
ನಾನು ತಿಳಿದಿರುವಂತೆ ಕೇವಲ ಒಂದೇ ಒಂದು ತಿಂಗಳ ಅಂತರದಲ್ಲಿ ಒಬ್ಬರೇ ನಿರ್ದೇಶಕರ ಎರಡು ಚಿತ್ರಗಳು ಬಿಡುಗಡೆಯಾದ ಬಗ್ಗೆ ಕೇಳಿಲ್ಲ.. ನೋಡಿಲ್ಲ.. ಆದರೆ ಅಂತಹ ಇತಿಹಾಸವೊಂದು ಈಗ ಕನ್ನಡ ಚಿತ್ರರಂಗದಲ್ಲಿ ನಿರ್ಮಾಣವಾಗುತ್ತಿದೆ. ಅದನ್ನು ಸೃಷ್ಟಿಸುತ್ತಿರುವವರ ‘ಜಟ್ಟ’ ಗಿರಿರಾಜ.
ಹೌದು.. ಕಳೆದ ತಿಂಗಳಷ್ಟೇ ನಾವೆಲ್ಲ ‘ಜಟ್ಟ’ ಚಿತ್ರ ನೋಡಿ ಇನ್ನು ಆ ಚಿತ್ರದ ಕಥೆ, ಪಾತ್ರ ಹಾಗೂ ವಿಷಯಗಳ ಬಗ್ಗೆ ಮಾತನಾಡಿಕೊಳ್ಳುತ್ತಿರುವಾಗಲೇ ಅವರ ಮತ್ತೊಂದು ಚಿತ್ರ ‘ಅದ್ವೈತ’ ಈ ವಾರ ಬಿಡುಗಡೆಯಾಗುತ್ತಿದೆ. ಇದು ‘ಜಟ್ಟ’ ಚಿತ್ರದ ಮೊದಲೇ ಬಿಡುಗಡೆಯಾಗಬೇಕಿತೆಂದು ಓದಿದ ನೆನಪು. ಅದೆಲ್ಲಾ ಏನೇ ಇರಲಿ. ಒಂದು ತಿಂಗಳ ಅಂತರದಲ್ಲಿ ಗಿರಿರಾಜರ ಎರಡು ಚಿತ್ರಗಳ ಬಿಡುಗಡೆಯಾಗುತ್ತಿರುವುದಂತೂ ಒಂದು ಖುಷಿಯ ವಿಚಾರ.
‘ಜಟ್ಟ’ ಮುಂಚೆಯೇ ಗಿರಿರಾಜ್ ಅವರು ‘ನವಿಲಾದವರು’ ಅಂತಾ ಒಂದು ಚಿತ್ರ ಮಾಡಿದ್ದರು. ಆದರೆ ಅದು ಹಾಗೂ ಅವರು ಯಾರಿಗೂ ಗೊತ್ತೆ ಇರಲಿಲ್ಲ. ಆ ಚಿತ್ರ ನೋಡಿದಾಗ ನಾನು ಕೆಲವರಿಗೆ ನೋಡ್ರೊ ಚನ್ನಾಗಿದೆ ಅಂದೆ. ಯಾವನೂ ಕೇಳಿಲ್ಲ... ‘ಹೆಂತೆಂಥಾ ಫಿಲ್ಮ್ ನೋಡ್ತಾನೆ ಇವಾ..’ ಹೀಯಾಳಿಸಿದ್ದರು. ಆದರೆ ಮೊನ್ನೆ ಅವರನ್ನೇ ‘ಜಟ್ಟ’ ನೋಡಲು ಎಳೆದುಕೊಂಡು ಹೋದೆ (ಬಿಯರ್ ಆಫರ್ ಮಾಡಿದಕ್ಕೆ ಬಂದ್ರು ಬಡ್ಡಿ ಮಕ್ಳು). ತೆಪ್ಪಾಗಾಗಿ ಬಿಟ್ಟರೂ. ಬಿಯರ್ ಸಹ ಕೇಳಲಿಲ್ಲ. ಆದರೆ ಜಟ್ಟ ನೋಡಿದ ಕೆಲವೇ ದಿನಗಳಲ್ಲಿ ‘ನವಿಲಾದವರು’ ನೋಡಿದರು. ಹೌದು, ‘ಜಟ್ಟ’ ಪ್ರೇಕ್ಷಕರ ಮನ ಗೆದ್ದ ಬಳಿಕ ಕೇಳಬೇಕೆ. ಯು-ಟ್ಯೂಬ್‌ನಲ್ಲಿ ‘ನವಿಲಾದವರು’ ಚಿತ್ರವನ್ನು ವೀಕ್ಷಿಸಿದವರ ಸಂಖ್ಯೆ ಹಾಗೆಯೇ ಬೆಳೆಯುವುದಕ್ಕೆ ಶುರುವಾಯಿತು. ಇದೇ ಕಾರಣಕ್ಕೆ ಅದ್ವೈತ ಚಿತ್ರಕ್ಕೂ ಶುಕ್ರದೆಸೆ ಒದಗಿ ಬಂದಿದೆ ಎನ್ನಬೇಕು.
