Thursday, December 2, 2010

ಹೇಳಿ ಹೋಗು ಕಾರಣ
ಹೋಗುವ ಮೊದಲು ಹೇಳಿ ಹೋಗು ಕಾರಣ
ನಮ್ಮ ಬಾಳಿನಿಂದ ದೂರಾಗುವ ಮೊದಲು...!
ಒಲವೆಂಬ ಹಣತೆ ಎದೆಯಲ್ಲಿ ಬೆಳಗಿ ಬೆಳಕ
ಇಂದೇಕೆ ಹೀಗೆ ಬೆಳಕನ್ನು ತೊರೆದು ನೀ ಸರದೇ ನೆರಳಿಗೆ
ಏನಿದು ವಿಧಿಯ ಲೀಲೆ. ಆ ದೇವರು ಎಲ್ಲರನ್ನೂ ಹುಟ್ಟಿಸಿ ಬೆನ್ನಹಿಂದೆಯೇ ಸಾವು ಎನ್ನುವ ನೆರಳನ್ನು ಸಹ ಕಟ್ಟಿಕೊಟ್ಟಿರುವುದೇನೋ ಸರಿ. ಹೀಗಾಗಿ ಎಲ್ಲರೂ ಒಂದಲ್ಲ ಒಂದು ದಿನ ಸಾಯಲೇ ಬೇಕು. ಆದರೆ ಈ ಸಾವಿನ ವಿಷಯದಲ್ಲಿ ವಿಧಿಯಾ ಆಟಕ್ಕೆ ಏನು ಅನ್ನಬೇಕು ತಿಳಿಯದು.
ಅದು ನನ್ನ ಇಷ್ಟದ ನಟ ಶಂಕರನಾಗ ಇರಬಹುದು. ನಟಿ ಸೌಂದರ್ಯ ಇರಬಹುದು ಎಲ್ಲರ ಜೀವನದಲ್ಲಿಯೂ ವಿಧಿ ತನ್ನ ಆಟ ಆಡಿ ಬಿಟ್ಟಿತ್ತು. ಈ ಸಾಲಿನಲ್ಲೀಗ ಸಿ. ಅಶ್ವಥ್ ಸೇರಿದ್ದಾರೆ.
ನಾನು ಚಿಕ್ಕವನಿದ್ದಾಗ ಶಿಶುನಾಳ ಷರೀಫ್ ಚಿತ್ರದಲ್ಲಿನ ಸೋರುತಿಹುದು ಮನೆಯ ಮಾಳಿಗೆ ಹಾಡು ನಾವು ತುಂಬಾ ಕೇಳಿದ್ದೇವು. ನಾನು ನಮ್ಮ ಮನೆ ಪಕ್ಕದ ಗೌಡ್ರ ಮನೆಯಲ್ಲಿದ್ದಾಗ ಅವರ ಮನೆಯಲ್ಲಿ ವಿಸಿಪಿ ಇತ್ತು ಜೊತೆಗೆ ಶಿಶುನಾಳ ಷರೀಫ್ ಚಿತ್ರದ ಕ್ಯಾಸೆಟ್ ಇತ್ತು. ಆಗಾಗ ನಾವು ಅವರ ಮನೆಯಲ್ಲಿ ಯಾರೂ ಇಲ್ಲದಾಗ ಅವರ ಮನೆಯಲ್ಲಿನ ನನ್ನ ಸ್ನೇಹಿತ ಮತ್ತು ನಾನು ಕ್ಯಾಸೆಟ್ ಹಾಕಿ ಪದೇ ಪದೇ ಅದೇ ಹಾಡು ಕೇಳುತ್ತಿದ್ಧೇವು. ಆದರೆ ನಮಗೆ ಆಗ ಈ ಹಾಡು ಹಾಡಿರುವುದು ಸಿ. ಅಶ್ವಥ್ ಅಂತ ಗೊತ್ತಿರಲಿಲ್ಲ.
ಕ್ರಮೇಣ ನಾವು ದೊಡ್ಡವರಾದಂತೆ ಈ ಹಾಡು ಹಾಡಿರೋದು ಅಶ್ವಥ್ ಅಂತ ಗೊತ್ತಾಯಿತು. ಹಾಗೂ ಇದೇ ರೀತಿಯ ಬಹಳ ಹಾಡುಗಳನ್ನು ಅವರು ಹಾಡಿದ್ದಾರೆ. ಅವುರ ಹಾಡಿನ ಕ್ಯಾಸೆಟ್ಗಳು ಸಾಕಷ್ಟಿವೆ ಅಂತ ತಿಳಿತು. ಆ ಬಳಿಕ ನಾವು ಅಶ್ವಥ್ರ ಪಕ್ಕಾ ಅಭಿಮಾನಿಗಳಾದೇವು. ಅವರ ಮನೆಯಲ್ಲಿ ಟೇಪ್ ರೇರ್ಕಾಡ್ಗೆ ಅಶ್ವಥ್ರ ಗೀತೆಗಳನ್ನು ಹಾಕಿ ಕೇಳಬೇಕು ಅಂತಾ ನಮ್ಮ ದೊಡ್ಡಪ್ಪನ ಮಗನಿಗೆ ತಾರಾ (ಗುಟಕಾ) ತಿನ್ನಲು ೨ ರೂ. ಕಮೀಷನ ಕೊಟ್ಟು ಬೆಳಗಾವಿಯಿಂದ ನಾಲ್ಕು ಕ್ಯಾಸೆಟ್ ತರಿಸಿಕೊಂಡಿದ್ದೇವು. ಹೀಗಾಗಿ ಅವರ ಹಾಡುಗಳ ಮೂಲಕ ಅಶ್ವಥ್ ಸದಾ ನಮ್ಮೊಂದಿಗೆ ಇರುತ್ತಿದ್ದರು.

ನಾನು ೧೦ನೇ ತರಗತಿ ಮುಗಿಸಿದಾಗ ಮೆಣಸಿನಗಿಡಕ್ಕೆ ಬೊರವೆಲ್ ನೀರು ಹಾಯಿಸಲು ರಾತ್ರಿ ಹೊತ್ತು ಹೊಲಕ್ಕೆ ಹೋಗಬೇಕಾಗುತ್ತಿತ್ತು. ಆಗ ನಾನು ೪ ಸೆಲ್ಗಳ ಪಿಲಿಪ್ಸ್ ಟೇಪ್ ತಗೊಂಡು ಅದರ ಜೊತೆಗೆ ನಾಲ್ಕೈದು ಅಶ್ವಥ್ ಕ್ಯಾಸೆಟ್ ತೆಗೆದುಕೊಂಡು ಹೊಲಕ್ಕೆ ಹೋಗುತ್ತಿದೆ. ಅಶ್ವಥ್ರ ಗಾಯನ ಕಂಠ ನನ್ನ ಜೊತೆಗಿದ್ದರೇ ಯಾವ ದೆವ್ವ-ಮಿಕ್ (ಕಾಡು ಹಂದಿ)ದ ಭಯವೂ ಇರುತ್ತಿರಲಿಲ್ಲ.
ಇತ್ತೀಚೆಗೆ ಎರಡು ವರ್ಷಗಳ ಹಿಂದೆ ಕರ್ನಾಟಕ ರಕ್ಷಣಾ ವೇದಿಕೆ ತನ್ನ ವರ್ಷಾಚರಣೆ ನಿಮಿತ್ತ ಸರದಾರ್ಸ್ ಮೈದಾನದಲ್ಲಿ ಅಶ್ವಥ್ರ ಕಾರ್ಯಕ್ರಮ ಆಯೋಜಿಸಿತ್ತು. ಅಂದು ಅವರು `ಕನ್ನಡವೇ ಸತ್ಯ' ಕಾರ್ಯಕ್ರಮದಲ್ಲಿ ಹಾಡಿದ ಹಾಡುಗಳು ಇವತ್ತಿಗೂ ನೆನೆಪಿದೆ.
ಇಂದು ಬೆಳಿಗ್ಗೆ ಊರಿಂದ ಬರಬೇಕಾದರೆ ಈ ಟಿವಿಯಲ್ಲಿ ೮ ಗಂಟೆಗೆ ಅಶ್ವಥ್ ಹುಟ್ಟುಹಬ್ಬದ ನಿಮಿತ್ತ ವಿಶೇಷ ಕಾರ್ಯಕ್ರಮ ಇತ್ತು. ಅಪರ್ಣಾ ನಡೆಸಿಕೊಟ್ಟ ಆ ಕಾರ್ಯಕ್ರಮ ನೋಡುವುದಕ್ಕಾಗಿಯೇ ನಾನು ಮೊದಲ ಬಸ್ ಬಿಟ್ಟು ಕಾರ್ಯಕ್ರಮ ನೋಡಿಕೊಂಡು ಲೇಟಾಗಿ ಬೆಳಗಾವಿ ಬಂದು ಕೆಲಸಕ್ಕೆ ಸೇರಿದೆ.
ಆದರೆ ಆಫೀಸ್ಗೆ ಬಂದು ಟಿವಿ ಆನ್ ಮಾಡುತ್ತಿದ್ದಂತೆ ಸ್ನೇಹಿತ ಬಸ್ಸು ಫೋನ್ ಮಾಡಿ ಸಿಡಿಲಿನಂತೆ ಎರಗಿ ಬಂದ ಸುದ್ದಿ ಹೇಳಿದಾಗ ನನ್ನ ಎದೆ ಸೀಳಿದಂತಾಯಿತು.
ಆ ದೇವರು ಎಷ್ಟು ಪಾಪಿ ಅಲ್ವಾ ಇವತ್ತು ಅಶ್ವಥ್ರ ಅಭಿಮಾನಿಗಳು ಹಾಗೂ ಶಿಷ್ಯಂದಿರು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಶ್ವಥ್ರ ಹುಟ್ಟುಹಬ್ಬದ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಅದಕ್ಕೆ ಬರುವಂತೆ ಬೆಂಗಳೂರಿನ ನನ್ನ ಸ್ನೇಹಿತ ಮೊನ್ನೆನೇ ಹೇಳಿದ್ದರು. ನನ್ನ ಸ್ನೇಹಿತರು ತಮ್ಮ ಮುಂದಿನ ಚಿತ್ರದಲ್ಲಿ ಅವರ ಗೀತೆಯೊಂದನ್ನು ಬಳಸಿಕೊಳ್ಳಬೇಕು ಅಂತಾ ಚಿಂತನೆನೂ ನಡೆಸಿದ್ರು. ಆದರೆ ಆ ಕನಸು ಎಲ್ಲ ಈಗ ಕಸಸಾಗಿಯೇ ಉಳಿತು.
ಆದರೀಗ ಅವರ ಹುಟ್ಟು ಹಬ್ಬದ ಸಂಭ್ರಮಕ್ಕೆ ಸೂತಕದ ಛಾಯೆ ಮೂಡಿಸಿರುವ ಆ ದೇವರಿಗೆ ಯಾವುದರಿಂದ ಹೊಡೆಯಬೇಕು. ಅದಕ್ಕೆ ಅಲ್ವಾ ದೇವರು ಪಾಪಿ ಅನ್ನೊಂದು. ಎಲ್ಲರಿಗೂ ಸಾವು ಬಂದೇ ಬರುತ್ತದೆ. ಆದರೆ ಅಶ್ವಥ್ರಿಗೆ ಇಂತಹ ವಯಸ್ಸೇನೂ ಆಗಿರಲಿಲ್ಲ. ಸ್ವಲ್ವ ಮಟ್ಟಿಗೆ ಅನಾರೋಗ್ಯ ಪೀಡಿತರಾಗಿದ್ದರು. ಅಷ್ಟಕ್ಕೇ ಅವರನ್ನು ಕರೆಯಿಸಿಕೊಂಡು ಬೀಡೋದಾ ಆ ಪಾಪಿಸ್ಟ ದೇವರು.
ಏನೇ ಆಗಲಿ ನಮ್ಮ ಪಾಲಿನ ದೇವರಂತಹ ಗಾಯಕ ಅಶ್ವಥ್ ಅಜ್ಜನಿಗೆ ಈ ರೀತಿ ಸಾವು ಬರಬಾರದಿತ್ತು.
Posted by BELGAUM NEWS at 12:07 AM 0 comments
Tuesday, December 8, 2009
ಈ ಕೇಂದ್ರಕ್ಕಿಲ್ಲ ಯಾರು ಗತಿ

