Wednesday, December 29, 2010

ಆರ್.ಎಚ್. ಕುಲಕರ್ಣಿ ಸ್ಮಾರಕ ಟ್ರಸ್ಟ್‌ನ ಪತ್ರಿಕಾ ಪ್ರಶಸ್ತಿ

ಬೆಳಗಾವಿಯಲ್ಲಿ ಸೋಮವಾರ ಆರ್.ಎಚ್. ಕುಲಕರ್ಣಿ ಸ್ಮಾರಕ ಟ್ರಸ್ಟ್‌ನ ಪತ್ರಿಕಾ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ವಿಶ್ವನಾಥ ಬಾಬುರಾವ್ ಪಾಟೀಲರಿಗೆ ಸಿ.ವಿ. ಬೆಳ್ಳಕ್ಕಿಯವರು ಪ್ರದಾನ ಮಾಡಿದರು. ಸುಭಾಷ ಕುಲಕರ್ಣಿ, ಎಸ್.ಎಂ. ಕುಲಕರ್ಣಿ ಚಿತ್ರದಲ್ಲಿದ್ದಾರೆ. ಬೆಳಗಾವಿ, ೨೭- ಮಾಧ್ಯಮವನ್ನು ಜನರು ನಿಯಂತ್ರಿಸಬೇಕು. ಆದರೆ ಮಾಧ್ಯಮಗಳು ಇಂದು ಜನರನ್ನೇ ತನ್ನ ನಿಯಂತ್ರಣದಲ್ಲಿಟ್ಟುಕೊಂಡಿವೆ. ಇದನ್ನು ಬದಲಿಸಿ ಮಾಧ್ಯಮಗಳನ್ನು ಸರಿ ದಾರಿಗೆ ತರಬೇಕಾದ ಜವಾಬ್ದಾರಿ ಜನರ ಮೇಲಿದೆ ಎಂದು ಧಾರವಾಡ ಆಕಾಶವಾಣಿಯ ವಲಯ ನಿರ್ದೇಶಕ ಸಿ.ವಿ. ಬೆಳ್ಳಕ್ಕಿ ಅಭಿಪ್ರಾಯಪಟ್ಟರು. ನಗರದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಆರ್.ಎಚ್. ಕುಲಕರ್ಣಿ ಸ್ಮಾರಕ ಟ್ರಸ್ಟ್‌ನ ರಾಜ್ಯಮಟ್ಟದ ಪತ್ರಿಕಾ ಪ್ರಶಸ್ತಿಯನ್ನು ಹಿರಿಯ ಪ್ರರ್ತಕರ್ತ ವಿಶ್ವನಾಥ ಬಾಬುರಾವ್ ಪಾಟೀಲರಿಗೆ ಪ್ರದಾನ ಮಾಡಿ ಮಾತನಾಡಿದ ಅವರು, ಇಂದು ಪ್ರತಿಯೊಬ್ಬರಿಗೂ ಮಾಧ್ಯಮ ಶಿಕ್ಷಣದ ಅವಶ್ಯಕತೆಯಿದೆ. ನಮ್ಮಲ್ಲಿ ಸಿಟಿಜನ್ ಜರ್ನಾಲಿಸಮ್ ಬೆಳೆಯಬೇಕಾಗಿತ್ತು. ಆದರೆ ಅದು ಬೆಳೆಯದ ಕಾರಣ ಇಂದು ಮಾಧ್ಯಮಗಳು ಈ ಸ್ಥಿತಿಗೆ ಬರಬೇಕಾಗಿದೆ ಎಂದರು. ಮಾಧ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಆಯಾಮ ಎನ್ನಲಾಗುತ್ತದೆ. ಆದರೆ ಇದಕ್ಕಿಂತಲೂ ದೊಡ್ಡದಾದ ಐದನೇ ಆಯಾಮವೊಂದು ಇದ್ದು, ಅದೇ ಜನಜಾಗೃತಿ. ಇಂದು ಮಾಧ್ಯಮಗಳ ಬಗ್ಗೆ ಜನಜಾಗೃತಿ ಮೂಡಬೇಕಾಗಿದೆ. ಪ್ರತಿಯೊಬ್ಬರು ಮಾಧ್ಯಮಗಳ ಬಗ್ಗೆ ತಿಳಿದುಕೊಳ್ಳಬೇಕಾಗಿದೆ. ಮಾಧ್ಯಮಗಳಲ್ಲಿ ಇಂದು ಪ್ರತಿಭಾವಂತರ ಕೊರತೆ ಎದ್ದು