Tuesday, November 5, 2013
ಸಿನಿಮಾ ಮಂದಿಗೆ ಅಹಂ
ಸಿನಿಮಾ ಮಂದಿಗೆ ಒಂದಿಷ್ಟು ಅಹಂ ಜಾಸ್ತಿನೇ ಇರುತ್ತೆ ಅನ್ಸುತ್ತೆ. ಇತ್ತೀಚೆಗೆ ಬಹಳಷ್ಟು ಸಿನಿಮಾಗಳು ಬಿಡುಗಡೆಗೊಂಡಾಗ ಉತ್ತರ ಕರ್ನಾಕದತ್ತ ಬಂದು ಜಿಲ್ಲೆಗೊಂದು ಪ್ರಚಾರ, ಸುದ್ದಿಗೋಷ್ಠಿ ಮಾಡುತ್ತಾರೆ. ಕೆಲವರು ಏನೇ ಪಶ್ನೆ ಹಾಕಿದರೂ ನಾವು ಮಾಡಿದ್ದೇ ಸರಿ ಎಂದು ಕೊಚ್ಚಿಕೊಳ್ಳುವವರೇ ಜಾಸ್ತಿ. ಹೊರತು ಏನನ್ನೂ ಒಪ್ಪಿಕೊಳ್ಳೊದಿಲ್ಲ. ಅದರಲ್ಲಿಯೂ ಕೆಲವರು ನಯವಾಗಿ ಒಪ್ಪಿಕೊಳ್ಳುತ್ತಾರೆ.
ಇವತ್ತು ಒಬ್ಬ ನಿರ್ದೇಶಕರು ಬಂದಿದ್ದರು. ಅವರ ಎರಡನೇ ಚಿತ್ರದ ಪ್ರಚಾರಾರ್ಥ. ಈ ಚಿತ್ರ ಹಾಗೂ ಈ ಹಿಂದಿನ ಅವರ ಚಿತ್ರದಲ್ಲಿನ ದೃಶ್ಯ ಸಂಯೋಜನೆಯಲ್ಲಿನ ಕೆಲವು ತಾಂತ್ರಿಕ ದೋಷಗಳನ್ನು ನಾನು ಗಮನಕ್ಕೆ ತಂದೆ. ‘ಓ ಹೌದಾ...ಹಿ..ಹಿ.. ಅದು ಹಾಗೇ... ಹೀಗೆ...’ ಎಂದು ನಾನು ಮಾಡಿದ್ದೆ ಸರಿ ಎನ್ನುವಂತೆ ಪ್ರದರ್ಶಿಸಿದರು. ‘ಇವನ್ಯಾವನೋ ಚಿತ್ರರಂಗದ ಗ್ರಾಮರ್ ಗೊತ್ತಿಲ್ಲದವ ಏನೇನೋ ಬಂದು ಕೇಳುತ್ತಿರುವನಲ್ಲ. ನನ್ನ ಚಿತ್ರವನ್ನು ಈ ಭಾಗದ ಜನ ಹುಚ್ಚರಂತೆ ನೋಡುತ್ತಿರಬೇಕಾದರೆ ಇವನ್ಯಾವನೋ’ ಎಂಬಂತೆ ಅವರು ನನ್ನನ್ನು ನೋಡಿದರು.
ಹೀಗಾಗಿ ಆತನನ್ನು ಬಿಳ್ಕೋಡುವ ಮೊದಲಿಗೆ ನಾನು ಒಂದು ಮಾತು ಹೇಳಿಯೇ ನಿರ್ಗಮಿಸಿದೆ ‘ನೋಡಿ ಸರ್.. ನಾನು ಪತ್ರಕರ್ತ ಅಂತಾ ಈ ಅಂಶಗಳನ್ನು ನಿಮ್ಮ ಗಮನಕ್ಕೆ ತರುತ್ತಿಲ್ಲ. ಓರ್ವ ಪ್ರೇಕ್ಷಕನಾಗಿ ಕೇಳಿದೆ ಅಷ್ಟೆ. ಇಂದು ಸಿನಿಮಾ ಮಾಡುವವರಷ್ಟೇ ಶ್ರೇಷ್ಟ ಅಲ್ಲ. ಪ್ರೇಕ್ಷಕನೂ ಓರ್ವ ವಿಮರ್ಶಕ, ನಿರ್ದೇಶಕ ಇದ್ದಂತೆ. ನಿಮ್ಮ ಚಿತ್ರ ಸೂಪರ್ ಅಂತಾ ಕೆಲವು ಜನ ಟಾಕೀಸ್‌ನಲ್ಲಿ ಸಿಳ್ಳೆ ಹೊಡೆದು ಬಿಟ್ಟರೇ’ ಅದೆ ದೊಡ್ಡದಲ್ಲ. ಅದೇ ಚಿತ್ರವನ್ನು ಇನ್ನೊಂದು ಕೋನದಲ್ಲಿ ನೋಡುವ ಪ್ರೇಕ್ಷಕನೂ ಇರುತ್ತಾನೆ’ ಎಂದು ಹೇಳಿದೆ.
