಿರುವ ಸಂದೇಶಗಳು. ಫೇಸ್‌ಬುಕ್‌ಗಳಲ್ಲಿ ಬಿಟ್ಟು ಬಿಡದೇ ಆಗುತ್ತಿರುವ ಟ್ಯಾಗ್‌ಗಳು... ಕೆಲವರಿಗೆ ಧನ್ಯವಾದ ಹೇಳಿದೆ. ಇನ್ನೂ ಕೆಲವರಿಗೆ ಕೆಲಸದ ನಿಮಿತ್ತ ರಿಪ್ಲಾೃ ಮಾಡಲು ಆಗಲೇ ಇಲ್ಲ. ಆಗ ಸ್ನೇಹಿತರೊಬ್ಬರು ಕರೆ ಮಾಡಿ, ಧಮಕಿಯೇ ಕೊಟ್ಟಂತೆ ಉಗಿದು ಬಿಟ್ಟಳು. ‘ಏನಯ್ಯ ನೀನು ಹೆಂಥಾ ಫ್ರೆಂಡು ಇವತ್ತು ಸ್ನೇಹಿತರ ದಿನ ಒಂದು ವಿಷ್ ಮಾಡುವುದೂ ಗೊತ್ತಿಲ್ಲವೇ..’ ಎಂದೆಲ್ಲಾ... ಅಂದ್ರೆ ಇವತ್ತು ವಿಷ್ ಮಾಡಿದರೇ ಮಾತ್ರವೇ ನಾನು ನೀನು ಸ್ನೇಹಿತರೆ...ಉಳಿದೆಲ್ಲ ಆ ಕಷ್ಟದ ದಿನಗಳಲ್ಲಿಯೂ ಪರಸ್ಪರ ನೋವು ಅನುಭವಿಸಿ ಬೆಳೆದ ಆ ಕ್ಷಣಗಳಲ್ಲಿ ಸ್ನೇಹಿತರೇ ಆಗಿರಲಿಲ್ಲವೇ ಎನ್ನುತ್ತಿರುವಾಗಲೇ ಸಿಟುಕುಮಾರಿ ಸ್ನೇಹಿತ ಫೋನ್ ಕಟ್ ಮಾಡಿದ್ದರ. ಪ್ರತಿದಿನ ಪ್ರತಿಕ್ಷಣ ಸ್ನೇಹಿತರ ಒಳಿತನ್ನೇ ಧ್ಯಾನಿಸುವಾಗ... ಸ್ನೇಹಿತರಿಗಾಗಿಯೇ ಹಲವು ದುಃಖಗಳನ್ನು ಸಹಿಸಿಕೊಳ್ಳುವಾಗ... ಹಲವು ತ್ಯಾಗ, ಸಾಹಸಗಳನ್ನು ಮಾಡುವಾಗ... ನಮ್ಮ ಖುಷಿಗಳೆಲ್ಲವನ್ನೂ ಮರೆತು ಸ್ನೇಹಿತರ ಖುಷಿಯಲ್ಲಿ ನಮ್ಮ ಖುಷಿಯನ್ನು ಕಾಣುತ್ತಿರುವಾಗ.... ಯಾವುದೋ ಸಣ್ಣಪುಟ್ಟ ವಿಷಯಗಳಿಗಾಗಿ ಮಾತು, ಮೆಸೇಜ್ ಮತ್ತು ಫೋನ್ ಕಾಲ್‌ಗಳೆಲ್ಲವೂ ಕಟ್ ಆದಾಗ... ಕೇವಲ ದೇಹವೊಂದು ಆಸ್ಥಿಪಂಜರವಾಗಿದ್ದುಕೊಂಡು ಜೀವ ಇದ್ದರೂ ಉಸಿರಾಟದ ಕ್ರಿಯೆಗೆ ಮಾತ್ರ ಎನ್ನುವಂತೆ ಮರುಗುತ್ತಾ ಮರಣ ಶಯ್ಯೆಯಲ್ಲಿರುವಾಗ... ಈ ಎಲ್ಲವುಗಳಲ್ಲಿ ಸ್ನೇಹ ಇದ್ದೇ ಇರುತ್ತದೆ ಅಲ್ಲವೇ... ಮತ್ತೆ ಆಗ ಎಲ್ಲವೂ ಇಲ್ಲದ ವಿಶೇಷತೆ ಯಾಕೆ ಈ ಫ್ರೆಂಡಶಿಪ್ ಡೇಗೆ ಬೇಕು. ಅದೇನೋ ಯಾರೋ ಒಂದು ದಿನಾಚರಣೆ ಮಾಡಿದ್ದಾರೆ.... ವರ್ಷಕ್ಕೊಮ್ಮೆಯಾದರೂ ಸ್ನೇಹಿತರನ್ನು ಭೇಟಿಯಾಗಲು ಬಿಡುವು ಮಾಡಿಕೊಳ್ಳುವ ಒತ್ತಡವಾದಿಗಳು(ಒತ್ತಡದಲ್ಲಿ ಕೆಲಸ ಮಾಡುವವರು) ಈ ದಿನಾಚರಣೆಯನ್ನು ತಂದಿರಬೇಕು.. ಆದರೆ ನಾವು ಒತ್ತಡವಾದಿಗಳಾಗಿದ್ದರೂ... ಸದಾ ಸ್ನೇಹವಾದಿಗಳಾಗಿರುತ್ತೇವೆ(ಅದು ನಮ್ಮ ಸ್ನೇಹಿತರಿಗೇ ಗೊತ್ತು)... ಹೀಗಿರುವಾಗ.. ಏಕೆ ಈ ಒಂದು ದಿನ ವಿಷ್ ಮಾಡಲಿಲ್ಲ ಎಂದು ಕೆಲವರು ಕೊರಗುವುದು. ಸಿಟ್ಟು ಮಾಡಿಕೊಳ್ಳುವುದು ನಾ ಕಾಣೆ.... ನಂಗೆ ಈ ದಿನಾಚರಣೆಗಳಲ್ಲಿ ನಂಬಿಕೆಯಿಲ್ಲ..... ಆದರೆ ಸ್ನೇಹಿತರಿಲ್ಲದೇ ನನ್ನ ಜೀವನ ಮತ್ತು ಜೀವವೂ ಇಲ್ಲ.. ಹೀಗಾಗಿ ನಾನು ವಿಷ್ ಮಾಡಿಲ್ಲ ಎಂದುಕೊಂಡು.. ಯಾರೂ ಬೈಯಬೇಡಿ.... ಫ್ರೆಂಡಶಿಪ್ ಡೇ ಆಚರಿಸಿಕೊಳ್ಳುವ ಎಲ್ಲರಿಗೂ ಶುಭಾಶಯಗಳು... ಸದಾ ಸ್ನೇಹಜೀವಿ. ಡಿವಿಕೆ...

No comments:

Post a Comment

ಮನೆಪಾಠ ಕೇಂದ್ರಗಳಿಗೆ ಬ್ಯಾಗ್ ಮತ್ತು ಬುಕ್ಸ್ ವಿತರಣೆ

Dharwad: ಗುರುಕುಲ ಪದ್ಧತಿಯಂತೆ ಒಬ್ಬರೇ ಶಿಕ್ಷಕರಿಂದ ನಡೆಸುವ ಈ ನವೀನ ಪ್ರಯೋಗವೇ ಏಕ ಶಿಕ್ಷಕ ವಿದ್ಯಾಲಯ ಅಂದರೆ ಮನೆಪಾಠ ಕೇಂದ್ರ ಎಂದು ವನವಾಸಿ ಕಲ್ಯಾಣ ಕರ್ನಾಟಕ ಸಂಸ್ಥ...