ಏನಾದರೂ ಆಗಲಿ ತಡವಾಗಿಯಾದರೂ ಕೆಲವರಿಗೆ ಜ್ಞಾನೋದಯವಾಗಿದೆ. ಜ್ಞಾನೋದಯ ಮಾಡಿಕೊಂಡವರಿಗೆಲ್ಲ ಒಂದು ಧನ್ಯವಾದವನ್ನೂ ಹೇಳೋಣ. ಏಕೆಂದರೆ ಎಲ್ಲಿಯೋ ತಪ್ಪಿ ಹೋಗುತ್ತಿದ್ದ ಗಿರಿರಾಜ್‌ರಂತಹ ಪ್ರಯೋಗಶೀಲ-ವಿಚಾರಶೀಲ ನಿರ್ದೇಶಕರೊಬ್ಬರನ್ನು ಉಳಿಸಿಕೊಳ್ಳಲಾಗುತ್ತಿದೆಯಲ್ಲ ಅದಕ್ಕೆ. ಗಿರಿರಾಜ್‌ರಂತಹ ನಿರ್ದೇಶಕರು ಹೊಸ ಭರವಸೆ ಹುಟ್ಟಿಸಿದ್ದಾರೆ. ಅದನ್ನು ಪೋಷಿಸಿಕೊಂಡು, ಅವರನ್ನು ಬೆಳೆಸಬೇಕಾದಲ್ಲಿ ನಾವು-ನೀವೆಲ್ಲಾ ಇದೇ ವಾರ ಬಿಡುಗಡೆಗೊಳ್ಳುತ್ತಿರುವ ‘ಅದ್ವೈತ’ ಚಿತ್ರವನ್ನು ತಪ್ಪದೇ ನೋಡಬೇಕ್ರಪ್ಪ....
ಎಷ್ಟು ಜನ ಸ್ನೇಹಿತರಿಗೆ ಜಟ್ಟ ತೋರಿಸಬೇಕಿತ್ತು. ಆದರೆ ನಮ್ಮಲ್ಲಿನ ಚಿತ್ರಮಂದಿರಗಳ ಛಾಳಿ ಗೊತ್ತಲ್ಲ. ಒಳ್ಳೆಯ ಚಿತ್ರ ಟಾಕೀಸ್‌ನಲ್ಲಿ ಓಡೋದಿಲ್ಲ. ಕೆಲವರಿಗೆ ತೋರಿಸಲು ಆಗಿಲ್ಲ. ಅವರನ್ನೆಲ್ಲಾ ಈಗ ‘ಅದ್ವೈತ’ ಮೂಲಕ ಸಮಾಧಾನಪಡಿಸಬಹುದೇನೋ.
JATT ARTICLE IN MY BLOG
http://kammarmanasu.blogspot.in/2013/10/blog-post.html
No comments:
Post a Comment