
ಕಳೆದ ಎರಡು ದಿನಗಳಿಂದ ಓರ್ವ ವ್ಯಕ್ತಿ ನನ್ನನ್ನು ತುಂಬಾ ಕಾಡುತ್ತಿದ್ದಾರೆ. ಆತ ಕಲ್ಪನಾ ಪಾತ್ರವಾದರೂ ಯಾಕೋ ನನ್ನೊಂದಿಗೆ ಇದ್ದವ ಅನಿಸುತ್ತಿದೆ. ಆತ ಅಪ್ಪಟ ಮರಾಠಿಗ. ಆದರೂ ನನ್ನ ಚಿತ್ತ ಚೋರಿ ಮಾಡಿದ್ದಾನೆ. ಅವನೇ ಶ್ರೇಯಸ್ ತಳವಳಕರ.
ನಾನು ಇಲ್ಲಿ ಹೇಳುತ್ತಿರುವುದು ಕಳೆದ ಎರಡು ದಿನಗಳ ಹಿಂದೆ ನಾನು ನೋಡಿದ ಮರಾಠಿಯ ಬಾಕ್ಸ್ ಆಫೀಸ್ ಹಿಟ್ ಚಿತ್ರ ‘ದುನಿಯಾದಾರಿ’ ಬಗ್ಗೆ.
ಈ ಚಿತ್ರ ನೋಡುತ್ತಾ ನೋಡುತ್ತಾ ನಮ್ಮನ್ನು ಕಾಡಲಾರಂಭಿಸುತ್ತವೆ. ಚಿತ್ರ ಮುಗಿಯುವ ಹೊತ್ತಿಗೆ ಏನೋ ಒಂದು ರೀತಿಯ ತಳಮಳ ನಮ್ಮನ್ನು ಆವರಿಸಿಕೊಂಡು ಬಿಡುತ್ತದೆ. ಇಲ್ಲ ನಾವೇ ಆ ಚಿತ್ರದೊಳಗೆ ಇದ್ದೆವೆನೋ? ನಮ್ಮ ಸುತ್ತವೇ ಈ ಕತೆ ನಡೆಯುತ್ತಿದೆ ಏನೋ? ಅನ್ನಿಸಲಾರಂಭಿಸುತ್ತದೆ.
ಹೊಂದಾಣಿಕೆ ಇಲ್ಲದ ತಂದೆ-ತಾಯಿಯ ಮಧ್ಯೆ ಬೆಳೆಯುವ ಶ್ರೇಯಷ್ ತಳವಾಳಕರ (ಸ್ವಪ್ನಿಲ್ ಜೋಶಿ). ಮುಂಬೈಗೆ ಬಂದು ಕಾಲೇಜಿಗೆ ಸೇರಿಕೊಂಡು ಸ್ನೇಹಿತರ ಪರಮ ಮೆಚ್ಚಿನವಾಗಿ ಕೊನೆಗೊಂದು ದಿನ ಎಲ್ಲರನ್ನು ಬಿಟ್ಟು ಮರಳಿ ಬಾರದ ಲೋಕಕ್ಕೆ ಹೋಗುತ್ತಾನೆ.
ಮೆಚ್ಚಿದ ಹುಡುಗಿಯ ಮುಂದೆ ಪ್ರೇಮ ನಿವೇದನೆ ಮಾಡಿದರೂ ’ಅರೇ ತು ಅಜುನ ಬಚ್ಚು ಹೈ ರೇ’ ಎಂಬಂತೆ ಮಾತನಾಡುವ ಮೂಲಕ ಆತ ಇನ್ನು ಏನೂ ಅರಿಯದ ಚಿಕ್ಕ ಮಗು ಎಂದೇ ಭಾವಿಸುತ್ತಾಳೆ (ಶಿರಿನ್-ಸಾಯಿ ತಮನ್ಹಕರ). ಇದೇ ರೀತಿ ಉಳಿದವರೂ ಸಹ.
ಈ ಮಧ್ಯೆ ಕಾಲೇಜಿಗೆ ಬಂದು ಸೇರುವ ಪೊಲೀಸ್ ಹವಾಲ್ದಾರನ ಮಗಳು ಮೀನು (ಉಮಿಳಾ ಕಾನೆಟ್ಕರ) ಶ್ರೇಯಷ್‌ನನ್ನು ಪ್ರೀತಿಸಲು ದುಂಬಾಲು ಬಿದ್ದರೂ ಇತನಿಗೆ ಯಾಕೋ ಶಿರಿನ್ ಮೇಲೆ ಆಸೆ. ಕೊನೆಗೆ ಶಿರಿನ್ ಈತನಿಗೆ ಮನ ಸೋಲುತ್ತಾಳೆ. ಆದರೆ ಆಗಾಗ ಈತನ ಮೂಗಿನಿಂದ ರಕ್ತ ಸೋರುತ್ತಿರುತ್ತದೆ ‘ಏ ಖದೀ ತಾಮನಾರ’ ಎಂದು ಶಿರಿನನನ್ನು ಶ್ರೇಯಷ್ ಕೇಳುತ್ತಲೆ ಇರುತ್ತಾನೆ. ಕೊನೆಗೆ ಆತನ ಪ್ರಾಣದೊಂದಿಗೆ ರಕ್ತ ಸೋರುವ ಕಿರಿಕಿರಿಯೂ ಹೋಗಿ ಬಿಡುತ್ತದೆ(ನಿಧನನಾಗುತ್ತಾನೆ)
ಶ್ರೇಯಷ್ ಸತ್ತರೂ ಸಹ ಆ ಬಳಿಕ ಪ್ರತಿ ವರ್ಷ ಆತನ ಜನುಮದಿನದಂದು ಸ್ನೇಹಿತರೆಲ್ಲ (ವೃದ್ಧರಾದ ಬಳಿಕವೂ) ಕಾಲೇಜಿನಲ್ಲಿ ಆತ ಕುಳಿತುಕೊಳ್ಳುತ್ತಿದ್ದ ಕಟ್ಟೆಗೆ ಬಂದು ಆತನದೊಂದಿಗೆ ಮಾತನಾಡುವಂತೆ ಹರಟೆ ಹೊಡೆಯುತ್ತಾ ಕೊನೆಗೊಳ್ಳುವ ದೃಶ್ಯ ಮನಕಲಕುತ್ತದೆ.
ಯೌವ್ವದ ಯುವತಿಯಾಗಿ ಹಾಗೂ ಆ ಬಳಿಕ ವೃದ್ಧೆಯಾಗಿ ಸಾಯಿ ಅದ್ಭುತ ಅಭಿನಯ ನೀಡಿದ್ದಾರೆ. ಇನ್ನು ಶ್ರೇಯಷ್ ಆಗಿ ಸ್ವಪ್ನಿಲ್ ಜೋಶಿ ಪಾತ್ರವೇ ತಾವಾಗಿದ್ದಾರೆ.
ಕಾಲೇಜಿನ ಸ್ನೇಹಿತರ ಪಾತ್ರದಲ್ಲಿ ದಿಗ್ಯಾ-ಡಿಎಸ್‌ಪಿ (ಅಂಕುಶ ಚೌಧರಿ), ಖಳನಟ ಸಾಯಿ (ಜಿತೇಂದ್ರ ಜೋಶಿ) ಸೇರಿದಂತೆ ಪ್ರತಿಯೊಂದು ಪಾತ್ರವೂ ಅದ್ಭುತವಾಗಿವೆ.
ಇಲ್ಲಿ ಚಿತ್ರ ನೋಡುವುದರ ಜೊತೆಗೆ ಕಿವಿಯನ್ನು ಚಿತ್ರಕ್ಕೆ ಸಮರ್ಪಿಸಿ ಬಿಡಬೇಕು. ಏಕೆಂದರೆ ಪ್ರತಿಯೊಂದು ಸಂಭಾಷಣೆಯೂ ಹಾಗಿದೆ. ಒಂದೇ ಒಂದು ಡೈಲಾಗ್ ಮಿಸ್ ಮಾಡುವಂತಿಲ್ಲ. ಹಾಗಿದೆ. ಬಹುತೇಕ ಎಲ್ಲ ಸಂಭಾಷಣೆಗಳಿಗೂ ಇಲ್ಲಿ ಒಂದಾನೊಂದು ಭಾವನಾರ್ಥ ಇದೆ. ಇದೊಂದು ಭಾವನೆಯೊಂದಿಗೆ ಹೋಯ್ದಡುವ. ನಮ್ಮ ಭಾವನೆಗಳನ್ನು ಚಿವುಟಿ ಜಾಗೃತಗೊಳಿಸುವಂತಹ ಮನಕಲಕುವ ಕಥೆಯುಳ್ಳ ಚಿತ್ರ.
ನಿಮಗೆ ಭಾಷೆ ಬರದೇ ಹೋದರು ಭಾವನೆ ಗೊತ್ತಾಗುತ್ತದೆಯಲ್ಲವೇ.... ಹಾಗಾದರೇ ತಪ್ಪದೇ ಮರಾಠಿಯ ದುನಿಯಾದಾರಿ ನೋಡಿ ‘ತೇರಿ ಮೇರಿ ಯಾರಿ ಬೋಕಟ್ ಗೇಲಿ ದುನಿಯಾದಾರಿ’
No comments:
Post a Comment