ಕಾಣುತ್ತಿದ್ದು, ಸಾರ್ವಜನಿಕರೇ ಮುಂದೆ ಬಂದು ಸಮಾಜದಲ್ಲಿ ಕ್ರಾಂತಿ ಮಾಡುವಂತಹ ಪ್ರತಿಭೆಗಳನ್ನು ಮಾಧ್ಯಮಕ್ಕೆ ನೀಡಬೇಕಾಗಿದೆ ಎಂದು ಹೇಳಿದರು. ಪತ್ರಿಕಾರಂಗ ಅಥವಾ ಮಾಧ್ಯಮವನ್ನು ಹರಿತವಾದ ಚೂರಿಗೆ ಹೋಲಿಸಲಾಗುತ್ತದೆ. ಚೂರಿ ದುಷ್ಟನ ಕೈಗೆ ಸಿಕ್ಕರೇ ಕೊಲೆಯಾಗುತ್ತದೆ. ಸರ್ಜನ್ ಕೈಗೆ ಸಿಕ್ಕರೇ ಓರ್ವನ ಜೀವ ಉಳಿಯುತ್ತದೆ. ಇಂದು ಮಾಧ್ಯಮಗಳ ವಿಷಯದಲ್ಲಿ ಆಗಿರುವುದೇ ಇದೆ. ಮಾಧ್ಯಮ ಹಾಗೂ ಪತ್ರಿಕೆಗಳ ಶಕ್ತಿ ಎಂತಹದು ಎನ್ನುವುದನ್ನು ಈಡೀ ಜಗತ್ತಿಗೆ ತೋರಿಸಿಕೊಟ್ಟ ಕೀರ್ತಿ ಶ್ರೇಷ್ಠ ಪತ್ರಕರ್ತರೂ ಆಗಿದ್ದ ಮಹಾತ್ಮಾ ಗಾಂಧಿಜಿಯವರಿಗೆ ಸಲ್ಲುತ್ತದೆ. ಈ ರೀತಿಯ ಹಿನ್ನೆಲೆಯು ಮಾಧ್ಯಮ ಕ್ಷೇತ್ರಕ್ಕೆ ಜನರೇ ಕಿಂಗ್ ಆಗಬೇಕು ಎಂದರು. ಹಿರಿಯ ಪತ್ರಕರ್ತ ವಿಶ್ವನಾಥ ಬಾಬುರಾವ್ ಪಾಟೀಲ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಪರ್ತಕರ್ತನ ವೃತ್ತಿ ಹೊಟ್ಟೆಪಾಡಿಗೆ ಮಾಡಬೇಕಾಗಿರುವುದು ಅಲ್ಲ. ಹೊಟ್ಟೆ ತುಂಬಿಸಿಕೊಳ್ಳುವುದಕ್ಕೆ ಬೇರೆ ಸಾಕಷ್ಟು ವೃತ್ತಿಗಳಿವೆ. ಆದರೆ ಈ ವೃತ್ತಿಯಲ್ಲಿ ಹೊಟ್ಟೆಪಾಡಿಗಿಂತ ಸಮಾಜದಲ್ಲಿ ಪರಿವರ್ತನೆ ತರಬೇಕಾದ ಜವಾಬ್ದಾರಿಯಿದೆ. ಮಾನಸಿಕವಾಗಿ ಬದಲಾವಣೆಯನ್ನು ತರುವ ಮೂಲಕ ಸಮಾಜದಲ್ಲಿ ಪರಿವರ್ತನೆ ಮೂಡಿಸಲು ಸಾಧ್ಯ ಎಂದರು. ಹಿರಿಯ ನ್ಯಾಯವಾದಿ ಎಸ್.ಎಂ. ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಸುಭಾಷ ಕುಲಕರ್ಣಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

No comments:

Post a Comment

ವರ್ಷದ ಕೊನೆ ದಿನ ಕರೆಂಟ್ ಕಟ್

 ವಿದ್ಯುತ ವ್ಯತ್ಯಯ ಧಾರವಾಡ (ಕರ್ನಾಟಕ ವಾರ್ತೆ) ಡಿ.28:* ಹೆಸ್ಕಾಂನ 110 ಕೆವಿ. ಯು.ಎ.ಎಸ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ...