Monday, October 14, 2013
ಜಟ್ಟ ಸೂಪರ್‌ಹಿಟ್...!
ಒಂದಿಷ್ಟು ತುಂಡುಡುಗೆ ತೊಟ್ಟ ಹುಡುಗಿ ನೀರಿನಲ್ಲಿ ಬಿದ್ದಿದ್ದಾಳೆ. ಆಕೆಯ ಕಾಲಿಗೆ ಚೈನು ಕಟ್ಟಿ ನಟ ಕಿಶೋರಕುಮಾರ ಎಳೆತ್ತಿರುವಂತಿರುವ ‘ಜಟ್ಟ’ ಸಿನಿಮಾ ಪೋಸ್ಟರ್ ನೋಡಿದಾಗ ಇತ್ತೀಚೆಗೆ ಕನ್ನಡದಲ್ಲಿ ಬರುತ್ತಿರುವ ಕೆಟ್ಟ ಚಿತ್ರಗಳಂತೆ ಇದು ಇರಬಹುದೇನೋ...! ಅಂದುಕೊಂಡಿದ್ದೆ.
ಸ್ನೇಹಿತನೋರ್ವ ನಟಿಯ ಬೆತ್ತಲೆ ಮೈ ತೋರಿಸಿದಾರಲೇ..ಇದರಾಗ..! ಎಂದು ಬೇರೆ ಹೇಳಿದ್ದ. ಹೀಗಾಗಿ ಚಿತ್ರ ನೋಡಲು ಕಸಿವಿಸಿಯಾಗುತ್ತಿತ್ತು. ಕಾರಣ ಇತ್ತೀಚೆಗೆ ಕನ್ನಡದಲ್ಲಿ ಸಾಲು ಸಾಲು ಹೊಲಸು ಚಿತ್ರಗಳೇ ಬಂದಿರುವುದರಿಂದ ಹಾಗೂ ಆ ರೀತಿಯ ಪೋಸ್ಟರ್‌ಗಳನ್ನು ನೋಡಿ ನೋಡಿ ಸಾಕಾಗಿ ಹೋಗಿತ್ತು.
ಆದರೆ ಮಾಧ್ಯಮಗಳಲ್ಲಿ ಚೆನ್ನಾಗಿ ವಿಮರ್ಶೆ ಬಂದಿತ್ತು. ಹೀಗಾಗಿ ನಿನ್ನೆ ರಜೆ ಇದ್ದರೂ ಊರಿಗೆ ಹೋಗುವುದನ್ನು ಬಿಟ್ಟ ‘ಜಟ್ಟ’ನ ಸಹವಾಸ ಮಾಡೋಣ ಅಂತಾ. ಹುಬ್ಬಳ್ಳಿಯ ಲಕ್ಷ್ಮೀಮಾತಾ ಚಿತ್ರಮಂದಿರಕ್ಕೆ ಹೋದೆ. ಬಾಲ್ಕನಿಯಲ್ಲಿ ನೋಡಿದರೆ 17 ಜನ ಮಾತ ್ರ ಇದ್ವಿ. ಇಷ್ಟೇ ಜನಾನ ಅಂದುಕೊಂಡು ಕುಳಿತೆ. ಆರಂಭದಲ್ಲಿ ಬಂದಿದ್ದು... ನನ್ನ ನೆಚ್ಚಿನ ನಟ ಕನ್ನಡದ ನಾನಾ ಪಾಟೇಕರ ಬೀಸು.
ಚಿತ್ರ ಸಾಗುತ್ತಿದ್ದಂತೆ. ಇದು ಅದ್ಭುತ ಅನ್ನಿಸಲು ಶುರುವಾಯಿತು. ಕಿಶೋರಕುಮಾರರಂತೆ, ಸುಕ್ರುತಾ ಸಹ ತುಂಬಾ ಚೆನ್ನಾಗಿಯೇ ಅಭಿನಯಿಸಿದ್ದಾರೆ. ಒಂದು ರೀತಿ ಇಬ್ಬರ ಪಾತ್ರಗಳು ಇಲ್ಲಿ ಜುಗಲಬಂಧಿಯಂತೆ ಇವೆ. ಅದೇ ರೀತಿ ಇಬ್ಬರ ನಟನೆಯೂ ಜುಗಲಬಂಧಿಯಾಗಿಯೇ ಮುಂದುವರೆದಿರುವುದು ವಿಶೇಷ.
ಜಟ್ಟ ಎಷ್ಟೇ ಕೆಟ್ಟವನಂತೆ ವರ್ತಿಸಿದರೂ ಆಧುನಿಕ ಹುಡುಗಿ ಪಾತ್ರ ಮಾಡಿದ್ದ (ಹೆಸರು ನೆನಪು ಉಳಿದಿಲ್ಲ.. ನಿಹಾರಿಕಾನೋ... ಸಾಗರಿಕಾನೋ.. ಅಂತಾ ಇದೆ... ಆದರೆ ಅಲ್ಲಿ ಅವಳೇ ಹೇಳಿಕೊಳ್ಳುವ ‘ಹಾದರಗಿತ್ತಿ’ ಹಾ...ದ...ರ...ಗಿ...ತ್ತಿ..ನೂ ಅಲ್ಲ.) ಅದಕ್ಕೆ ತಕ್ಕಂತೆ ಉಗ್ರ ಪ್ರತಿಕ್ರಿಯೆ ನೀಡುವಲ್ಲಿ ಅದ್ಭುತ ಅಭಿನಯ.
ಹೆಣ್ಣಿನ ಮೇಲೆ ಪುರುಷ ಸಮಾಜ ನಿಯಂತ್ರಣ ಇಟ್ಟುಕೊಳ್ಳಲು ಬಳಸುವ ತಂತ್ರಗಾರಿಕೆಯನ್ನು ಈ ಪಾತ್ರದ ಮೂಲಕ ಸೂಕ್ತವಾಗಿ ನಿರೂಪಿಸಿದ್ದಾರೆ ನಿರ್ದೇಶಕರು.
‘ಓಯ್ ಹೆಂಥಾ’ ಎನ್ನುತ್ತಾ ಚಿತ್ರದ ಅರ್ಧದ ಬಳಿಕ ಬರುವ ಪಾವನಿ ಮುಗ್ದ ಗೃಹಿಣಿಯಾಗಿ. ಪ್ರೀತಿ ಆಯ್ಕೆಯ ತೋಳಲಾಟದ ಗೊಂದಲದ ಹೆಣ್ಣಾಗಿ ಚೆನ್ನಾಗಿ ಅಭಿನಯಿಸಿದ್ದಾರೆ. ಪ್ರೇಮಕುಮಾರ ಸಹ ಪಾತ್ರಕ್ಕೆ ಚೆನ್ನಾಗಿಯೇ ಜೀವ ತುಂಬಿದ್ದಾರೆ. ಆದರೆ ಬೀಸು (ಬಿ. ಸುರೇಶ) ಅವರ ಪಾತ್ರ ಇನ್ನೊಂದಿಷ್ಟು ಇರಬೇಕಿತ್ತೆನೋ? ಇನ್ನು ಜಟ್ಟನ ಓಡುವ ಸ್ಟೈಲ್ ಅಂತೂ ಸೂಪರ್ ಕಣ್ರಿ.
ಚಿತ್ರದಲ್ಲಿ ಸುಕೃತಾ ಬಟ್ಟೆ ಹರಿದು ಬೆತ್ತಲೆ ದೇಹ ತೋರಿಸಿದ್ದರು. ಅದೇನೂ ಪ್ರಚಾರದ ಗಿಮಿಕ್ ಅಲ್ಲ ಬಿಡಿ(ಇತ್ತೀಚೆಗೆ ಬೆನ್ನು ತೋರಿಸಿ ಡೊಂಗಿ ಪ್ರಚಾರ ಪಡೆಯುವ ಹುರುಳಿಲ್ಲದ ಚಿತ್ರಗಳೇ ಜಾಸ್ತಿಯಾಗಿರುವಾಗ). ಚಿತ್ರದ ಕೊನೆಯವರೆಗೂ ಅರ್ಧ ಬೆತ್ತಲೆಯಾಗಿದ್ದರೂ... ಅದು ಕಥೆಗೆ ಪೂರಕ. ಹೀಗಾಗಿ ಯಾವುದೇ ಗ್ಲಾೃಮರಸ್ ಇಲ್ಲದೇ ಒಂದು ಕುಟುಂಬ ನೋಡಬಹುದಾದಾ ಪ್ರಜ್ಞಾವಂತ ನಾಗರಿಕರೆಲ್ಲಾ ಸ್ವಾಗತಿಸಬಹುದಾದ. ಅಷ್ಟೇ ಏಕೆ... ಇಂದು ನಮ್ಮನ್ನು ಕಾಡುತ್ತಿರುವ ಹಲವು ಮೂಢತೆಗಳನ್ನು ದೂರ ಮಾಡಬೇಕಾದರೆ ಇಂತಹ ಚಿತ್ರದಿಂದಲೇ ಸಾಧ್ಯ.
ಒಟ್ಟಿನಲ್ಲಿ ಇತ್ತೀಚೆಗೆ ಕನ್ನಡದಲ್ಲಿಯೂ ಅದ್ಭುತ ಚಿತ್ರಗಳ ಆಗಮನವಾಗುತ್ತಿದೆ. ಅತ್ತ ನನ್ನ ಮೆಚ್ಚಿನ ಇನ್ನೊಂದು ಚಿತ್ರರಂಗ ಮರಾಠಿಯಲ್ಲಿಯೂ ಅಷ್ಟೇ ‘ಪ್ರೇಮಾಚಿ ಗೋಷ್ಠ’ ‘ದುನಿಯಾದಾರಿ’, ‘ಅನುಮತಿ’ ಹೀಗೆ ತನ್ನ ಮರ್ಯಾದೆ ಉಳಿಸಿಕೊಳ್ಳುವಲ್ಲಿ ಮರಾಠಿ ಚಿತ್ರರಂಗ ಉತ್ತಮ ಕಾರ್ಯ ಮಾಡುತ್ತಿದೆ. ಕನ್ನಡದಲ್ಲಿಯೂ ಪ್ರಯತ್ನಗಳು ನಡೆದಿವೆಯಾದರೂ... ಯಾಕೋ ನಮ್ಮಲ್ಲಿ ಸೆಕ್ಸ್ ಫಿಕ್ಚರ್ ಮಾಡೋ ಪಾಪಿಸ್ಟರೇ ಜಾಸ್ತಿಯಾಗುತ್ತಿದ್ದಾರೆ. ಇವರಿಗೆ ಪ್ರೇಕ್ಷಕ ಬುದ್ದಿ ಕಲಿಸಬೇಕಿದೆ.
Subscribe to:
Post Comments (Atom)
ಮನೆಪಾಠ ಕೇಂದ್ರಗಳಿಗೆ ಬ್ಯಾಗ್ ಮತ್ತು ಬುಕ್ಸ್ ವಿತರಣೆ
Dharwad: ಗುರುಕುಲ ಪದ್ಧತಿಯಂತೆ ಒಬ್ಬರೇ ಶಿಕ್ಷಕರಿಂದ ನಡೆಸುವ ಈ ನವೀನ ಪ್ರಯೋಗವೇ ಏಕ ಶಿಕ್ಷಕ ವಿದ್ಯಾಲಯ ಅಂದರೆ ಮನೆಪಾಠ ಕೇಂದ್ರ ಎಂದು ವನವಾಸಿ ಕಲ್ಯಾಣ ಕರ್ನಾಟಕ ಸಂಸ್ಥ...
.jpeg)
-
ನನಗೆ ಇರುವ ಚಟಗಳಲ್ಲಿ ಟಿವಿ ನೋಡುವುದು ದೊಡ್ಡ ಚಟ. ಹೀಗಾಗಿ ಮನೆ ಹಾಗೂ ಕಚೇರಿಯಲ್ಲಿದ್ದರೂ ಸಹ ಸದಾ ಟಿವಿಯನ್ನು ನೋಡುತ್ತಲೇ ಇರುತ್ತೇನೆ. ಇನ್ನು ಹೊರಗಡೆ ಸುತ್ತಾಡುವಾಗಲೂ ...
-
ಬೆಳಗಾವಿ, ೧- ಹಣದುಬ್ಬರ ಹಾಗೂ ಬೆಲೆ ಏರಿಕೆ ಮಧ್ಯೆ ಈಗ ಬೆಳಗಾವಿ ನಗರ ಹಾಗೂ ಜಿಲ್ಲೆಯಲ್ಲಿ ಚಿಲ್ಲರೆ ನಾಣ್ಯಗಳ ಅಭಾವ ಸೃಷ್ಟಿಯಾಗಿದ್ದು, ಇದನ್ನು ಕೆಲವರು ದಂಧೆಯನ್ನಾಗಿಯೂ ...
-
ರಾಜ್ಯದಲ್ಲಿ ತನ್ನ ಖಜಾನೆ ತುಂಬಿಸಿಕೊಳ್ಳುತ್ತಿರುವ ಮಲ್ಟಿಪ್ಲೆಕ್ಸ್ಗಳು, ಒಂದಲ್ಲ ಒಂದು ರೀತಿಯಲ್ಲಿ ಕನ್ನಡ ಚಿತ್ರಗಳಿಗೆ ಧಕ್ಕೆ ಮಾಡುತ್ತಲೇ ಬರುತ್ತಿವೆ. ಕನ್ನಡ ಸಿನಿಮಾ...
No comments:
Post a Comment