ರಾಜ್ಯ ಸರ್ಕಾರಕ್ಕೆ ಶಿಕ್ಷಣ ವ್ಯವಸ್ಥೆಯ ಅಭಿವೃದ್ಧಿ ಬಗ್ಗೆ ಕಿಂಚಿತ್ತು ಕರುಣೆಲ್ಲ ಎನ್ನುವುದಕ್ಕೆ ಇಲ್ಲಿನ ಕಿತ್ತೂರ ರಾಣಿ ಚನ್ನಮ್ಮ ಸ್ನಾತಕೋತ್ತರ ಅಧ್ಯಯನ ಕೇಂದ್ರ ಉತ್ತಮ ಉದಾಹರಣೆ.
ಇಲ್ಲಿನ viದ್ಯಾರ್ಥಿಗಳು ಅನುಭviಸುತ್ತಿರುವ ಗೋಳು ಕಂಡರೇ ಸರ್ಕಾರ ಶಿಕ್ಷಣ ವ್ಯವಸ್ಥೆಯನ್ನು ಯಾವ ರೀತಿ ನಿರ್ಲಕ್ಷಿಸುತ್ತದೆ ಎನ್ನುವುದು ತಿಳಿದು ಬರುತ್ತದೆ. ಈ ಕೇಂದ್ರವನ್ನು ಸ್ವತಂತ್ರ vvಯನ್ನಾಗಿಸಬೇಕು ಎನ್ನುವ ಹೋರಾಟಗಳು ಒಂದೇಡೆ ನಡೆದಿದ್ದರೇ ಮತ್ತೊಂದೆಡೆ ಈಗ ಇರುವ ಅಧ್ಯಯನ ಕೇಂದ್ರಕ್ಕೆ ನೀಡಬೇಕಾದ ಮೂಲಭೂತ ಸೌಕರ್ಯಗಳ viಷಯದಲ್ಲಿಯೂ ಸಹ ಸರ್ಕಾರ ದಿವ್ಯ ನಿರ್ಲಕ್ಷ್ಯ ವhiಸಿದೆ.
ಧಾರವಾಡದ ಕರ್ನಾಟಕ viಶ್ವviದ್ಯಾಲಯ ಉಪಅಂಗವಾಗಿರುವ ಈ ಕಿತ್ತೂರ ರಾಣಿ ಚೆನ್ನಮ್ಮ ಸ್ನಾತಕೋತ್ತರ ಅಧ್ಯಯನ ಕೇಂದ್ರ ಬೆಳಗಾvi ನಗರದಿಂದ ೨೨ ಕಿ.mi ಅಂತರದಲ್ಲಿ ಭೂತರಾಮನಹಟ್ಟಿ ಗ್ರಾಮದ ಬೆಟ್ಟಕ್ಕೆ ಹೊಂದಿಕೊಂಡು ಸುಮಾರು ೧೭೮ ಎಕರೆ ಪ್ರದೇಶದಲ್ಲಿ ವ್ಯಾಪಿಸಿಕೊಂಡಿದೆ. ಆದರೆ ಈ ಕೇಂದ್ರದ ಹೆಸರಿಗೆ ಮಾತ್ರ ೧೭೮ ಎಕರೆ ಇದೆ. ಏಕೆಂದರೆ ಐದಾರು ಎಕರೆ ಪ್ರದೇಶ ಬಿಟ್ಟು ಉಳಿದ ನೂರಾರು ಎಕರೆ ಜmeeನು ಖಾಲಿ ಬಿದ್ದಿದ್ದು, ಇಲ್ಲಿ ಯಾವುದೇ ಸುಧಾರಣೆ ಕಾರ್ಯ ಕೈಗೊಂಡಿಲ್ಲ.
viದ್ಯಾರ್ಥಿಗಳ ಸರ್ವಾಂಗಿಣ ಅಭಿವೃದ್ಧಿgagi ಕ್ರೀಡೆ ಹಾಗೂ ಸಾಂಸ್ಕೃತಿಕ ಮನರಂಜನೆಯ ಕಾರ್ಯಕ್ರಮಗಳನ್ನು ನಡೆಸಲು ಹೊರಾಂಗಣ ಮತ್ತು ಒಳಾಂಗಣ ಆಟದ ಮೈದಾನವೂ ಇಲ್ಲಿ ಇಲ್ಲ. ಇದಕ್ಕಾಗಿಯೇ ಸಾಕಷ್ಟು ಜಾಗviದ್ದರೂ ಸಹ ಸರ್ಕಾರ ಈ ಬಗ್ಗೆ ಯಾವುದೇ ರೀತಿಂದ ಸ್ಪಂದಿಸುತ್ತಿಲ್ಲ.
ಒಂದು ಕಟ್ಟಡ, ೮ viಭಾಗ ಹಾಗೂ ಕೆಲವೊಂದು ಪುಸ್ತಕ ಇನ್ನು ಕೆಲವೊಂದು ಉಪನ್ಯಾಸ ಸಿಬ್ಬಂದಿಯನ್ನು ನೀಡಿ ಕೈ ತೊಳೆದುಕೊಂಡಿರುವ ಸರ್ಕಾರ ಆ ಬಳಿಕ ಈ ಕೇಂದ್ರದ ಸುಧಾರಣೆ ಬಗ್ಗೆ ಕಿಂಚಿತ್ತು ಗಮನ ಹರಿಸಿಲ್ಲ. ೧೯೮೨ ರಲ್ಲಿ ಸ್ಥಾಪನೆಗೊಂಡು ೨೭ ವರ್ಷ ಕಳೆದರೂ ಸಹ ಈ ಅಧ್ಯಯನ ಕೇಂದ್ರಕ್ಕೆ ಹೋಗುವುದಕ್ಕಾಗಿ ಸರಿಯಾದ ಸಾರಿಗೆ ವ್ಯವಸ್ಥೆ, ಸುಧಾರಿತ ರಸ್ತೆ ಹಾಗೂ ಮಾರ್ಗಸೂಚಿ ಫಲಕಗಳಿಲ್ಲ ಎನ್ನುವುದು ಖೇದದ ಸಂಗತಿ.

