
ಓರ್ವ ಕಥೆಗಾರ/ಬರಹಗಾರನಲ್ಲಿ ಒಬ್ಬ ಶಕುನಿಯೂ ಇರ್ತಾನೆ ಅಂತಾ ನಾನು ಈ ಹಿಂದೆ ಹೇಳುತ್ತಿದೆ. ಅದು ನಿಜ ಎನ್ನುವುದು ‘ಅದ್ವೈತ’ ಚಿತ್ರದ ಬರಹಗಾರ ವಿವೇಕನಿಂದ ಗೊತ್ತಾಗುತ್ತದೆ.
ಜಟ್ಟದ ಅಂಶ ಹಾಗೂ ಆಶಯವನ್ನು ಮನಸ್ಸಿನಲ್ಲಿಟ್ಟುಕೊಂಡು ‘ಅದ್ವೈತ’ ನೋಡಲು ಹೋದರೆ ಖಂಡಿತ ನಿರಾಶೆಯಾಗುತ್ತದೆ. ಅದಕ್ಕೆ ಕಾರಣವೂ ಇದೆ. ಅದೆನೆಂದರೆ ಇದು ’ಜಟ್ಟ’ದ ಮೊದಲಿನ ಚಿತ್ರ. ಇದಾದ ಬಳಿಕ ಜಟ್ಟ ಶುರುವಾಗಿತ್ತು. ಹೀಗಾಗಿ ಜಟ್ಟದ ಫೇಮ್‌ನಿಂದ ಹೊರಬಂದು ಈ ಚಿತ್ರ ನೋಡುವುದು ಒಳಿತು.
ಇಲ್ಲಿ ಚಿತ್ರ ಕಥೆಗಿಂತ ಚಿತ್ರದಲ್ಲಿ ಬರುವ ಕಲ್ಪಿತ ಕಥೆಯೇ ತುಂಬಾ ಸೆಳೆಯುತ್ತದೆ. ಈ ಕಲ್ಪಿತ ಕಥೆಗೆ ಇಬ್ಬರೂ ಡಾನ್‌ಗಳಲ್ಲಿ ಕುತೂಹಲ ಹುಟ್ಟುವ ರೀತಿಯಲ್ಲಿಯೇ ಚಿತ್ರಮಂದಿರದಲ್ಲಿ ಕುಳಿತುಕೊಂಡಿರುವ ಪ್ರೇಕ್ಷಕರಲ್ಲಿಯೂ ಕುತೂಹಲ ಮುಂದುವರಿಸಿಕೊಂಡು ಹೋಗುತ್ತದೆ.
ಅಜಯ ರಾವ್‌ರನ್ನು ಕಥೆಗಾರರನ್ನಾಗಿ ಕಲ್ಪಿಸಿಕೊಳ್ಳುವುದು ಯಾಕೋ ಆಗದು. ಅವರು ಪ್ರೇಮಿಯಾಗಿ ಮಾಡುವ ಪಾತ್ರಗಳೇ ಒಳಿತು. ಹೀಗಾಗಿ ನನಗೆ ಅನಿಸಿದಂತೆ ಅವರನ್ನು ಈ ಪಾತ್ರದಲ್ಲಿ ಭರ್ತಿ ಮಾಡಿಕೊಳ್ಳಲು ನನ್ನ ಕಣ್ಣುಗಳಿಂದ ಆಗಲಿಲ್ಲ. ಆದರೆ ಸಹಪಾತ್ರಧಾರಿ (ಬಾಂಡ) ಕಾಮಿಡಿಯನ್ ಆಗಿದ್ದರೂ ಯಾಕೋ ಆತನೆ ನನಗೆ ಹಿರೋನಂತೆ ಕಂಡು ಬಿಟ್ಟ.
ಆತನ ಬಾಡಿ ಲಾಂಗ್ವೆಜ್, ನಟನೆಯ ಪರಿ. ಅಷ್ಟೇ ಏಕೆ ಆ ಕಾಮಿಡಿಯನ್ ಗೆಳೆಯನ ಪಾತ್ರಕ್ಕೂ ಒಂದು ಹಾಡಿದೆ. ಅದರಲ್ಲಿ ಉತ್ತಮ ಹೆಜ್ಜೆಗಳನ್ನು ಹಾಕಿದ್ದಾನೆ ಬಾಂಡ. ನಾನು ಕಂಡಂತೆ ನನ್ನೊಂದಿಗೆ ಇಂದು ಮೊದಲ ಷೋ ನೋಡಲು ಕುಳಿತ ಬಹುತೇಕ ಜನ ಬಾಂಡ್ ಪಾತ್ರಧಾರಿಗೆ ಅನ್ಯಾಯವಾಯಿತು ಅಂದುಕೊಳ್ಳುವವರೇ ಜಾಸ್ತಿ ಇದ್ದರು. ಅಷ್ಟೊಂದು ಮನಸ್ಸಿಗೆ ಹಿಡಿಸಿ ಬಿಡುತ್ತಾನೆ ಕುಳ್ಳ ಬಾಂಡ
ಇನ್ನು ಜಟ್ಟದಲ್ಲಿ ಮಲೆನಾಡು ಹುಡುಗಿ ಮಾತುಗಳ ಮೂಲಕ ಗಮನ ಸೆಳೆದಿದ್ದ ಪಾವನಿ. ಇಲ್ಲಿ ಮಲಿಯಾಳಿ ನರ್ಸ್ ಆಗಿ ಗಮನ ಸೆಳೆಯುತ್ತಾರೆ. ಇಲ್ಲಿಯೂ ಶುದ್ಧ ಕನ್ನಡ ಬಿಟ್ಟು ಮಲಿಯಾಳಿ ಮಿಶ್ರಿತ ಕನ್ನಡ ಮಾತನಾಡುವ ಪಾತ್ರ. ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ಜಟ್ಟದ ಬಹುತೇಕ ಪಾತ್ರಗಳು ಇಲ್ಲಿವೆ.
ಆದರೆ ಯಾಕೋ ಒಂದಿಷ್ಟು ತಾಳ್ಮೆ ಈ ಚಿತ್ರ ನೋಡಲು ಬೇಕೆ ಬೇಕು. ಓರ್ವ ಕಥೆಗಾರ... ತನ್ನಲ್ಲಿ ಶಕ್ತಿ ಇಲ್ಲದೇ ಹೋದರೂ ತನ್ನ ಕಥೆ ಕಟ್ಟುವ ಕಲ್ಪನಾ ಯುಕ್ತಿಯನ್ನೇ ಶಕ್ತಿಯನ್ನಾಗಿ ಹೇಗೆ ಬಳಸಿಕೊಳ್ಳಬಲ್ಲ ಎನ್ನುವುದು ಈ ಚಿತ್ರದ ಮೂಲ. ಆದರೆ ಅದ್ವೈತ ಅಂತಾ ಏಕೆ ಹೆಸರಿಟ್ಟರೂ ಅನ್ನೊಂದು ಮಾತ್ರ ಗೊಂದಲವಾಗಿದೆ.
No comments:
Post a Comment