Friday, November 29, 2013

ಚಡ್ಡಿದೋಸ್ತ ನಗಿಸೊಲ್ಲ ವಾಕರಿಕೆ ಬರಿಸುತ್ತೆ

ಯಾವುದೇ ಚಿತ್ರವಿರಲಿ. ಅದರಲ್ಲಿ ಸಾಧು ಕೋಕಿಲಾ ಇದ್ದರೆ. ಹೀರೋ ಎಂಟ್ರಿ ಕೊಡುವಾಗ ಬಿದ್ದಷ್ಟೇ ಶಿಳ್ಳೆಗಳು ಸಾಧು ಎಂಟ್ರಿಗೂ ಬೀಳಲೇಬೇಕು. ಚಡ್ಡಿದೋಸ್ತದಲ್ಲಿಯೂ ಹಾಗೆ ಇದೆ. ಆದರೆ ಈ ಚಿತ್ರದ ತುಂಬಾ ಸಾಧುನೇ ಹಿರೋ ಆಗಿದ್ದರೂ... ಎಂಟ್ರಿ ಬಳಿಕ ಶಿಳ್ಳೆ ಹೊಡೆಯೋದು ಇರಲಿ. ಪ್ರೇಕ್ಷಕ ಕುಳಿತ ಕುರ್ಚಿ ಮೇಲೆ ಕುಳಿತುಕೊಳ್ಳಲು ಆಗದು.. ಎದ್ದು ಹೋಗಲೂ ಆಗದು ಅಂತಹ ತಾಕಲಾಟ. ರಂಗಾಯಣ ರಘು ಮತ್ತು ಸಾಧುರಂತಹ ಇಬ್ಬರು ಕಾಮಿಡಿ ದಿಗ್ಗಜರೂ ಇರುವುದರಿಂದ ಚಿತ್ರದಲ್ಲಿ ಫುಲ್ ಕಾಮಿಡಿ ಇರಬಹುದು ಎಂದು ಉಹಿಸಿಕೊಂಡು ಹೋದರೆ ಅಲ್ಲಿ, ಪದೇ ಪದೇ ಅಂಡು ಕೆರೆದುಕೊಳ್ಳೋದನ್ನೇ ನೋಡಬೇಕು. ಅಂಡಿನ ಬಗ್ಗೆಯೇ ಹೆಚ್ಚು ಡೈಲಾಗ್‌ಗಳು ಬರುತ್ತವೆ ಹೊರತು. ಹಾಸ್ಯ ಎಂದೇನಿಸಿಕೊಳ್ಳುವ ಸಂಭಾಷಣೆಗಳು ನಗೆ ಉಕ್ಕಿಸುವ ಬದಲಿಗೆ ವಾಕರಿಕೆ ತರಿಸುವಂತಿವೆ. ಇನ್ನೊಂದು ಕೋನದಲ್ಲಿ ಈ ಚಿತ್ರದ ಬಗ್ಗೆ ಹೇಳುವುದಾದರೇ ಇದೊಂದು ಲಂಗು-ಲಗಾಮು ಇಲ್ಲದ ಚಿತ್ರ. ಏಕೆಂದರೆ ಈ ಚಿತ್ರದಲ್ಲಿ ಕಥೆ ಏನು ಅಂತಾ ದುರ್ಭಿನು ಹಾಕಿ ಹುಡಕಬೇಕು. ಸಾಧು ಮತ್ತು ರಘು ಅಭಿಯನಕ್ಕೆ ಇಲ್ಲೇನೂ ಹೆಚ್ಚು ಸರ್ಕಸ್ ಮಾಡಬೇಕಾಗಿಲ್ಲ. ಸಲೀಸಾಗಿ ನಟಿಸಿದ್ದಾರೆ. ಆದರೆ ಗಮನ ಸೆಳೆಯೋದು ಸಾಲ ವಸೂಲಿ ಮಾಡುವ ಗಟ್ಟಿಗಿತ್ತಿಯಾಗಿ ರೂಪಶ್ರೀ. ವಿಭಿನ್ನ ಪಾತ್ರಕ್ಕೆ ರೂಪಶ್ರೀ ಜೀವ ತುಂಬಿದ್ದರೆ. ಆದರೆ ರಘು ಜೊತೆ ಅಶ್ವಿನಿಗೌಡರನ್ನು ಜೋಡಿಯಾಗಿ ನೋಡೋದಕ್ಕೆ ಆಗೋದಿಲ್ಲ. ಅಷ್ಟು ದೊಡ್ಡ ಹೊಟ್ಟೆಯ ನಾಲ್ವತ್ತರ ಆಸುಪಾಸಿನ ಅಂಕಲ್‌ಗೆ ಅಶ್ವಿನಿಗೌಡ ಮಾರು ಹೋಗುವ, ಪ್ರೀತಿ ಮಾಡುವುದನ್ನು ನೋಡಲು ಎರಡು ಕಣ್ಣು ಮುಚ್ಚಿಕೊಳ್ಳಬೇಕೇನೊ!? ಆದರೂ ಇವರಿಬ್ಬರು ಪ್ರೀತಿ ಶಾಪಿಂಗ್ ಮಾತ್ರ ಸಿಮೀತವಾಗಿದೆ. ಇನ್ನು ಮರ, ಪಾರ್ಕ್, ಹೊಟೇಲ್ ಸುತ್ತಾಡ ಇಲ್ಲ.... ಹೀಗಾಗಿ ಪ್ರೇಕ್ಷಕ ಬಚಾವ್. ಚಿತ್ರದ ತುಂಬ ಅಷ್ಟೆನೂ ನಗೆ ಬರಿಸುವಂತಹ ಡೈಲಾಗ್‌ಗಳೇನೂ ಇಲ್ಲ. ಜೊತೆಗೆ ಅಲ್ಲಲ್ಲಿ ಮ್ಯೂಟ್‌ಗಳು ಜಾಸ್ತಿ ಇವೆ. ಆದರೂ ಅರ್ಜುನ ಜನ್ಯ ಸಂಗೀತದಲ್ಲಿ ಹಾಡುಗಳು ಒಂದಿಷ್ಟು ಸಮಾಧಾನ ನೀಡುತ್ತವೆ.

No comments:

Post a Comment

ಮನೆಪಾಠ ಕೇಂದ್ರಗಳಿಗೆ ಬ್ಯಾಗ್ ಮತ್ತು ಬುಕ್ಸ್ ವಿತರಣೆ

Dharwad: ಗುರುಕುಲ ಪದ್ಧತಿಯಂತೆ ಒಬ್ಬರೇ ಶಿಕ್ಷಕರಿಂದ ನಡೆಸುವ ಈ ನವೀನ ಪ್ರಯೋಗವೇ ಏಕ ಶಿಕ್ಷಕ ವಿದ್ಯಾಲಯ ಅಂದರೆ ಮನೆಪಾಠ ಕೇಂದ್ರ ಎಂದು ವನವಾಸಿ ಕಲ್ಯಾಣ ಕರ್ನಾಟಕ ಸಂಸ್ಥ...