ತಾರತಮ್ಯ:
ಯಾವುದೇ ಸರ್ಕಾರಿ ಕಾಲೇಜು ಅಥವಾ ಇನ್ನಾವುದೋ viದ್ಯಾ ಸಂಸ್ಥೆದ್ದರೇ ಅಲ್ಲಿ viದ್ಯಾರ್ಥಿಗಳಿಗಿಂತ ಮೊದಲು viದ್ಯಾರ್ಥಿನಿಯರಿಗಾಗಿ ವಸತಿ ನಿಲಯ ಕಟ್ಟಿಸುವುದು ಸಾಮಾನ್ಯ. ಆದರೆ ಇಲ್ಲಿ viಚಿತ್ರವೆಂದರೆ viದ್ಯಾರ್ಥಿಗಳಿಗೆ ವಸತಿ ನಿಲಯviದ್ದು, ಒಟ್ಟು ೪೭೮ viದ್ಯಾರ್ಥಿಗಳ ಪೈಕಿ ೨೦೬ viದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದರೂ ಸಹ viದ್ಯಾರ್ಥಿನಿಯರಿಗಾಗಿ ವಸತಿ ನಿಲಯವೇ ಇಲ್ಲ.
ಈ ಕೇಂದ್ರದಲ್ಲಿ ಬೇರೆ ಜಿಲ್ಲೆ ಹಾಗೂ ಬೇರೆ ರಾಜ್ಯದ viದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಾರೆ. ಆದರೆ ದೂರದ viದ್ಯಾರ್ಥಿನಿಯರಿಗೆ ಇಲ್ಲಿ ವಸತಿ ವ್ಯವಸ್ಥೆಯೇ ಇಲ್ಲದ ಕಾರಣ ಕಾಕತಿ, ಹೊನಗಾ ಹಾಗೂ ಬೆಳಗಾvi ನಗರದಲ್ಲಿ ದುಬಾರಿ ಬಾಡಿಗೆ ಕೊಟ್ಟು ಖಾಸಗಿ ರೂಮ್ಗಳಲ್ಲಿ ವಾಸವಾಗಿದ್ದಾರೆ. ಆದರೆ ಇನ್ನೊಂದು viಚಿತ್ರವೆಂದರೆ ಕಾರವಾರದಲ್ಲಿನ ಅಧ್ಯಯನ ಕೇಂದ್ರದಲ್ಲಿ ಕೇವಲ ೫೦ಕ್ಕಿಂತ ಕಡಿಮೆ viದ್ಯಾರ್ಥಿನಿಯರಿದ್ದರೂ ಸಹ ಅಲ್ಲಿ ವಸತಿ ನಿಲಯ odagiಸಲಾಗಿದೆ. ಆದರೆ ಇಲ್ಲಿ ಮಾತ್ರ ಏಕೆ ಈ ರೀತಿಯ ತಾರತಮ್ಯ?
ಈ ಕೇಂದ್ರಕ್ಕೆ ಸುಮಾರು ೩೦೦ಕ್ಕೂ ಹೆಚ್ಚು viದ್ಯಾರ್ಥಿಗಳು ಬೆಳಗಾviyinದ ಬಸ್ ಮೂಲಕವೇ ಬರಬೇಕಾಗುತ್ತದೆ. ಆದರೆ ಇಲ್ಲಿ ನಗರ ಸಾರಿಗೆಂದ ಕೇವಲ ಬೆಳಿಗ್ಗೆ ಮತ್ತು ಸಂಜೆ ಸೇರಿ ಒಂದೇರಡೂ ಬಸ್ ಬಿಟ್ಟಿರೇ ಹೆಚ್ಚಿಗೆ ಬಸ್ ಸೌಕರ್ಯviಲ್ಲ. heeಗಾಗಿ ಇರುವ ಎರಡು ಬಸ್ಗಳಲ್ಲಿಯೇ viದ್ಯಾರ್ಥಿಗಳು ತೂಗು ಬಿದ್ಡು ಟಾಪ್ ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಇದೆ.
ಕನ್ನಡ ಪುಸ್ತಕಗಳ ಕೊರತೆ:
ಬೇರೆ ರಾಜ್ಯದಲ್ಲಿರುವ ಅಧ್ಯಯನ ಕೇಂದ್ರಗಳಲ್ಲಿ ಕನ್ನಡ ಪುಸ್ತಕಗಳ ಕೊರತೆ ಇದ್ದರೆ ಅದು ಸಾಮಾನ್ಯ ಎನ್ನಬಹುದು. ಆದರೆ ಕರ್ನಾಟಕದಲ್ಲಿಯೇ ಇರುವ ಈ ಅಧ್ಯಯನ ಕೇಂದ್ರ ಕನ್ನಡ ಪುಸ್ತಕಗಳ ಕೊರತೆ ಎದುರಿಸುತ್ತಿದೆ. ಇಲ್ಲಿನ ಗ್ರಂಥಾಲಯದಲ್ಲಿ ಎಲ್ಲಾ viಭಾಗಗಳ ಕನ್ನಡ ಮಾಧ್ಯಮದ ಪುಸ್ತಕಗಳು ಕಡಿಮೆ ಸಂಖ್ಯೆಯಲ್ಲಿದ್ದು, ಆಧುನಿಕತೆ ಹಾಗೂ ಇತರೆ ಉಪಯುಕ್ತ ಪುಸ್ತಕಗಳು ಲಭ್ಯviರುವುದಿಲ್ಲ.
ಪುಸ್ತಕಗಳ ಕೊರತೆ ಜೊತೆಗೆ ಖಾಯಂ ಉಪನ್ಯಾಸಕ ಸಿಬ್ಬಂದಿ ಕೊರೆತೆಯನ್ನು ಸಹ ಈ ಕೇಂದ್ರ ಎದುರಿಸುತ್ತಿದೆ. ಅಲ್ಲದೇ ಕಳೆದ ವರ್ಷ ಆರಂಭಿಸಲಾಗಿದ್ದ ಎಂ.ಎಡ್ ಕೋರ್ಸನ್ನು ಅದೇಕೋ ಒಂದೇ ವರ್ಷದಲ್ಲಿ ಸ್ಥಗಿತಗೊಳಿಸಲಾಗಿದ್ದು, ಈ ಕೇಂದ್ರವನ್ನು ಅಭಿವೃದ್ಧಿಪಡಿಸುವ ಬದಲಿಗೆ ಅಲ್ಲಿನ ಒಂದೊಂದೇ ಕೋರ್ಸ್ಗಳನ್ನು ಬಂದ ಮಾಡುವ ಮೂಲಕ ಈ ಕೇಂದ್ರವನ್ನೇ ಬಂದ ಮಾಡುವ ದುರುದ್ದೇಶ ಸರ್ಕಾರಕ್ಕಿದೆಯೇ ಎಂದು ಶಿಕ್ಷಣ ಪ್ರೇmiಗಳು ಪ್ರಶ್ನಿಸಿದ್ದಾರೆ.

ರಸ್ತೆ ಸರಿyiಲ್ಲ:
ಬೆಳಗಾviಯ ಕೀರ್ತಿಯ ಭೂಷಣ ಎಂದು ಕರೆಸಿಕೊಳ್ಳುವ ಈ ಕೇಂದ್ರಕ್ಕೆ ಹೋಗುವ ರಸ್ತೆ ಕುಗ್ರಾಮವೊಂದರ ರಸ್ತೆಗಿಂತ ಕಡೆಯಾಗಿದೆ. ರಸ್ತೆಯೊಳಗೆ ಗುಂಡಿಗಳಿವೆಯೋ ಅಥವಾ ಗುಂಡಿಗಳಿಂದಲೇ ರಸ್ತೆ ನಿರ್ಮಾಣಗೊಂಡಿದೆಯೋ ಎನ್ನುವಂತೆ ಡಾಂಬರು ಕಿತ್ತು ಹೋಗಿ ಗುಂಡಿಗಳೇ miಂಚುತ್ತಿದ್ದರೂ ಸಹ ಈ ಬಗ್ಗೆ ಸಂಬಂಧಿಸಿದವರು ಗಮನ ಹರಿಸಿಲ್ಲ. ಈ ರಸ್ತೆಯನ್ನು ದುರಸ್ತಿಗೊಳಿಸಿ ದಶಕಗಳೇ ಕಳೆದಿವೆಯಾದರೂ ಈ ಬಗ್ಗೆ ಯಾರಿಗೂ ಗಮನviಲ್ಲದಂತಾಗಿದೆ.
ಹುಸಿ ಭರವಸೆ:
ತಮ್ಮ ಹುಸಿ ಭರವಸೆಗಳ ಮೂಲಕ ಸಾಮಾನ್ಯ ಜನರನ್ನು ಮರಳು ಮಾಡುವ ರಾಜಕಾರಣಿಗಳು ಇಲ್ಲಿನ ಪ್ರಜ್ಞಾವಂತ viದ್ಯಾರ್ಥಿಗಳನ್ನು ಸಹ ಮರಳು ಮಾಡುವಲ್ಲಿ ಸೈ ಎನಿಸಿಕೊಂಡಿದ್ದಾರೆ. ಈ ಕೇಂದ್ರಕ್ಕೆ ಆಗೊಮ್ಮೆ ಈಗೊಮ್ಮೆ ಭೇಟಿ ನೀಡುವ ಹಾಗೂ ಈ ಅಧ್ಯಯನ ಕೇಂದ್ರದ ಕಾರ್ಯಕ್ರಮಗಳಲ್ಲಿ ಭಾಗವhiಸುವ ಜನಪ್ರತಿನಿಧಿಗಳು ಇದನ್ನು ಸ್ವತಂತ್ರ viviಯನ್ನಾಗಿಸುವ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಹುಸಿ ಭರವಸೆ ನೀಡುತ್ತಾ ಬಂದಿದ್ದಾರೆ. ಹೊರತು ಈ ಬಗ್ಗೆ ನಿಜವಾದ ಅರ್ಥದಲ್ಲಿ ಯಾರಿಗೂ ಕಾಳಜಿಲ್ಲ.
ಈ ಅಧ್ಯಯನ ಕೇಂದ್ರವನ್ನು ಸ್ವತಂತ್ರ viviಯನ್ನಾಗಿಸುವ ಮೊದಲು ಒಂದು ಅಧ್ಯಯನ ಕೇಂದ್ರಕ್ಕೆ ಕೊಡಬೇಕಾದ ಅಗತ್ಯ ಸೌಲಭ್ಯಗಳನ್ನು ಕೊಡುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆ ತನ್ನ ನೈತಿಕತೆಯನ್ನು ಪ್ರದರ್ಶಿಸಬೇಕಾದ ಅಗತ್ಯviದೆ.
Posted by BELGAUM NEWS at 1:22 AM 0 comments
Wednesday, November 4, 2009

ಪುಟ್ಟ ಪುಟ್ಟವಾದ ಹಣ್ಣು ನೀರಲ ಹಾಗೂ ಕವಳೆ. ಇವುಗಳ ಹೆಸರು ಕೇಳಿದರೆ ಸಾಕು ತನ್ನಷ್ಟಕ್ಕೆ ತಾನೇ ಬಾಯಲ್ಲಿ ನೀರೂರುತ್ತವೆ. ಇಂತಹ ಹಣ್ಣುಗಳೀಗ ಬೆಳಗಾವಿ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ನೋಡ ನೋಡುತ್ತಿದ್ದಂತೆ ಬುಟ್ಟಿಗಟ್ಟಲೇ ಹಣ್ಣುಗಳು ಖಾಲಿಯಾಗುತ್ತಿವೆ.
ಈ ಎರಡು ಹಣ್ಣುಗಳು ಗಾತ್ರದಲ್ಲಿ ಮಾತ್ರ ಹೆಚ್ಚುಕಮ್ಮಿಯಿವೆ. ಆದರೆ ಎರಡೂ ಒಂದೇ ತರಹದ ನೀಲಿಕಪ್ಪು ಬಣ್ಣವನ್ನೇ ಹೊಂದಿವೆ. ನೀರಲ ಹಣ್ಣು ೮೦ರೂ, ೬೦ರೂ. ಹಾಗೂ ೪೦ರೂ. ಕೆಜಿಯಂತೆ ಮೂರು ತರಹದ ಬೆಲೆಯಲ್ಲಿವೆ. ಅದೇ ಕವಳೆ ಹಣ್ಣನ್ನು ಐದು ರೂಪಾಯಿಗೆ ಒಂದು ಬೊಗಸೆಯಷ್ಟು ಪಡೆಯಬಹುದಾಗಿದೆ.

