Sunday, March 6, 2011

ನಿನ್ನ ಸಿಹಿನಗೆಯ ನಿರೀಕ್ಷೆಯಲ್ಲಿ

ಪ್ರಿಯ ಹುಣ್ಣಿಮೆ
ನಿನ್ನನ್ನು ಹೇಗೆ ಕರೆಯಬೇಕು ಅಂತಾ ತಿಳಿಯದ ಗಮಾರ ನಾನು. ಹೌದು ಕಣೇ ಎಷ್ಟೇ ಆದರೂ ನಾನು ನಿನ್ನ ದೃಷ್ಟಿಯಲ್ಲಿ ಒಬ್ಬ ಲೋಪರ ಅಲ್ವಾ? ನಿನ್ನ ಹೆಸರು ನೆನಪಿಸಿದರೆ ಸಾಕು ನನಗೆ ನಿನ್ನ ಬಗ್ಗೆ ಭಾವನೆಗಳನ್ನು ವ್ಯಕ್ತಪಡಿಸಲು ಶಬ್ದಗಳಿಗಾಗಿ ಹುಡುಕಾಡುವ ಪ್ರಸಂಗ ಬರುತ್ತದೆ. ಕಾರಣ ನೀನು ನನ್ನನ್ನು ಅಷ್ಟೊಂದು ಭಾವುಕನನ್ನಾಗಿಸಿದ್ದಿಯಾ.
ಅಲ್ವೇ ! ಹಿಂದಿನ ಮಾತು ಅಲ್ವಾ ಅದು, ಸುನಾಮಿ ಬಗ್ಗೆ ದಿನಪತ್ರಿಕೆಯೊಂದರಲ್ಲಿ ನಾನು ಬರೆದ ಲೇಖನ (ಕಲ್ಲಾಯಿತೇ ಕಡಲ ಮನಸ್ಸು) ಓದಿದ ನೀನು ತುಂಬಾ ಚನ್ನಾಗಿ ಬರೀತಿಯಾ ಅಂತಾ ಹಾರೈಸಿದ್ದೆ, ಅದೇ ನಾನು ನಿನಗೊಂದು ಪ್ರೇಮ ಪತ್ರ ಕೊಟ್ಟಾಗ, ನೀನು ನನಗೆ ಕೊಟ್ಟ ಬಿರುದು ಲೋಪರ ಅಂತಾ ಅಲ್ವಾ? ನಾನು ಕಡಲ ಮನಸ್ಸು ಕಲ್ಲಾಯಿತು ಅಂತಾ ಬರೆದಿದ್ದೆ, ಆದರೆ ನಾನು ಬಯಸಿದವಳ ಮನಸ್ಸೂ ಕಲ್ಲು ಅಂತಾ ಊಹಿಸಿರಲಿಲ್ಲ.
ಹುಡುಗಿ ನೀನು ಅಂದು ಏನೇನು ಬರೆದಿದ್ದೆ, ನೆನಪಿದೆಯಾ ? ಇಲ್ಲಾ ಅಲಾ, ಆದರೆ ನನಗೆ ಅದು ಚನ್ನಾಗಿ ನೆನಪಿದೆ. ಅಷ್ಟೇ ಅಲ್ಲದೇ ಇವತ್ತು ನನ್ನ ಯಶಸ್ಸಿಗೂ ಆ ದಿನ ಬಿಳಿಯ ಹಾಳೆಯಲ್ಲಿ ಕ್ಯಾಮಲ್ ಇಂಕಿನಿಂದ ಬರೆದ ಆ ನಿನ್ನ ಪತ್ರವೇ ಕಾರಣ. ಅಂದು ನೀನು ನನಗೆ ಕೆಲವೊಂದು ಸೂಚನೆ ನೀಡಿದ್ದೆ ಅದರಲ್ಲಿ ಪ್ರಥಮವಾಗಿ ನಿನ್ನ ಕಣ್ಣುಗಳು ಕೆಟ್ಟದಿವೆ ಅಂದಿದ್ದೆ, ಆದರೆ ನೋಡಲು ಮಾತ್ರ ನನ್ನವು ಮತ್ತೊಂಬರಲ್ಲಿ ಆಶೆ ಹುಟ್ಟಿಸುವ ಕಣ್ಣುಗಳಿರಬಹುದು, ಆದರೆ ನನ್ನ ಕಣ್ಣುಗಳ ತುಂಬಾ ನನ್ನ ಭವಿಷ್ಯದ ಕನಸ್ಸುಗಳಿವೆಯೇ ವಿನಹಃ ಬೇರಾವ ದೃಷ್ಟಿಯಿಲ್ಲ, ಆದರೆ ನೀನು ನನ್ನ ಕಣ್ಣುಗಳು ಸರಿ ಇಲ್ಲ. ಆದ್ದರಿಂದ ನನ್ನನ್ನು ಬಯಸಿದಂತೆ ಇನ್ಯಾವತ್ತು ಬೇರೆ ಯಾವುದೇ ಹುಡುಗಿಯನ್ನು ಕಣ್ಣೆತ್ತಿಯೂ ನೋಡಬೇಡ ಅಂದಿದ್ದೆ ಅಲ್ವಾ, ಹುಡುಗಿ ಈ ಎರಡು ವರ್ಷಗಳಲ್ಲಿ ನನ್ನನ್ನು ಮೆಚ್ಚಿ ಪ್ರೇಮಿಸಲು ಬಂದ ೬ ಜನ ಹುಡುಗಿಯರ ಹೃದಯಲ್ಲಿ ಸಹೋದರನ ಸ್ಥಾನ ನೀಡಿ ವಾಪಸ್ಸು ಕಳಿಸಿದ್ದೇನೆ ಗೊತ್ತಾ? ಇನ್ನು ಒಂದು ಮಾತು ಹೇಳಿದ್ದೆ ನೆನಪಿದೆಯಾ..., ನೀನು ಒಂದು ಒಳ್ಳೆಯ ಹೆಸರು ಮಾಡಬೇಕು, ಅಂದು ನಾನು ತುಂಬಾ ಸಂತೋಷ ಪಡುವೆ ಅಂದಿದ್ದೆ, ಆದರೆ ನಾನು ಎದುರಿಗೆ ಸಿಕ್ಕರೆ ಮುಖ ಸಿಂಡರಿಸಿಕೊಳ್ಳುವ ನಿನಗೆ ನನ್ನ ಯಶಸ್ಸಿನ ಬಗ್ಗೆ ಸಂತೋಷವಿಲ್ಲವೇ? ನಾನು ನಿನ್ನನ್ನು ಪ್ರೀತಿಸಿ ತಪ್ಪು ಮಾಡಿರಬಹುದು (ಅದು ನಿನ್ನ ದೃಷ್ಟಿಯಲ್ಲಿ ಮಾತ್ರ ತಪ್ಪು. ಏಕೆಂದರೆ ಪ್ರೀತಿಸುವುದು ತಪ್ಪು ಅಂತಾ ಹರಿ, ಹರ, ಬ್ರಹ್ಮರು ಒಪ್ಪುವುದಿಲ್ಲ) ಆ ಬಳಿಕ ನಾನು ನನ್ನ ತಪ್ಪನ್ನು ಒಪ್ಪಿಕೊಂಡು ಆವತ್ತೇ ಊರು ಬಿಟ್ಟು, ಒಂದು ಹೆಸರು ಅಂತಾ ಮಾಡಿದ್ದೇನೆ, ಆದರೆ ಅದಕ್ಕೆ ಸ್ಫೂರ್ತಿಯಾದ ನಿನ್ನಲ್ಲಿ, ನಿನ್ನ ಮುಖದಲ್ಲಿಯೇ ಸಂತೋಷದ ನಗುವಿಲ್ಲ ಏಕೆ?
ಆದರೆ ಹುಡುಗಿ ! ನೀನು ಹೇಳಿದ ಒಂದು ಮಾತನ್ನು ಮಾತ್ರ ನನಗೆ ಪಾಲಿಸಲಾಗಿಲ್ಲ, ಅದು ನಾನು ಬರೆದ ಈ ಪತ್ರವನ್ನು ಹರಿದು ಹಾಕಿಬಿಡು ಅಂತಾ ನೀನು ಹೇಳಿದ್ದೆ ಅಲ್ವಾ, ಆದರೆ ನಾನು ಅದನ್ನು ನನ್ನ ಫೈಲ್‌ನಲ್ಲಿ ಜೋಪಾನವಾಗಿ ಇಟ್ಟಿದ್ದೇನೆ, ಯಾವುದಾದರೂ ಕೆಲಸ ನನ್ನಿಂದ ಆಗದು ಅನಿಸಿದಾಗ ನಾನು ನೋಡುವುದು ಆ ನಿನ್ನ ಪತ್ರವನ್ನೇ, ಅದನ್ನು ನೋಡುತ್ತಿದ್ದಂತೆ ಅದೆಲ್ಲಿಯ ಉತ್ಸಾಹ, ಹುಮಸ್ಸು ನನನ್ನು ಆವರಿಸಿಕೊಳ್ಳುತ್ತದೆಯೋ ಗೊತ್ತಿಲ್ಲ, ಆದರೆ ಆ ಪತ್ರದಲ್ಲಿ ನೀನು ನನಗೆ ಹಿಮಾಲದೆತ್ತರ ಬೆಳೆಯುವ ಕನಸು ಕಾಣು, ಈ ಪ್ರೀತಿ,ಗೀತಿ ಅಂತಾ ಹಾಳಾದನ್ನು ವಿಚಾರಿಸುವುದು ಬಿಟ್ಟು ನಿನ್ನ ಗುರಿ ಸಾಧಿಸುವುದರಲ್ಲಿ ಶ್ರದ್ಧೆ ತೋರಿಸು, ಆಗ ನಾನು ನಿನ್ನ ತುಂಬಾ ಇಷ್ಟ ಪಡಬಲ್ಲೆ, ಆದರೆ ಪ್ರೀತಿಸುವುದಿಲ್ಲ, ನೆನಪಿರಲಿ ಅಂದಿದ್ದೆ, ನೀನಗೆ ನೆನಪೂ ಇಲ್ಲದೇ ಇರಬಹುದು. ಆದರೀಗ ನಾನೂ ಕೊರೆಯುವ ಹಿಮ ಚಳಿಯನ್ನು ಲೆಕ್ಕಿಸದೇ ಹಿಮಾಲಯ ಏರಿ ಬಿಟ್ಟಿದ್ದೇನೆ. ಇಲ್ಲಿ ನನ್ನ ಸಾಧನೆಯ ಬಾವುಟ ಹಾರಿಸಬೇಕು. ಅಂದರೆ ನನಗೆ ಸ್ಫ್ಪೂರ್ತಿಯಾದ ನೀನು ನಾನು ಎದುರಿಗೆ ಸಿಕ್ಕರೆ, ಮುಖ ಸಿಂಡರಿಸಿಕೊಳ್ಳುತ್ತಿಯಾ, ಇದರಿಂದ ನಾನೇರಿದ ಹಿಮಾಲಯದಲ್ಲಿ ಬಾವುಟ ಹಾರಿಸಲು ಆಗದೇ, ಜಾರಿ ಬಿಳುತ್ತಿದ್ದಂತೆ ಹಿಮ ಪರ್ವತವೊಂದು ಬಂದು ನನಗಪ್ಪಳಿಸಿದಂತಾಗುತ್ತಿದ್ದೆ. ನಿನಗೆ ನನ್ನ ಸಾಧನೆಯ ಬಗ್ಗೆ ಸಂತೋಷ ಆಗಲೇಬೇಕು ಅಂದರೆ, ನಾನು ಇನ್ನು ಸಾಧಿಸಬೇಕಾ? ಅಂದರೆ ಅದಕ್ಕೂ ನಿನ್ನಲ್ಲಿ ಉತ್ತರವಿಲ್ಲ. ಈ ರೀತಿ ಪ್ರಶ್ನಾರ್ಥಕಳಾಗಿ ಮೌನವಾಗಿಯೇ ಉಳಿದು ಬಿಡುವೆಯಾ ವಿಚಾರಿಸು.
ನಿನ್ನ ಸಿಹಿನಗೆಯ ನಿರೀಕ್ಷೆಯಲ್ಲಿ-
ಪುಟ್ಟರಾಜ್

No comments:

Post a Comment

ಮನೆಪಾಠ ಕೇಂದ್ರಗಳಿಗೆ ಬ್ಯಾಗ್ ಮತ್ತು ಬುಕ್ಸ್ ವಿತರಣೆ

Dharwad: ಗುರುಕುಲ ಪದ್ಧತಿಯಂತೆ ಒಬ್ಬರೇ ಶಿಕ್ಷಕರಿಂದ ನಡೆಸುವ ಈ ನವೀನ ಪ್ರಯೋಗವೇ ಏಕ ಶಿಕ್ಷಕ ವಿದ್ಯಾಲಯ ಅಂದರೆ ಮನೆಪಾಠ ಕೇಂದ್ರ ಎಂದು ವನವಾಸಿ ಕಲ್ಯಾಣ ಕರ್ನಾಟಕ ಸಂಸ್ಥ...