ಆತ ಮರುತ್ತರ ಇಲ್ಲದೇ ನಿರ್ಗಮಿಸಿದ.
ಆದರೆ ಇದೇ ರೀತಿಯ ಅಹಂ ಮರಾಠಿ ಚಿತ್ರರಂಗದಲ್ಲಿನ ಎಷ್ಟೇ ದೊಡ್ಡ ನಟ, ನಿರ್ದೇಕರಲ್ಲಿ ಇಲ್ಲ. ನಾನು ನೋಡಿದ ಎಷ್ಟೋ ಮರಾಠಿ ಚಿತ್ರಗಳ ಬಗ್ಗೆ ನನ್ನ ಬ್ಲಾಗ್‌ನಲ್ಲಿ, ಇಲ್ಲವೇ ಪತ್ರಿಕೆಯಲ್ಲಿ ಬರೆದಾಗ. ಅದನ್ನು ನೋಡಿದ ಸಂಬಂಧಿಸಿದ ನಟ, ನಿರ್ದೇಶಕರು ಸಂಪೂರ್ಣ ವರದಿಯನ್ನು ಮರಾಠಿಗೆ ಭಾಷಾಂತರಿಸಿಕೊಂಡು ತಿಳಿದುಕೊಂಡಂವರಿದ್ದಾರೆ. ಅದನ್ನು ಓದಿ ಫೋನ್ ಮಾಡಿ, ಎಷ್ಟೇ ದೊಡ್ಡವರಾದರೂ ಸ್ನೇಹಿತರಾದವರಿದ್ದಾರೆ.
ಆದರೆ ಕನ್ನಡ ಚಿತ್ರರಂಗದಲ್ಲಿನ ಒಂದಿಷ್ಟು ಮಂದಿ ಮಾತ್ರ ಉತ್ತರ ಕರ್ನಾಟಕದವರು ಎಂದರೆ ನಮ್ಮನ್ನು ಹುಚ್ಚರಂತೆ ನೋಡುವ ಅಭಿಮಾನಿಗಳು. ನಮ್ಮನ್ನು ನೋಡಲು ಸಾಯ್ತರೆ ಎಂದು ತಿಳಿದುಕೊಂಡು ಬಿಟ್ಟಿದ್ದಾರೆ.
Subscribe to:
Post Comments (Atom)
ಮನೆಪಾಠ ಕೇಂದ್ರಗಳಿಗೆ ಬ್ಯಾಗ್ ಮತ್ತು ಬುಕ್ಸ್ ವಿತರಣೆ
Dharwad: ಗುರುಕುಲ ಪದ್ಧತಿಯಂತೆ ಒಬ್ಬರೇ ಶಿಕ್ಷಕರಿಂದ ನಡೆಸುವ ಈ ನವೀನ ಪ್ರಯೋಗವೇ ಏಕ ಶಿಕ್ಷಕ ವಿದ್ಯಾಲಯ ಅಂದರೆ ಮನೆಪಾಠ ಕೇಂದ್ರ ಎಂದು ವನವಾಸಿ ಕಲ್ಯಾಣ ಕರ್ನಾಟಕ ಸಂಸ್ಥ...
.jpeg)
-
ನನಗೆ ಇರುವ ಚಟಗಳಲ್ಲಿ ಟಿವಿ ನೋಡುವುದು ದೊಡ್ಡ ಚಟ. ಹೀಗಾಗಿ ಮನೆ ಹಾಗೂ ಕಚೇರಿಯಲ್ಲಿದ್ದರೂ ಸಹ ಸದಾ ಟಿವಿಯನ್ನು ನೋಡುತ್ತಲೇ ಇರುತ್ತೇನೆ. ಇನ್ನು ಹೊರಗಡೆ ಸುತ್ತಾಡುವಾಗಲೂ ...
-
ಬೆಳಗಾವಿ, ೧- ಹಣದುಬ್ಬರ ಹಾಗೂ ಬೆಲೆ ಏರಿಕೆ ಮಧ್ಯೆ ಈಗ ಬೆಳಗಾವಿ ನಗರ ಹಾಗೂ ಜಿಲ್ಲೆಯಲ್ಲಿ ಚಿಲ್ಲರೆ ನಾಣ್ಯಗಳ ಅಭಾವ ಸೃಷ್ಟಿಯಾಗಿದ್ದು, ಇದನ್ನು ಕೆಲವರು ದಂಧೆಯನ್ನಾಗಿಯೂ ...
-
ರಾಜ್ಯದಲ್ಲಿ ತನ್ನ ಖಜಾನೆ ತುಂಬಿಸಿಕೊಳ್ಳುತ್ತಿರುವ ಮಲ್ಟಿಪ್ಲೆಕ್ಸ್ಗಳು, ಒಂದಲ್ಲ ಒಂದು ರೀತಿಯಲ್ಲಿ ಕನ್ನಡ ಚಿತ್ರಗಳಿಗೆ ಧಕ್ಕೆ ಮಾಡುತ್ತಲೇ ಬರುತ್ತಿವೆ. ಕನ್ನಡ ಸಿನಿಮಾ...
No comments:
Post a Comment