ಹೊಲ ಹಾಗೂ ರಸ್ತೆ ಪಕ್ಕದಲ್ಲಿ ಮಾವಿನ ಮರದಂತೆ ಬೃಹತಾಗಿ ಬೆಳೆಯುವ ನೀರಲ ಗಿಡದಿಂದ ಅದರ ಹಣ್ಣನ್ನು ಬಿಡಿಸಲು ಹರಸಾಹಸವನ್ನೆ ಮಾಡಬೇಕು. ಏಕೆಂದರೆ ಸ್ಪಲ್ವವೇ ಕೆಳಗೆ ಬಿದ್ದರೇ ಈ ಹಣ್ಣುಗಳು ಹಾಳಾಗಿ ಹೋಗುತ್ತವೆ. ಹಾಗಾಗಿ ಈ ಗಿಡಗಳನ್ನು ಹುಡುಕುತ್ತಾ ಹೋಲ ಹಾಗೂ ಗುಡ್ಡಗಾಡುಗಳನ್ನು ಅಲೆಯುವ ಕೆಲವರಿಗೆ ಇದೇ ಹೊಟ್ಟೆಪಾಡಿನ ಉದ್ಯೋಗವಾಗಿದ್ದು, ಅವರು ಹಗ್ಗ ಮತ್ತು ಬಿದಿರಿನ ಬುಟ್ಟಿಯೊಂದಿಗೆ ಗಿಡವೇರಿ ಮೇಲೆ ಕುಳಿತುಕೊಂಡು ಈ ಹಣ್ಣನ್ನು ಬಿಡಿಸಿ ಹಗ್ಗದ ಮೂಲಕ ಬುಟ್ಟಿಯನ್ನು ಕೆಳಗೆ ಬಿಡುತ್ತಾರೆ. ಇದರಿಂದಾಗಿ ಹಣ್ಣು ಯಾವುದೇ ಪೆಟ್ಟು ತಿನ್ನದೇ ಯಥಾಸ್ಥಿತಿಯಲ್ಲಿಯೇ ಮಾರುಕಟ್ಟೆಗೆ ಬಂದಿರುತ್ತದೆ.
ಈ ರೀತಿ ಬಿಡಿಸಿಕೊಂಡ ಹಣ್ಣನ್ನು ಪೇಟೆಗೆ ತಂದು ಮಾರಿದರೂ ಸಹ ಕೈ ತುಂಬ ಹಣ ಬರುವುದಿಲ್ಲ. ಆದರೂ ಒಂದು ದಿನದ ಜೀವನ ದಾಟುತ್ತದೆ ಎಂದುಕೊಂಡು ಕೆಲವೊಂದಿಷ್ಟು ಜನ ಇದನ್ನೇ ತಮ್ಮ ಉದ್ಯೋಗವನ್ನಾಗಿಸಿಕೊಂಡಿದ್ದಾರೆ. ನೀರಲ ಹಣ್ಣನ್ನು ರಕ್ತಸ್ರಾವ ಮೂಲವ್ಯಾಧಿ ಇದ್ದವರು ತಿನ್ನಲ್ಲು ಉತ್ತಮ. ಇದರಿಂದ ರಕ್ತಸ್ರಾವವನ್ನು ತಡೆಯಬಹುದು ಎಂದು ಸಹ ಹೇಳಲಾಗುತ್ತದೆ.
ಅಲ್ಲದೇ ಈ ನೀರಲ ಹಣ್ಣಿಗೆ ಕವಿ ಕುವೆಂಪು ಸಹ ಮನಸೋತು ತಮ್ಮ ಕವನವೊಂದರಲ್ಲಿ ನೀರಲ ಹಣ್ಣನ್ನು ಉಪಮೆಯನ್ನಾಗಿ ಬಳಸಿಕೊಂಡಿದ್ದಾರೆ.
ಅದು:-
`ಶೋಡಷ ಚೈತ್ರದ ಸುಂದರಿ ನೀನು
ಕಾಮನ ಬಿಲ್ಲಿನ ಬಣ್ಣದ ಬೋನು
ನಿನ್ನಾ ಕಣ್ಣು ನೀರಲ ಹಣ್ಣು
ನನ್ನೆದೆ ಹಕ್ಕಿಯೂ ಬಲೆಯಲಿ ಮೀನು.'
ಈ ನೀರಲ ಹಣ್ಣನ್ನು ತೊಳೆದು ಉಪ್ಪು ಹಾಕಿ ತಿಂದರಂತೂ ಅದರ ರುಚಿಯೇ ಬೇರೆ. ಗ್ರಾಮೀಣ ಪ್ರದೇಶದ ಜಮೀನುಗಳಲ್ಲಿ ಹೇರಳವಾಗಿ ಸಿಗುವ ನೀರಲ ಹಣ್ಣಿಗೆ ಪಟ್ಟಣದ ಜನ ಮಾರು ಹೋಗಿದ್ದು, ಮಾರುಕಟ್ಟೆಯಲ್ಲಿ ಅಲ್ಲಲ್ಲಿ ಬುಟ್ಟಿಯಲ್ಲಿ ಮಾರಾಟಕ್ಕೆ ಇಟ್ಟಿರುವ ಹಣ್ಣನ್ನು ಖರೀದಿಸಿಕೊಂಡು ಬಾಯಿ ಚಪ್ಪರಿಸುತ್ತಿದ್ದಾರೆ.

ಇದೇ ರೀತಿ ಕವಳೆ ಹಣ್ಣು ಸಹ ವಿಶಿಷ್ಠತೆಯನ್ನು ಪಡೆದುಕೊಂಡಿದೆ. ಇದು ಕೈಗೆಟಕುವಷ್ಟು ಎತ್ತರದ ಸಣ್ಣ ಗಿಡಗಳಲ್ಲಿ ಬೆಳೆಯುತ್ತದೆಯಾದರೂ ದೊಡ್ಡ ಮುಳ್ಳುಗಂಟಿ ಹಾಗೂ ಪೊದೆಗಳ ಮಧ್ಯೆ ಕವಳೆ ಕಂಟಿ ಇರುತ್ತದೆ. ಅಲ್ಲದೇ ಇದರ ಗಿಡಕ್ಕೆ ಮೈಯೆಲ್ಲಾ ಮೊಳೆಯಷ್ಟು ಉದ್ದದ್ದ ಮುಳ್ಳು. ಹೀಗಾಗಿ ಇವು ತಾಗದಂತೆ ಜಾಗರೂಕತೆಯಿಂದ ಈ ಹಣ್ಣನ್ನು ಬಿಡಿಸಲಾಗುತ್ತದೆ.
ಹೆಚ್ಚಾಗಿ ಗುಡ್ಡದಲ್ಲಿ ಈ ಕವಳೆ ಕಂಟಿಗಳಿರುವುದರಿಂದ ಬೇಸಿಗೆಯಲ್ಲಿ ದನ ಕಾಯುವವರ ಪಾಲಿಗೆ ಈ ಹಣ್ಣು ಅಮೃತವಿದ್ದಂತೆ. ಮಧ್ಯಾಹ್ನದ ಬಿಸಿಲಿನಲ್ಲಿ ತಮ್ಮ ಬಾಯಾರಿಕೆಯನ್ನು ಇಂಗಿಸಲು ಅವರು ಕವಳೆ ಹಣ್ಣುಗಳಿಗೆ ಮೊರೆ ಹೋಗುವುದು ಸಾಮಾನ್ಯ.
ದನಕಾಯಿಗಳು ತಾವು ತಿನ್ನುವುದಷ್ಟೇ ಅಲ್ಲದೇ ಮುತ್ತಲ ಎಲೆಗಳನ್ನು ಮುಳ್ಳುಗಳಿಂದ ಪೋಣಿಸಿ ಪಾಕೇಟ್ ಮಾಡಿಕೊಂಡು (ಟೋಳಕೆ) ಅದರಲ್ಲಿ ಕವಳೆ ಹಣ್ಣುಗಳನ್ನು ಶೇಖರಿಸಿಕೊಂಡು ಊರಿಗೆ ಬರುತ್ತಾರೆ. ಹೀಗಾಗಿ ಹಳ್ಳಿಗಳಲ್ಲಿ ಸಂಜೆ ಹೊತ್ತು ದನಗಾಯಿಗಳು ಮನೆಗೆ ಆಗಮಿಸುವಾಗ ಚಿಕ್ಕ ಮಕ್ಕಳು ಅವರ ಬೆನ್ನು ಹತ್ತಿ ಹಣ್ಣುಗಳನ್ನು ಇಸಿದುಕೊಳ್ಳುತ್ತಾರೆ.
ಅಲ್ಲದೇ ಇದರ ರುಚಿಗೆ ಮಾರುಹೋಗುವ ಚಿಕ್ಕ ಮಕ್ಕಳು ಬೇಸಿಗೆ ರಜೆಯಲ್ಲಿ ಗುಡ್ಡಗಳಿಗೆ ಹೋಗಿ ಹುಡುಕಾಡಿ ತಾವು ಸಹ ಈ ಹಣ್ಣುಗಳನ್ನು ತೆಗೆದುಕೊಂಡು ಬರುತ್ತಾರೆ. ಆದರೆ ಈ ಭಾಗ್ಯ ಪಟ್ಟಣದ ಮಕ್ಕಳಿಗೆ ಸಿಗುವುದಿಲ್ಲ. ಆದ್ದರಿಂದ ಅವರೇನಿದ್ದರೂ ಮಾರುಕಟ್ಟೆಯಲ್ಲಿ ಇಟ್ಟಿರುವ ಹಣ್ಣುಗಳನ್ನೇ ಖರೀದಿಸಿ ತಿನ್ನಬೇಕಿದೆ.
ನೀರಲ ಹಣ್ಣಿಗೆ ಕವಿ ಕುವೆಂಪು ಮಾರು ಹೋದಂತೆ ಅಂಬಿಕಾತನಯದತ್ತ ದ.ರಾ. ಬೇಂದ್ರೆ ಅವರು ಕವಳೆ ಹಣ್ಣಿಗೆ ಮಾರು ಹೋಗಿರುವುದನ್ನು ಅವರ `ನೀ ಹಿಂಗ ನೋಡಬ್ಯಾಡ್ ನನ್ನ' ಕವನದಲ್ಲಿ ಗಮನಿಸಬಹುದು.
ಅದು:-
`ಇಬ್ಬನಿ ತೊಳೆದರೂ ಹಾಲು ಮೆತ್ತಿದಾ ಕವಳಿ ಕಂಟಿಯಾ ಹಣ್ಣು
ಹೊಳೆಹೊಳೆವ ಹಾಂಗ ಕಣ್ಣಿರುವ ಹೆಣ್ಣ, ಹೇಳು ನಿನ್ನವೇನ ಈ ಕಣ್ಣು?
ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡ ಒಮ್ಮಿಗಿಲ
ಹುಣ್ಣವೀ ಚಂದಿರನ ಹೆಣಾ ಬಂತೊ ಮುಗಿಲಾಗ ತೇಲತ ಹಗಲ'
ಬೇಂದ್ರೆಯವರ ಈ ಕವನದಲ್ಲಿ ಕವಳಿ ಹಣ್ಣುಗಳ ಅಪರೂಪತೆಯನ್ನು ಬಿಂಬಿಸಿರುವುದು ಕನ್ನಡ ಕಾವ್ಯದಲ್ಲಿಯೇ ಅತ್ಯಂತ ಸಂವೇದನಾಪೂರ್ಣ ಉಪಮೆ ಹೊಂದಿದ ಕವನ ಎಂದು ಹೇಳಲಾಗುತ್ತದೆ. ಕವಳಿಕಂಟಿಯ ದಪ್ಪವಾದ ಬಿಳಿ ಹಾಲು ನೀಲಿಕಪ್ಪಾಗಿರುವ ಅದರ ಹಣ್ಣುಗಳಿಗೆ ಅಂಟಿಕೊಂಡಿರುವಾಗ ಇಬ್ಬನಿ ಹನಿ ಬಿದ್ದು ಹಣ್ಣುಗಳು ತೊಳೆದಂತಾಗಿರುತ್ತವೆ. ಆ ಪ್ರಸಂಗವನ್ನು ಅತಿ ಮನಮೋಹಕವಾಗಿ ಬಣ್ಣಿಸಿರುವ ಬೇಂದ್ರ ಅವರು, ಇವಳ ಕಣ್ಣ ಪಾಪೆಗಳು ಕವಳೆ ಹಣ್ಣಿನಷ್ಟು ನೀಲಿಕಪ್ಪಾಗಿದ್ದು, ಕವಳೆ ಹಣ್ಣಿನ ಮೇಲೆ ಇಬ್ಬನಿ ಬಿದ್ದಾಗ ಉಂಟಾಗುವ ಹೊಳಪಿನಂತೆ ತೇಜ ಪಡೆದಿವೆ. ಈಗ ಜೀವ ಹೋಗಿ ನಿಸ್ತೇಜವಾಗಿರುವ ಈ ಕಣ್ಣುಗಳು ಅವಳ ಆ ಅಪರೂಪದ ಕಣ್ಣುಗಳೇ? ಎಂದು ತಮ್ಮನ್ನು ತಾವೇ ಈ ಕವನದಲ್ಲಿ ಬೇಂದ್ರೆ ಪ್ರಶ್ನಿಸಿಕೊಂಡಿದ್ದಾರೆ.
ನೀರಲ ಹಾಗೂ ಕವಳೆ ಹಣ್ಣುಗಳನ್ನು ಬಿಡಿಸಿ ತರುವ ಉದ್ಯೋಗಿಗಳು ಇದರಲ್ಲಿ ಯಾವುದೇ ರೀತಿಯ ಲಾಭಗವನ್ನು ಗಳಿಸುವುದಿಲ್ಲ. ದಿನವಿಡಿ ಬಿಸಿಲನ್ನು ಲೆಕ್ಕಿಸದೇ ಹೊಲ ಹಾಗೂ ಗುಡ್ಡುಗಾಡನ್ನು ತಿರುಗಾಡಿ ಈ ಹಣ್ಣುಗಳನ್ನು ಸಂಗ್ರಹಿಸಿಕೊಂಡು ಬರುವ ಅವರು ಮಾರನೇ ದಿನ ಬೆಳಿಗ್ಗೆ ಬೆಳಗಾವಿಗೆ ಬಂದು ಮಾರಾಟಗಾರರಿಗೆ ಅವನ್ನು ಮಾರಿ ಮತ್ತೆ ಹಣ್ಣು ಸಂಗ್ರಹಿಸಲು ಹೋಗುತ್ತಾರೆ. ಮಾರಾಟಗಾರರು ಬುಟ್ಟಿಯೊಂದಕ್ಕೆ ಇಂತಿಷ್ಟು ಎಂದು ಬೆಲೆ ನಿಗದಿ ಮಾಡಿಕೊಂಡ ಬಳಿಕ ಅದನ್ನು ಜನರಿಗೆ ತೂಕದಲ್ಲಿ ಮಾರಾಟ ಮಾಡುತ್ತಾರೆ. ಹಾಗಾಗಿ ಇದನ್ನು ತೆಗೆದುಕೊಂಡು ಬರುವವರಿಗಂತೂ ಲಾಭವಿಲ್ಲ. ಆದರೆ ಒಂದು ದಿನದ ಹೊಟ್ಟೆಯನ್ನಾದರೂ ತುಂಬಿಸಿಕೊಳ್ಳಬಹುದು ಎನ್ನುವುದು ಅವರ ಅಭಿಪ್ರಾಯ.
Posted by BELGAUM NEWS at 6:43 AM 0 comments
ಇದೂ ಒಂಥರ ಬದುಕೇ?
ಇದೂ ಒಂಥರ ಬದುಕೇ? ಮಳೆಗಾಲ ಬಂದರೆ ಸಾಕು ಇಲ್ಲಿನ ಸುಮಾರು ೨೫ಕ್ಕೂ ಹೆಚ್ಚು ಕುಟುಂಬಗಳು ಸ್ವಂತ ಮನೆ ಖಾಲಿ ಮಾಡಿ ಬಾಡಿಗೆ ಮನೆಯಲ್ಲಿ ವಾಸಿಸಬೇಕಾದ ಸ್ಥಿತಿ ಇದೆ.
ಈ ಮೇಲಿನ ಎರಡು ಸಾಲು ಹಾಗೂ ಚಿತ್ರಗಳನ್ನು ನೋಡಿ ಇದ್ಯಾವುದೋ ಕೃಷ್ಣಾ ತೀರದ ಜಲಾವೃತ ಹಳ್ಳಿಯೊಂದರ ಪರಿಸ್ಥಿತಿ ಎಂದು ಭಾವಿಸಬಹುದು. ಆದರೆ ಇದು ಯಾವುದೇ ನದಿ ತೀರದ ಗ್ರಾಮವಲ್ಲ. ಬದಲಿಗೆ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಖಾಸಬಾಗ ವ್ಯಾಪ್ತಿಯಲ್ಲಿನ ರಾಘವೇಂದ್ರ ಕಾಲನಿ ಪರಿಸ್ಥಿತಿ ಇದು.
ತಮ್ಮ ಬದುಕನ್ನೇ ನಿತ್ಯ ಜೀವನದ ಜಂಜಾಟದೊಂದಿಗೆ ಬೇರೆ ಮನೆಗೆ ವಲಸೆ ಹೋಗಬೇಕಾದ ಪರಿಸ್ಥಿತಿ ಇಲ್ಲಿನವರದ್ದಾಗಿದೆ. ಈ ಪರಿಸ್ಥಿತಿ ಹೊಸದೇನಲ್ಲ. ಕಳೆದ ಹತ್ತು ವರ್ಷಗಳಿಂದ ಇದು ಮುಂದುವರೆದಿದೆ. ಪ್ರತಿ ಬಾರಿ ಈ ನಿವಾಸಿಗಳು ಸಂಬಂಧಿಸಿದ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳ ಮುಂದೆ ಕಣ್ಣೀರು ಹಾಕಿದ್ದಾರೆ. ಆದರೆ ಈ ಬಡ ಮತ್ತು ಮಧ್ಯಮ ವರ್ಗದವರ ಕಣ್ಣೀರಿನ ಕಥೆ ಇವರ್ಯಾರಿಗೂ ಅರ್ಥವಾಗಿಲ್ಲ.
ಅಮಾವ್ಯಾಸೆ ಹುಣ್ಣಿಮೆಗೊಮ್ಮೆ ಎಂಬಂತೆ ಬಂದು ಷೋ ಮಾಡುವ ಸಂಬಂಧಿಸಿದವರು ಈ ಪ್ರದೇಶದ ಜನರ ಸಮಸ್ಯೆಗಳತ್ತ ಗಮನ ಹರಿಸಬೇಕಾಗಿದೆ.
ಹೀಗಿದೆ ನೋಡಿ ಈ ಕಾಲನಿ:
ಬೆಳಗಾವಿಯ ದಕ್ಷಿಣ ಭಾಗದಲ್ಲಿನ ಖಾಸಬಾಗದ ಕೊನೆಯಲ್ಲಿ ಹಳೆ ಪಿ.ಬಿ. ರಸ್ತೆಗೆ ಹೊಂದಿಕೊಂಡಿರುವ ಈ ಕಾಲನಿಯಲ್ಲಿ ಈಗಷ್ಟೇ ಹತ್ತು ವರ್ಷಗಳ ಹಿಂದೆ ಇಲ್ಲಿ ಮನೆ ಕಟ್ಟಿದವರು ಬಹುದಿನಗಳ ಕಷ್ಟದಿಂದ ತಮಗೊಂದು ಶಾಶ್ವತ ಸೂರು ದೊರೆಯಿತೆಂದು ನಿಟ್ಟುಸಿರು ಬಿಟ್ಟಿದ್ದರು. ಆದರೆ ಅವರ ನೆಮ್ಮದಿ ಮಾತ್ರ ಬಹುದಿನಗಳ ಕಾಲ ಉಳಿಯಲಿಲ್ಲ. ಏಕೆಂದರೆ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯದಿಂದಾಗಿ ಇಲ್ಲಿನ ಜನ ಪ್ರತಿ ಮಳೆಗಾಲದಲ್ಲಿ ಮನೆಗೆ ಬೀಗ ಹಾಕಿ ವಲಸೆ ಹೋಗಬೇಕಾದ ಸ್ಥಿತಿಯಿಂದ ನೊಂದು ಹೋಗಿದ್ದಾರೆ.
ಈ ಪ್ರದೇಶದಲ್ಲಿ ಮಳೆಗಾಲ ಆರಂಭವಾದರೇ ಸಾಕು ಇಲ್ಲಿನ ರಸ್ತೆಗಳು ನದಿಯ ಸ್ವರೂಪ ಪಡೆದುಕೊಳ್ಳುತ್ತವೆ. ಇಲ್ಲಿ ಎಷ್ಟೇ ಎತ್ತರ ಅಡಿಪಾಯ ಹಾಕಿ ಮನೆ ಕಟ್ಟಿದರೂ ಪ್ರಯೋಜನವಿಲ್ಲ. ಮನೆ ಅಡಿಪಾಯದ ಎತ್ತರವನ್ನು ಮೀರಿ ಮಳೆಯ ನೀರು ಮನೆಯೊಳಗೆ ನುಗ್ಗುತ್ತದೆ. ಮಳೆಯ ನೀರಷ್ಟೇ ಮೆನೆಯೊಳಗೆ ನುಗ್ಗಿದ್ದರೇ ಅದನ್ನು ತಡೆದುಕೊಂಡು ಮಹಡಿಯ ಮೇಲೆ ವಾಸಿಸಬಹುದಾಗಿತ್ತು. ಆದರೆ ಮಳೆಯ ನೀರಿನೊಂದಿಗೆ ಖಾಸಬಾಗದ ಕೊಳಚೆ ನೀರೂ ಸೇರುವುದರಿಂದ ಗಬ್ಬು ವಾಸನೆ ತಾಳಲಾರದ ಜನ ತಮ್ಮ ಮನೆಗಳಿಗೆ ಬೀಗ ಹಾಕಿ ಬೇರೇಡೆ ಬಾಡಿಗೆ ಕೋಣೆಗಳಲ್ಲಿ ವಾಸಿಸುತ್ತಿದ್ದಾರೆ.
ಈ ರೀತಿ ಇಲ್ಲಿನ ನಿವಾಸಿಗಳು ತೊಂದರೆ ಪಡುತ್ತಿರುವುದು ಇಂದು ನಿನ್ನೆಯದಲ್ಲ. ಕಳೆದ ಒಂದು ದಶಕದಿಂದ ಇಲ್ಲಿನವರು ಮಳೆಗಾಲದಲ್ಲಿ ಸ್ವಂತ ಮನೆಗಳಿಗೆ ಬೀಗ ಹಾಕಿ ಬೇರೇಡೆ ವಲಸೆ ಹೋಗುತ್ತಿದ್ದಾರೆ. ಆದರೆ ಸಂಬಂಧಿಸಿದವರು ಮಾತ್ರ ಇತ್ತ ಕಡೆ ಲಕ್ಷ್ಯ ವಹಿಸಿಲ್ಲ. ಈ ಸಮಸ್ಯೆ ಆರಂಭವಾದಾಗ ಇಲ್ಲಿನ ನಿವಾಸಿಗಳು ಮಹಾನಗರ ಪಾಲಿಕೆಗೆ ಮನವಿಯನ್ನು ಸಲ್ಲಿಸಿದ್ದರಂತೆ. ಆದರೆ ಇವರ ಸಮಸ್ಯೆ ಬಗ್ಗೆ ಪಾಲಿಕೆಯ ಅಧಿಕಾರಿಗಳು ಹಾಗೂ ಸ್ಥಳೀಯ ನಗರ ಸೇವಕರು ದಿವ್ಯ ನಿಲ್ಯಕ್ಷ್ಯ ವಹಿಸಿದ್ದರಿಂದ ಪಾಲಿಕೆಗೆ ಅಲೆದರೆ ಏನು ಪ್ರಯೋಜನವಿಲ್ಲ ಎಂದು ತಿಳಿದುಕೊಂಡು ಈ ಬಗ್ಗೆ ಯಾರ ಬಳಿಯೂ ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳದ ಇವರಲ್ಲಿ ವ್ಯವಸ್ಥೆಯ ಮೇಲೆ ತೀವ್ರವಾದ ಆಕ್ರೋಶವಿದೆ.
ಅದರಲ್ಲಿಯೂ ಪ್ರತಿ ಸಲ ಚುನಾವಣೆ ಸಂದರ್ಭದಲ್ಲಿ ಇಲ್ಲಿಗೆ ಬರುವ ರಾಜಕಾರಣಿಗಳು ಈ ಕಾಲನಿಯ ಸಮಸ್ಯೆಯನ್ನು ಪರಿಹರಿಸುವುದಾಗಿ ದೊಡ್ಡ ದೊಡ್ಡ ಆಶ್ವಾಸನೆ ನೀಡುತ್ತಾರಂತೆ. ಆದರೆ ಅಧಿಕಾರಕ್ಕೆ ಬಂದ ಬಳಿಕ ರಾಘವೇಂದ್ರ ಕಾಲನಿ ಎನ್ನುವ ಪ್ರದೇಶವೊಂದು ತಾವು ಪ್ರತಿನಿಧಿಸುವ ಕ್ಷೇತ್ರಲ್ಲಿದೆ ಎನ್ನುವುದನ್ನೇ ಮರೆತು ಬಿಡುತ್ತಾರೆ ಎನ್ನುವುದು ಇಲ್ಲಿನವರ ಗಂಭೀರ ಆರೋಪ.
ಈ ಕಾಲನಿಯ ಜನ ರಾಜಕಾರಣಿಗಳಿಗೆ ಕೇವಲ ಮತ ಬ್ಯಾಂಕ್ಗಳಾಗಿ ಮಾತ್ರ ಬೇಕಾಗಿರುವುದರಿಂದ ಪಾಲಿಕೆ ಅಧಿಕಾರಿಗಳು ಸಹ ಇತ್ತ ಕಡೆ ಗಮನ ಹರಿಸುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳುವುದು ನಿರುಪಯುಕ್ತವಾಗಿದೆ. ಏಕೆಂದರೆ ಅಧಿಕಾರಿಗಳಿಂದ ಕೆಲಸ ಮಾಡಿಸಬೇಕಾದ ಜನಪ್ರತಿನಿಧಿಗಳೇ ತಮ್ಮ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವುದರಿಂದ ಅಧಿಕಾರಿಗಳೂ ಸಹ ತಮ್ಮ ಜವಾಬ್ದಾರಿಯನ್ನು ಮರೆತು ಬಿಟ್ಟಿದ್ದಾರೆ ಎಂಬುದು ಇಲ್ಲಿನ ನಿವಾಸಿಗಳ ದೂರು.
ಈ ಕಾಲನಿಯ ಈಡೀ ರಸೆಗಳಲ್ಲಿ ನೀರು ನಿಂತಿರುವುದರಿಂದ ಇದೇನು ರಸ್ತೆಯೋ ಅಥವಾ ಯಾವುದೋ ಕೆರೆಯಲ್ಲಿ ಮನೆಗಳನ್ನು ಕಟ್ಟಿದ್ದಾರೆಯೋ ಎನ್ನುವ ಆಶ್ಚರ್ಯ ಮೂಡುತ್ತದೆ. ಅದರಲ್ಲಿಯೂ ಸಣ್ಣ ಸಣ್ಣ ಮನೆಗಳಿದ್ದವರ ಪರಿಸ್ಥಿತಿಯಂತೂ ಇಲ್ಲಿ ಚಿಂತಾಜನಕವಾಗಿದೆ. ದಿನಂಪ್ರತಿ ಕೂಲಿ ಮಾಡುವ ಇಲ್ಲಿನ ಕೆಲವರು ಮಳೆ ಮುಗಿದ ಬಳಿಕ ತಮ್ಮ ಮನೆಗಳನ್ನು ರಿಪೇರಿ ಮಾಡಿಸಲು ಸಾವಿರಾರು ರೂಪಾಯಿ ಖರ್ಚು ಮಾಡಬೇಕು. ಅಲ್ಲದೇ ಈಗ ಮಳೆಗಾಲ ಮುಗಿಯುವವರೆ ಬಾಡಿಗೆ ಮನೆಯಲ್ಲಿಬೇಕು. ಹೀಗಾಗಿ ಕೆಲಸ ಮಾಡಿ ಬರುವ ಹಣವೆಲ್ಲಾ ಬಾಡಿಗೆ ಮನೆ ಹಾಗೂ ಸ್ವಂತ ಮನೆ ರಿಪೇರಿಗೆ ಖರ್ಚಾಗುತ್ತಿದ್ದು, ಜೀವನ ಸಾಗಿಸುವುದು ತುಂಬಾ ಕಷ್ಟವಾಗಿದೆಯಂತೆ.
ಈ ಕಾಲನಿಯ ಜನ ಮಹಾನಗರ ಪಾಲಿಕೆಗೆ ಎಲ್ಲ ರೀತಿಯ ತೆರಿಗೆಗಳನ್ನು ಪಾವತಿಸಿದ್ದಾರಂತೆ. ಆದರೆ ತೆರಿಗೆ ತುಂಬಿಸಿಕೊಳ್ಳುವುದಷ್ಟೇ ತಮ್ಮ ಕರ್ತವ್ಯ. ಉಳಿದಂತೆ ತೆರಿಗೆ ತುಂಬುವ ಸಾರ್ವಜನಿಕರಿಗೆ ಅಗತ್ಯ ಸೌಕರ್ಯ ಕಲ್ಪಿಸಬೇಕಾದ ಅಗತ್ಯವೇ ಇಲ್ಲ ಎನ್ನುವಂತೆ ಪಾಲಿಕೆ ವರ್ತಿಸುತ್ತಿದೆ ಎಂದು ಇಲ್ಲಿನವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಷ್ಟಕ್ಕೂ ಏನು ಕಾರಣ:
ಈ ಪ್ರದೇಶ ಜಲಾವೃತಗೊಳ್ಳಲು ಮಹಾನಗರ ಪಾಲಿಕೆಯ ದಿವ್ಯ ನಿರ್ಲಕ್ಷ್ಯವೇ ಮುಖ್ಯ ಕಾರಣವಾಗಿದೆ. ಖಾಸಬಾಗ ಪ್ರದೇಶದಿಂದ ಹರಿದು ಬರುವ ಬಹುತೇಕ ಚರಂಡಿ ನೀರು ಈ ಕಾಲನಿ ಮೂಲಕ ಹರಿದು ಹೋಗಿ ಹೊಲಗಳಿಗೆ ಸೇರುತ್ತದೆ. ಆದರೆ ಈ ಕಾಲನಿಯವರೆಗೆ ಬರುವ ಮಳೆ ನೀರು ಹೊಲಗಳಿಗೆ ಹರಿದು ಹೋಗಲು ಇಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ. ಅವೈಜ್ಞಾನಿಕವಾಗಿ ನಿರ್ಮಿಸಲಾಗಿರುವ ಚರಂಡಿಗಳಿದ್ದರೂ ಅವುಗಳ ಹೂಳು ಎತ್ತಿ ಎಷ್ಟು ವರ್ಷಗಳಾಗಿವೆ. ಹೀಗಾಗಿ ಚರಂಡಿಯಲ್ಲಿ ನೀರು ಹರಿದು ಹೋಗದೆ ಇಲ್ಲಿಯೇ ನಿಲ್ಲುತ್ತಿದೆ.
ಅಲ್ಲದೇ ಇಲ್ಲಿನ ಡ್ರೆನೇಜ್ಗಳು ಸಹ ಸರಿಯಾಗಿಲ್ಲ. ಮಳೆಯ ನೀರಿನೊಂದಿಗೆ ಕೊಳಚೆ ನೀರು ಸೇರುವುದರಿಂದ ಇಲ್ಲಿನ ವಾತಾವರಣ ಸಂಪೂರ್ಣ ಹದಗೆಟ್ಟು ಹೋಗಿದ್ದು, ಡೆಂಗ್ಯು ಹಾಗೂ ಚಿಕುನ್ಗುನ್ಯಾದಂತಹ ರೋಗಗಳ ಭೀತಿಯನ್ನು ಇಲ್ಲಿನ ನಿವಾಸಿಗಳು ಎದುರಿಸುತ್ತಿದ್ದಾರೆ.
ನದಿ ತೀರದ ಜನರು ನೀರಿನ ಹರಿವು ಹೆಚ್ಚಾದಾಗ ತೊಂದರೆ ಅನುಭವಿಸುವುದು ಸಾಮಾನ್ಯ. ಆದರೆ ಆಡಳಿತ ವ್ಯವಸ್ಥೆ ಹಾಗೂ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ನಗರ ಪ್ರದೇಶದ ನಿವಾಸಿಗಳು ಸಹ ಈ ರೀತಿಯ ತೊಂದರೆ ಅನುಭವಿಸಬೇಕಾಗಿದೆ. ಬೆಳಗಾವಿ ನಗರದ ಒಂದು ಭಾಗದ ಸ್ಥಿತಿ ಹೀಗಿರಬೇಕಾದರೆ. ಈ ನಗರದ ಅಭಿವೃದ್ಧಿಗೆ ಎಷ್ಟು ಕೋಟಿ ಬಿಡುಗಡೆ ಮಾಡಿದರೇನು ಪ್ರಯೋಜನ? ಎಂದು ಜನ ಪ್ರಶ್ನಿಸುವಂತಾಗಿದೆ.

* * *
ಸ್ಮಶಾನವೆಂದರೆ ಅಲ್ಲಿ ಸದಾ ನೀರವ ಮೌನviರುತ್ತದೆ. ತಮ್ಮನ್ನು ಅಗಲಿದವರ ಅಂತಿಮ ದರ್ಶನ ಪಡೆಯುವ ಕುಟುಂಬ ವರ್ಗದವರ ದುಃಖ ಅಲ್ಲಿ ಮಡವುಗಟ್ಟಿರುವುತ್ತದೆ.
ಸ್ಮಶಾನದಲ್ಲಿ ಇದು ಬಿಟ್ಟರೇ ಮತ್ತೇನೂ ನಡೆಯುವುದಿಲ್ಲ. ಸದಾ ದುಃಖದ ಅಲೆ ತುಂಬಿಕೊಂಡಿರುವ ಇಂತಹ ಸ್ಮಶಾನದಲ್ಲಿ ಯಾವುದೇ ಕಾರಣಕ್ಕೂ ಸಿhi ಹಂಚುವುದಿಲ್ಲ. ಆದರೆ ಇಲ್ಲಿನ ಸದಾಶಿವನಗರದ ಸ್ಮಶಾನ ಭೂmiಯಲ್ಲಿ ಇತ್ತೀಚೆಗೆ ಒಂದೇಡೆ ಯಾರದೋ ಶವಸಂಸ್ಕಾರ ನಡೆಯುತ್ತಿದ್ದರೇ ಇತ್ತ ಕೆಲವೊಂದಿಷ್ಟು ಜನ ಸಿhi ಹಂಚಿಕೊಂಡು ತಿನ್ನುತ್ತಿದ್ದರು.
ಇದೇನಪ್ಪಾ viಚಿತ್ರ ಅಂತಿರಾ. ಈ ರೀತಿ ಸಿhi ಹಂಚುವುದರಲ್ಲಿಯೂ viಶೇಷತೆ ಇದೆ. ಜೊತೆಗೆ ಇದರಲ್ಲಿ ಮಾನviಯತೆಯೂ ಅಡಗಿde. hiಗಾಗಿ ಸ್ಮಶಾನdalli sihi ಹಂಚಿದವರನ್ನು ಹಾಗೂ ಅಲ್ಲಿಯೇ ಸಿhi ತಿಂದವರನ್ನು ಯಾರೂ ಶಪಿಸಲಿಲ್ಲ. ಏಕೆಂದರೆ ಅಲ್ಲಿ ನಡೆದಿದ್ದು ಸಮಾಜ ಸೇವೆಯ ಕಾರ್ಯ.
ಸದಾಶಿವ ನಗರದ ಸ್ಮಶಾನದಲ್ಲಿ ಕೆಲವೊಂದು ಸಮಾಜ ಸೇವಕರು ತೆಗೆದುಕೊಂಡು ಬರುವ ಅನಾಥ ಶವಗಳಿಗೆ ಇಲ್ಲಿನ ಸಿಬ್ಬಂದಿ ತಮ್ಮ ಕುಟುಂಬದವರೇನೋ ಎನ್ನುವಂತೆ ಅಂತಿಮ ಸಂಸ್ಕಾರ ನಡೆಸಿಕೊಡುತ್ತಾರೆ.
hiಗಾಗಿ ಮಳೆ, ಚಳಿ ಲೆಕ್ಕಿಸದೇ ಇಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಏನಾದರೂ ಕೊಡಬೇಕು ಎನ್ನುವ ಹಂಬಲದಿಂದ ಸಮಾಜ ಸೇವಕಿ ಸರಳಾ ಹೇರೇಕರ ಶುಕ್ರವಾರ ಈ ಸ್ಮಶಾನದಲ್ಲಿಯೇ ಸಣ್ಣದೊಂದು ಸಮಾರಂಬ ನಡೆಸಿ ಅಲ್ಲಿನ ಸಿಬ್ಬಂದಿಗೆ ಒಂದು ಜೊತೆ ಬಟ್ಟೆ ಹಾಗೂ ಶೇಟರ್ ಕೊಟ್ಟು ಸನ್ಮಾನ ಮಾಡಿದರು.
ಅನಾಥ ಶವಗಳನ್ನು ಸಂಸ್ಕಾರ ಮಾಡುವಲ್ಲಿ ಸದಾ ಮುಂದಿರುವ ಮಾಜಿ ಮಹಾಪೌರ viಜಯ ಮೋರೆ ಸ್ಮಶಾನದಲ್ಲಿ ನಡೆದ ಈ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವhiಸಿ ಸ್ಮಶಾನ ಸಿಬ್ಬಂದಿಗಳಾದ ಶಂಕರ ಕೋಲಕಾರ, ಮಲ್ಲಪ್ಪಾ ಗುಂಡಪ್ಪನವರ, ಯಲ್ಲಪ್ಪಾ ಕೋಲಕಾರ ಹಾಗೂ ಪರಶುರಾಮ ಆದೇಂದ್ರ ಅವರನ್ನು ಆತ್ಮೀಯವಾಗಿ ಸನ್ಮಾನಿಸಿದರು.
ನಿಜವಾದ ಸಮಾಜ್ ಸೇವೆ ಅಂದರೆ ಇದೆ ಆಗುತ್ತದೆ ಅಲ್ಲವೇ?
Posted by BELGAUM NEWS at 2:36 AM 0 comments
Friday, July 17, 2009
ವಿಮಾನ ಚಾಲಕನಾದ ತಬಲಾ ವಾದಕ





ಸಭಿಕರನ್ನು ಮಂತ್ರ ಮಗ್ಧಗೊಳಿಸುವಂತೆ ತಬಲಾ ಬಾರಿಸುತ್ತಿದ್ದ ಆತನ ಸಂಗೀತದ ಮೋಡಿಗೆ ಮರುಳಾದವರೆಲ್ಲಾ ಮುಂದೊಂದು ದಿನ ಈತ ದೊಡ್ಡ ತಬಲಾವಾದಕನಾಗುತ್ತಾನೆ ಎಂದು ಊhiಸಿದ್ದರು. ಆದರೆ ಆತ ಎಲ್ಲರ ಉಹೆಗೂ meeರಿದ ಸಾಧನೆ ಮಾಡಿದ್ದು, ತಬಲಾ ವಾದನೆಯೊಂದಿಗೆ ಲೋಹದ ಹಕ್ಕಿನ ಚಾಲನಕನಾಗಿಯೂ ಹೊರಹೊmmiದ್ದಾನೆ.
ಈ ರೀತಿಯ ಸಾಧನೆ ಮಾಡಿರುವಾತ ಯಾವುದೋ ದೊಡ್ಡ ಮನೆಯ ಹುಡುಗನಲ್ಲ. ಮೂಲತ ಬೀದರನ ಋಕೇಶ. ಈತ ಈಗ ಬೆಳಗಾviಯ ನಿವಾಸಿಯಾಗಿದ್ದು, ಹೈದ್ರಾಬಾದ್-ಕರ್ನಾಟಕದ ಹಾಗೂ ಬೀದರ ಜಿಲ್ಲೆಯ ಪ್ರಥಮ ಕಮರ್ಶಿಯಲ್ ಪೈಲೇಟ್ ಆಗಿ ಹೊರಹೊmmiದ್ದಾನೆ. ಈತನ ತಂದೆ viಜಯಕುಮಾರ ಪಾಟೀಲ `ದಿ hindu ಪತ್ರಿಕೆ ವರದಿಗಾರರಾಗಿದ್ದಾರೆ.

ಸಾಮಾನ್ಯ ಪತ್ರಕರ್ತನೋರ್ವನ ಮಗನಾಗಿರುವ ಋಕೇಶ ಬಾಲ್ಯದಲ್ಲಿ ಆಗಸದಲ್ಲಿ ಹಾರಾಡುತ್ತಿದ್ದ viಮಾನಗಳನ್ನು ನೋಡುತ್ತಾ ಮುಂದೊಂದು ದಿನ ಈ viಮಾನಗಳನ್ನು ನಡೆಸುವ ಚಾಲಕನಾಗುವ ಕನಸ್ಸು ಕಾಣುತ್ತಲೇ ಬೆಳೆದ. ಈತ ದೊಡ್ಡವನಾದಂತೆ ಆತನ ಕನಸ್ಸು ಸಹ ದೊಡ್ಡದಾಗುತ್ತಲೇ ಹೊರಟಿತ್ತು. ಆದರೆ ಈ ಕನಸಿನೊಂದಿಗೆ ಆತನ ಮನಸ್ಸು ಸಂಗೀತದ ಕಡೆಗೂ ಒಲವು ತೋರುತಿತ್ತು. heeಗಾಗಿ ತನ್ನ viದ್ಯಾಭ್ಯಾಸದ ಜೊತೆಗೆ ಸಂಗೀತದಲ್ಲಿ ಪಳಗಿದ ಋಕೇಶ ಈಗ viಮಾನ ಚಾಲನಾ ತರಬೇತಿಯನ್ನು ಸಹ ಪೂರ್ಣಗೊಳಿಸಿ ಕಮರ್ಶಿಯಲ್ ಪೈಲೇಟ್ ಆಗಿ ಹೊರಹೊmmiದ್ದಾನೆ.
ಲೋಹದ ಹಕ್ಕಿಯಲ್ಲಿ ಹಾರಾಡುವ ಕನಸನ್ನು ಸಾಕಿಕೊಂಡು ಬೆಳೆದ ಋshiಕೇಷ ಬೆಳಗಾvi ಕೇಂದ್ರಿಯ viದ್ಯಾಲಯ ನಂ. ೨ರಲ್ಲಿ ಎಸ್ಎಸ್ಎಲ್ಸಿ ಮುಗಿಸಿ ಬಳಿಕ ಆರ್ಎಲ್ಎಸ್ನಲ್ಲಿ viಜ್ಞಾನ viಷಯದಲ್ಲಿ ಪಿಯುಸಿ ಶಿಕ್ಷಣ ಮುಗಿಸಿದ. ಪಿಯುಸಿ ಮುಗಿಯುತ್ತಿದ್ದಂತೆ ಈತನಲ್ಲಿದ್ದ ಸಂಗೀತಗಾರ ಜಾಗೃತಗೊಂಡು ಬಿಟ್ಟಿದ್ದ. ಹಾಗಾಗಿ ಈತ ಪಿಯುಸಿ ನಂತರ ಮುಂಬೈನ ಅಖಿಲ ಭಾರತೀಯ ಗಂಧರ್ವ ಮಹಾviದ್ಯಾಲಯ ಮಂಡಳದ ಸಂಗೀತ viದ್ಯಾಲಯದಿಂದ ಸಂಗೀತ viಷಾರದ (ಬಿ.ಮ್ಯೂಸಿಕ್)ಪದvi ಪಡೆದುಕೊಂಡ. ಅಲ್ಲದೇ ಈ ಪದviಯ ಬಳಿಕ ಮಹಾರಾಷ್ಟ್ರ ಹಾಗೂ ಕರ್ನಾಟಕದ ಅನೇಕ ಕಡೆಗಳಲ್ಲಿ ತನ್ನ ತಬಲಾ ವಾದನೆಯ ಪ್ರದರ್ಶನ ನೀಡಿ ಜನರಿಂದ ಪ್ರಶಂಸೆಗೆ ಒಳಗಾಗಿದ್ದಾನೆ.
ಸಂಗೀತ ಪದvi ಪಡೆದ ಬಳಿಕ ಬೆಳಗಾviಯ ಹಯವದನ ಜೋಶಿ ಅವರ ಮಾರ್ಗದರ್ಶನದಲ್ಲಿ ಸಂಗೀತ ಸಾಧನೆ ಮಾಡಿ ತಬಲಾ ವಾದನೆಯಲ್ಲಿ ಸಂಪೂರ್ಣವಾಗಿ ಕರಗತಗೊಂಡ ಋಕೇಷ ಹಲವು ರಾಜ್ಯಮಟ್ಟದ ಕಾರ್ಯಕ್ರಮ ಪ್ರೇಕ್ಷಕರ ಮನ ರಂಜಿಸಿದ್ದಾನೆ.
ಅವುಗಳಲ್ಲಿ ಕಿತ್ತೂರು ಉತ್ಸವ, ಕುಂದಗೋಳದ ಪಂಡಿತ ಸವಾ ಗಂಧರ್ವ ಉತ್ಸವ ಸೇರಿದಂತೆ ಬೆಳಗಾvi, ಧಾರವಾಡ, ಮೈಸೂರು ಹಾಗೂ rajyagalli ಪ್ರಸ್ತುತ ಪಡಿಸಿರುವ ತಬಲಾ ಜುಗಲ್ಬಂಧಿ ಪ್ರಮುಖವಾಗಿವೆ.


ಗಂಗೂಬಾ ಹಾನಗಲ್ ಅವರು ಹಯವನದ ಜೋಶಿಯವರ ಸಂಗೀತ ಶಾಲೆಯ ಕಾರ್ಯಕ್ರಮದಲ್ಲಿ ಭಾಗವhiಸಲು ಬೆಳಗಾviಗೆ ಆಗmiಸಿದ್ದ ಸಂದರ್ಭದಲ್ಲಿ ಋಕೇಷ ತಬಲಾ ಜುಗಲ್ಬಂಧಿಯಲ್ಲಿ ಗಾನviದೂshiಯ ಮನಗೆದ್ದಿದ್ದನ್ನು ಇಲ್ಲಿ ಸ್ಮರಿಸಬಹುದು.
ಅಲ್ಲದೇ ತನ್ನ ತಬಲಾ ವಾದನೆಯ ಸಾಧನೆಂದಾಗಿ ಈತನಿಗೆ ಹಲವು ರಾಜ್ಯ ಪುರಸ್ಕಾರಗಳು ಲಭಿಸಿವೆ. ಇದನ್ನೆಲ್ಲಾ ನೋಡಿ ಈತನ ಸ್ನೇhiತರು ಹಾಗೂ ಬಹುತೇಕ ಸಂಬಂಧಿಕರು ಈತ ಮುಂದೆ ದೊಡ್ಡ ತಬಲಾ ವಾದಕನಾಗುತ್ತಾನೆ ಎಂದು ಉhiಸಿಕೊಂಡಿದ್ದರು. ಆದರೆ ಸಂಗೀತ ಸಾಧನೆಯ ಬಳಿಕ ಋshiಕೇಷ ತನ್ನ ಮನಸ್ಸು ಹಾಗೂ ದೇಹವನ್ನು viಮಾನ ಚಾಲನೆಯ ಕನಸ್ಸನ್ನು ನನಸು ಮಾಡಿಕೊಳ್ಳುವತ್ತ ಹರಿಬಿಟ್ಟಾಗ ಬೀದರನ ಕಾರ್ಪೋರೇಷನ್ ಬ್ಯಾಂಕ್ ಈತನಿಗೆ ಆರ್ಥಿಕ ಸಹಾಯ ಒದಗಿಸಿತು.
ಕಳೆದ ೨೦೦೮ರ ಫೆಬ್ರುವರಿಯಲ್ಲಿ ಅಮೇರಿಕಾದ ಫಾಲ್ಕನ್ ಅವೈಟೇಷನ್ ಅಕಾಡೆmi(ಅಂಟ್ಲಾಂಟ್)ಯಲ್ಲಿ ಪೈಲೇಟ್ ಪ್ರಶಿಕ್ಷಣವನ್ನು ಪೂರ್ಣಗೊಳಿಸಿದ ಈತನಿಗೆ ಜುಲೈ ೧೧ ರಂದು ಆ ಆಕಾಡೆmi ವtiyinದ ಕಮರ್ಶಿಯಲ್ ಪೈಲೇಟ್ ಲೈಸನ್ಸ್ ಲಭಿಸಿದೆ.
ಸಂಗೀತ ಹಾಗೂ viಮಾನ ಚಾಲನೆ ಎರಡರಲ್ಲಿಯೂ ಸಾಧನೆ ಮಾಡಿರುವ ಋಕೇಶ ಈಗ ಭಾರತದಲ್ಲಿನ ಉತ್ತಮವಾದ ಏರಲೈನ್ಸ್ವೊಂದರಲ್ಲಿ ನೌಕರಿ ಮಾಡುವ ಉದ್ದೇಶ ಹೊಂದಿದ್ದಾನೆ. ಅಲ್ಲದೇ ಬಿಡುviನ ಸಮಯದಲ್ಲಿ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡುವುದನ್ನು ಬಿಡುವುದಿಲ್ಲ ಎನ್ನುತ್ತಾನೆ ಋshiಕೇಶ.

No comments:

Post a Comment

ವರ್ಷದ ಕೊನೆ ದಿನ ಕರೆಂಟ್ ಕಟ್

 ವಿದ್ಯುತ ವ್ಯತ್ಯಯ ಧಾರವಾಡ (ಕರ್ನಾಟಕ ವಾರ್ತೆ) ಡಿ.28:* ಹೆಸ್ಕಾಂನ 110 ಕೆವಿ. ಯು.ಎ.ಎಸ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ...