Saturday, February 22, 2014

ಸವಾಯಿ ಗಂಧರ್ವ ಹಾಲ್ ಮರಿಬ್ಯಾಡ್ರೋ....

ಅದ್ಯಾಕೋ ಏನೋ ಗೊತ್ತಿಲ್ಲ. ಹುಬ್ಬಳ್ಳಿಯ ಸವಾಯಿ ಗಂಧರ್ವ ಕಲಾಮಂದಿರ ಹೊಸಾದು ಮಾಡ್ತೇನ್ ಅಂತ ಹೇಳಿ ಡಿಸಿ ಸಾಹೇಬ್ ಅದಕ್ಕ ಕೀಲಿ ಜಡೆದ್ಯಾಗಿನಿಂದ ಬೇರೆ ಕಡೆ ಎಲ್ಲಿಯೂ ಸಂಗೀತಾ ಕೇಳಾಕ ಮನಸ ಬರಾತಿಲ್ಲ. ಒಂದ ರೀತಿ ಮನಸಿಗೆ ಬ್ಯಾನಿ ಆಗೇ ಹೋಗೇತಿ. ಅದೇನ್ ಗೊತ್ತಿಲ್ಲ. ಇಲ್ಲಿ ಹೇಂಥಾ ಬಾಲ ಕಲಾವಿದ, ಅದ್ ಪಹೀಲಾ ಸಲಾ ಸ್ಟೇಜ್ ಏರೋ ಕಲಾವಿದರ ಗಾಯನಾನೂ ಕೇಳೋಕ ಮನಸ್ಸ ಬರುತಿತ್ತ. ಬರ‌್ಯಾಕ್‌ನೂ ಛಲೋ ಅನಸತಿತ್ತು. ಸವಾಯಿ ಗಂಧರ್ವ ಹಾಲ್‌ನ್ಯಾಗ್ ಕಾರ್ಯಕ್ರಮ ಕೇಳಿ, ಭರತನಾಟ್ಯ ನೋಡಿ ರಿಪೋರ್ಟಿಂಗ್ ಮಾಡೋದು ಅಂದ್ರ ಒಂದು ನಮೂನಿ ಥ್ರೀಲ್ ಆಗತಿತ್ತ. ಅದರ ಹಿಂದ ಒಂದಿಷ್ಟು ಬ್ಯಾರೇನೂ ಗ್ಲುಕೋಸ್ ಇತ್ತ ಬಿಡ್ರಿ. ಆದರೂ ಸವಾಯಿ ಗಂಧರ್ವ ಹಾಲ್ ಅಂತೂ ಸಂಗೀತಗಾರರು, ನೃತ್ಯಗಾರರ ಪಾಲಿಗೆ ಒಂದ ನಮೂನಿ ಸರ್ವಸ್ವ ಇದ್ದಹಂಗ. ಆದರೆ ಇತ್ತೀಚೆಗೆ ಸಂಗೀತದ ಗಂಧ ಗಾಳಿನೂ ಗೊತ್ತಿಲ್ಲದ ಜಿಲ್ಲಾಡಳಿತ ಅದಕ್ಕ ಕೀಲಿ ಹಾಕೇತಿ. ಇತ್ತ ಕನ್ನಡ ಭವನಾನೂ ಸಿಗಾತೀಲ್ಲ. ಅತ್ತ ಸಮ್ಮೇಳನ ಭವನಾನೂ ಸದ್ದಿಲ್ಲ. ಸೆಪ್ಟಂಬರ್‌ದಾಗನ್ ನವೀಕರಣ ಮಾಡ್ತೇವಿ ಅಂತಾ ಡಿಸಿ ಸಾಹೇಬ್ರು ಅದಕ್ಕ ಕೀಲಿ ಹಾಕ್ಯಾರಾ. ಆಗ ನಾನು ಒಂದು ವರದಿ ಮಾಡಿದ್ದೆ. ಫೋನ್ಯಾಗ್ ಮಾತಾಡಿದ್ದ ಡಿಸಿ ಸಾಹೇಬ್ರು. ಅದಕ್ಕಾಗಿ ಟೆಂಡರ್ ಕರೀದೇವು. ದೌಡ್ ಕೆಲಸ ಶುರು ಮಾಡ್ತೇವ್ ಅಂದ್ರೂ ಟೆಂಡರ್ ಸುದ್ದೀನ ಇಲ್ಲ. ಇತ್ತ ಕೀಲಿ ಹಾಕ್ಕೊಂಡಿರೋ ಸವಾಯಿ ಗಂಧರ್ವ ಹಾಲ್ ಧೂಳು ತಿಂದು ಹೋಗೈತಿ. ಆ ಧೂಳಿನ ವಾಸನೆ ಸಂಜಿ ಕಡೆ ಜಿಮಖಾನ್ ಗ್ರೌಂಡ್‌ಗೆ ವಾಕ್ ಮಾಡಾಕ್ ಹೋದ್ರ ಮೂಗಿಗೆ ಬಡ್ಯಾಕತ್ತೈತಿ. ಇಷ್ಟೆಲ್ಲಾ ಆದ್ರೂನು ಜಿಲ್ಲಾಡಳಿತಕ್ಕ ಚುರುಕು ಮುಟ್ಟಿಸುವ ಕೆಲಸ ಯಾವ ರಾಜಕಾರಣಿನೂ ಮಾಡ್ತಾ ಇಲ್ಲ. ರಾಜಕಾರಣಿಗಳಂತೂ ಲೋಕಸಭಾ ಚುನಾವಣೆದಾಗ ಬ್ಯುಸಿ ಅದಾವ. ಮೊದಲ ಅವಕ್ಕ... ಸಂಗೀತದ ಸ್ವಾದಾ ಇರೋದಿಲ್ಲ. ಜನಾನೂ ಹಿಂಗ್ ಆದ್ರ ಹೆಂಗ್ ಇನ್ನ... ಒಂದಿಷ್ಟು ರೊಚ್ಚಿಗೇಳಬೇಕಾಗೈತಿ... ನಮಗೂ ಸುದ್ದಿ ಬರದ್.. ಬರದ್.. ಸಾಕಾಗಿ ಹೋತು.... ಈ ಹಾಲ್ ಬಂದ್ ಆಗಿದಕ್ಕ ಇತ್ತೀಚೆಗೆ ಉತ್ತರ ಕನ್ನಡ ಆರ್ಯ ವೈಶ್ಯ ಕಲ್ಯಾಣ ಮಂಟಪ, ವಾಸವಿ ಮಹಲ್ ಕಲ್ಯಾಣ ಮಂಟಪದಾಗ ನೃತ್ಯ, ಗಾಯನ ಕಾರ್ಯಕ್ರಮ ಆದೂ ಖರೇ ಅಲ್ಲಿ ಯಾಕೋ ಏನೋ ಕಳಾನ ಬರಲಿಲ್ಲ. ದೊಡ್ಡ ಕಲಾವಿದರ ಕಾರ್ಯಕ್ರಮನೂ ಬೇರೆ ಕಡೆ ಏನೂ ಗುಂಗ್ ಹಿಡಸಾಕತ್ತಿಲ್ಲ. ಸವಾಯಿ ಗಂಧರ್ವ ಹಾಲ್ ತುಂಬಾ ಹಳೆದಾಗಿದ್ರೂ ಅಲ್ಲಿ ಶಬ್ದ ಗ್ರಹಿಕೆಯ ತಂತ್ರಜ್ಞಾನ ಈಗಿನ ಆಧುನಿಕ ತಂತ್ರಜ್ಞಾನಕ್ಕೆ ಸೆಡ್ಡು ಹೊಡೋಹಂಗ್ ಐತಿ, ಇನ್ನು ವೇದಿಕೆ, ಪ್ರೇಕ್ಷಕರ ಗ್ಯಾಲರಿಯೂ ಹಂಗ್...ಇದನ್ನು ಉಳಿಸಿಕೊಳ್ಳಬೇಕ್ರೋ ಮಾರಾಯ್ಯಗೋಳ್ರಾೃ...

No comments:

Post a Comment

ವರ್ಷದ ಕೊನೆ ದಿನ ಕರೆಂಟ್ ಕಟ್

 ವಿದ್ಯುತ ವ್ಯತ್ಯಯ ಧಾರವಾಡ (ಕರ್ನಾಟಕ ವಾರ್ತೆ) ಡಿ.28:* ಹೆಸ್ಕಾಂನ 110 ಕೆವಿ. ಯು.ಎ.ಎಸ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ...