
2013ರಲ್ಲಿ ನಾನು ನೋಡಿದ ಚಿತ್ರಗಳಿಗೆ ಲೆಕ್ಕವಿಲ್ಲ. ನೂರಾರೂ ಎನ್ನಬಹುದೇನೋ. ಹುಬ್ಬಳ್ಳಿಯಲ್ಲಿ ಬಿಡುಗಡೆಗೊಂಡ ಚಿತ್ರಗಳಲ್ಲಿ ಒಂದು ಹತ್ತಿಪ್ಪತ್ತು ಬಿಟ್ಟರೇ ಉಳಿದೆಲ್ಲವೂ ಸ್ವಾಹಾ. ಅದರೊಂದಿಗೆ ನನ್ನದೇ ಪುಟ್ಟ ಟಾಕೀಸ್ ಎಂದು ನಾನು ಕರೆದುಕೊಳ್ಳುವ ರೂಮ್‌ನಲ್ಲಿ ದಿನಕ್ಕೆ ಒಂದರಂತೆ, ಆಗಾಗ ಗ್ಯಾಪ್ ಸೇರಿ ಲೆಕ್ಕ ಹಾಕಿದರೂ 350ರಷ್ಟಾದರೂ ಆಗುತ್ತವೆ. ಆದರೆ ರಜೆ ಇದ್ದಾಗ ಒಂದೇ ದಿನ 3-4 ಚಿತ್ರಗಳನ್ನೂ ನುಂಗಿ ಬಿಟ್ಟಿದ್ದೇನೆ.
ಈ ವರ್ಷ ಅತಿ ಹೆಚ್ಚು ಸಲ ನೋಡಿಸಿಕೊಂಡಿದ್ದು ನನ್ನ ಆಲ್ ಟೈಮ್ ಫೇವರೇಟ್ ಮರಾಠಿಯ ‘ನಟರಂಗ’ ಈ ವರ್ಷ ಅದನ್ನು 51 ಸಲ ನೋಡುವ ಮೂಲಕ ದೊಡ್ಡ ಹುಚ್ಚನಾಗಿ ಬಿಟ್ಟೆ.
ಈ ವರ್ಷ ತುಂಬಾ ನೋವು ತಂದ ಸಂಗತಿ ಸ್ನೇಹಿತ ವಿನೋದ ಖನದಾಳಿ ತನ್ನ ನಿರ್ದೇಶನದ ‘ನೆರಳು’ ಚಿತ್ರ ಬಿಡುಗಡೆಗೂ ಮುಂಚೆ ನಮ್ಮನ್ನೆಲ್ಲಾ ಅಗಲಿದ್ದು ಹಾಗೂ ಆತನ ಚಿತ್ರವನ್ನೂ ಇನ್ನೂ ನೋಡಲು ಆಗದೇ ಇರುವುದು. ಉತ್ತಮ ಚಿತ್ರವಾಗಿದ್ದರೂ ಅದಕ್ಕೆ ಪ್ರೋತ್ಸಾಹ ಸಿಗಲಿಲ್ಲ.

ಉಳಿದಂತೆ ನನ್ನ ಮನಸಿಗೆ ಹಿಡಿಸಿದ ಈ ವರ್ಷದ ಚಿತ್ರಗಳಲ್ಲಿ ನಮ್ಮ ಗುರುಪ್ರಸಾದರ ‘ಡೈರೆಕ್ಟರ್ ಸ್ಪೇಷಲ್’ಗೆ ಮೊದಲ ಸ್ಥಾನ. ಉಳಿದಂತೆ ‘ಜಟ್ಟ’, 6-5=2, ಚಾರ್‌ಮಿನಾರ, ಮೈನಾ, ಲೂಸಿಯಾ, ದ್ಯಾವ್ರೆ, ಭಾರತಸ್ಟೋರ್ಸ್ ನನ್ನ ಟಾಪ್‌ಗಳು. ರಿಮೇಕ್‌ಗಳಲ್ಲಿ ಕೇಸ್ ನಂ. 18/9 ಒದೇ.
ಮರಾಠಿಯಲ್ಲಿ ‘ದುನಿಯಾದಾರಿ’ ಮೊದಲ ಸ್ಥಾನದಲ್ಲಿ. ನಂತರದಲ್ಲಿ ಪ್ರೇಮಾಚಿ ಗೋಷ್ಠ. ಉಳಿದಂತೆ ಸಿಡಿ ಹಾಕಿಕೊಂಡು ಏನಿಲ್ಲವೆಂದರೂ 35 ಮರಾಠಿ ಚಿತ್ರಗಳನ್ನು ನೋಡಿರಬಹುದು.
ಹಿಂದಿಯಲ್ಲಿ ‘ಭಾಗ ಮಿಲ್ಕಾ ಭಾಗ್’ ಮೊದಲ ಸ್ಥಾನದಲ್ಲಿ. ಸ್ಪೇಷಲ್ ಛಬ್ಬಿಸ್. ಟೇಬಲ್ ನಂ. 21, ಮದ್ರಾಸ ಕೆಫೆ ತುಂಬಾ ಹಿಡಿಸಿದ ಚಿತ್ರಗಳು. ಈ ವರ್ಷ ನೋಡಿದ ಅತಿ ದೊಡ್ಡ ಹೊಲಸು ಚಿತ್ರ ‘ಗ್ರಾೃಂಡ್ ಮಸ್ತಿ’.

ಇನ್ನು ತೆಲಗು, ತಮಿಳು ಚಿತ್ರಗಳನ್ನು ನೋಡುವುದಷ್ಟೇ. ಹುಚ್ಚು ಹತ್ತಿಸಿಕೊಳ್ಳಲು ಆಗುವುದೇ ಇಲ್ಲ. ವಿಶ್ವರೂಪ ನೀರಿಕ್ಷೆ ಇಟ್ಟುಕೊಂಡಷ್ಟು ಈಡೇರಿಸಲಿಲ್ಲ.
ನಾನು ಚಲನಚಿತ್ರಗಳನ್ನೇ ಇಷ್ಟೂ ಲವ್ ಮಾಡುವುದರಿಂದಲೋ ಏನೋ ಹುಡುಗಿಯರ ಲವ್ ಕಡೆ ನೋಡಲು ಆಗಿಲ್ಲ. ಲವ್ ಮಾಡಲು ಬಂದ್ ಹುಡುಗಿಯರನ್ನೂ ಕೇರ್ ಮಾಡಲು ಆಗಿಲ್ಲ. ಹೀಗಾಗಿ ಮನಸ್ಸಿಗೆ, ಕನಸ್ಸಿಗೆ ಬರಬೇಕಾದವರೆಲ್ಲಾ ಕಾಣೆಯಾಗಿ ಹೋಗಿ ಬಿಟ್ಟಿದ್ದಾರೆ.
No comments:
Post a Comment