Wednesday, July 31, 2013

ಸಿನಿಮಾ ಮಂದಿ ಚಾಳಿ ಕಿರುತೆರೆ ಮಂದಿಗೂ

ಬೆಂಗಳೂರಿನಲ್ಲಿ ಕೆಲವರು ಸಿನಿಮಾ ಮಂದಿ ಪತ್ರಿಕಾಗೋಷ್ಠಿಗಳಿಗೆ ಸರಿಯಾದ ಸಮಯಕ್ಕೆ ಬರೋದಿಲ್ಲ ಎಂಬುದನ್ನು ಕೇಳಿದ್ವಿ. ಆದರೆ ಆ ಚಾಳಿ ಕಿರುತೆರೆ ಮಂದಿಗೂ ಇದೇ ಕಣ್ರಿ. ಇತ್ತೀಚೆಗೆ ಚಲನಚಿತ್ರಗಳ ಪ್ರಮೋಷನ್‌ಗಾಗಿ ಆಯಾ ಚಿತ್ರ ತಂಡ ರಾಜ್ಯದ ವಿವಿಧ ಪಟ್ಟಣಗಳನ್ನು ಸುತ್ತುತ್ತಿವೆ. ಆ ಚಾಳಿ ಈಗ ಕಿರುತೆರೆ ಮಂದಿಗೂ ಬಂದಿದೆ. ಹೀಗಾಗಿ ಇಂದು ಸುವರ್ಣ ವಾಹಿನಿಯ ಮೂರು ಧಾರವಾಹಿಗಳ ಲಾಂಛ್ ಕುರಿತ ಪ್ರಮೋಷನ್ ಸುದ್ದಿಗೋಷ್ಠಿ ಇತ್ತು. ಅದರ ಪಾತ್ರಧಾರಿಗಳು ಬಂದಿದ್ದು, ತುಂಬಾ ತುಂಬಾನೇ ಲೇಟಾಗಿ ಪಾಪ... ನಿರ್ದೇಶಕರುಗಳೇ ಗೋಷ್ಠಿ ಆರಂಭಿಸಿದ್ದರು. ಕೊನೆಗೆ ಒಬ್ಬರ ಬಳಿಕ ಒಬ್ಬರಂತೆ ಬಂದ ಪಾತ್ರಧಾರಿಗಳು ನಾವು ತಡಮಾಡಿ ತಪ್ಪೇ ಮಾಡಿಲ್ಲ ಎನ್ನುವಂತೆ ಇದ್ದರು. ಆದರೆ ಸರಿಯಾದ ಸಮಯಕ್ಕೆ ಬಂದವರ ಬಗ್ಗೆಯಾಲಿ... ಸಮಯದ ಬೆಲೆಯಾಗಲಿ ಇವರಿಗೆ ಗೊತ್ತೆ ಇಲ್ಲ ಪಾಪ... ಸೌಜನ್ಯಕ್ಕೊಂದು ಇಲ್ಲ....

No comments:

Post a Comment

ಮನೆಪಾಠ ಕೇಂದ್ರಗಳಿಗೆ ಬ್ಯಾಗ್ ಮತ್ತು ಬುಕ್ಸ್ ವಿತರಣೆ

Dharwad: ಗುರುಕುಲ ಪದ್ಧತಿಯಂತೆ ಒಬ್ಬರೇ ಶಿಕ್ಷಕರಿಂದ ನಡೆಸುವ ಈ ನವೀನ ಪ್ರಯೋಗವೇ ಏಕ ಶಿಕ್ಷಕ ವಿದ್ಯಾಲಯ ಅಂದರೆ ಮನೆಪಾಠ ಕೇಂದ್ರ ಎಂದು ವನವಾಸಿ ಕಲ್ಯಾಣ ಕರ್ನಾಟಕ ಸಂಸ್ಥ...