ಈ ಜಗತ್ತಿನಲ್ಲಿರುವ ನೂರಾರು ಕೋಟಿ ದೇವಾನು ದೇವತೆಗಳಲ್ಲಿ ಬ್ರಹ್ಮನಷ್ಟು ನೀಚ ದೇವರು ಯಾವನೂ ಇಲ್ಲ. ನನಗೆ ತಿಳಿವಳಿಕೆ ಮೂಡಿದಾಗಿನಿಂದ ಆ ಬ್ರಹ್ಮನನ್ನು ಬೈಯುತ್ತಲೇ ಇರುತ್ತೇನೆ.
ನಾನು ಮೊದಲೆಲ್ಲಾ ಚಿಕ್ಕವನಿದ್ದಾಗ ಜೀವನದಲ್ಲಿ ಕಷ್ಟಗಳನ್ನು ಎದುರಿಸುತ್ತಿದ್ದಾಗ ಅಷ್ಟೇ ಕಷ್ಟದಿಂದ ಅವುಳನ್ನು ಸ್ವೀಕರಿಸುತ್ತಿದೆ. ಅಲ್ಲದೇ ನಮಗೆ ಸರಿಯಾಗಿ ಹೊಟ್ಟೆಗೆ ತಂದು ಹಾಕದ ತಂದೆಯ ಮೇಲೆ ದ್ವೇಷ ಬೆಳೆಸಿಕೊಂಡಿದ್ದೇ .ಆದರೆ ಆ ಬಳಿಕವೇ ಗೊತ್ತಾಗಿದ್ದು, ನಮ್ಮ ಒಂದು ಹೊತ್ತಿನ ಊಟಕ್ಕಾಗಿ ನಮ್ಮ ತಂದೆ ಎಷ್ಟೊಂದು ದುಡಿಯುತ್ತಾರೆ. ಎಷ್ಟೊಂದು ಪ್ರೀತಿ ಕಾಳಜಿ ತೋರಿಸು೬ತ್ತಾರೆ ಎನ್ನುವುದು.
ಅದು ಗೊತ್ತಾಗುವ ಹೊತ್ತಿಗೆ ನಾನು ಈ ರೀತಿ ಕಷ್ಟ ಪಡಲು ಕಾರಣಿಕರ್ತ ಕಮಲದ ಹೂ"ನ ಮೇಲೆ ಆರಾಮಾಗಿ ಕುಳಿತುಕೊಂಡಿರುವ ಆ ನೀಚ ಬ್ರಹ್ಮ ಎನ್ನುವುದು ತಿಳಿದು ಬಂತು. ಆ ಬಳಿಕ ನಾನು ನನ್ನ ತಂದೆಯನ್ನು ತುಂಬಾ ಪ್ರೀತಿಸುವುದಕ್ಕೆ ಆರಂಭಿಸಿದೆ. ಆ ದೇವರು ಅಲ್ಲ ಅಲ್ಲ ನೀಚ ಬ್ರಹ್ಮ ಒಬ್ಬರಿಗೆ ಒಂದು ಕೊಟ್ಟು ಇನ್ನೊಂದು ಕೊಡುವುದಿಲ್ಲವಂತೆ. ಶ್ರೀಮಂತರಿಗೆ ಸಾಕಷ್ಟು ಹಣ ಕೊಟ್ಟು ಶಾಂತಿ-ನೆಮ್ಮದಿ ನೀಡುವುದಿಲ್ಲ ಎನ್ನುವುದನ್ನು ನಾನು ಚಿಕ್ಕವನಿದ್ದಾಗ ಕೇಳಿದ್ದೆ.
ಆದರೆ ಆ ದೇವರು ನಮಗೆ ಯಾವುದೇ ಹಣ- ಸಂಪತ್ತು ನೀಡಲಿಲ್ಲ. ಆದರೆ ಜೊತೆಗೆ ಸುಖ-ಸಂತೋಷಾನೂ ನೀಡಿಲಿಲ್ಲ. ಮ್ಯಾಟ್ರಿಕ್‌ವರೆಗೆ ಓದಿದ್ದ ನಮ್ಮ ತಂದೆಗೆ ಸರ್ಕಾರಿ ನೌಕರಿ ಬಂದಿತ್ತು. ಶಾಲಾ ಮಾಸ್ತ ನೌಕರಿ. ಅದು ತಿಂಗಳಿಗೆ ೧೦ರೂ ಸಂಬಳವಂತೆ. ಆದರೆ ನಮ್ಮ ಮುದಿ ಅಜ್ಜ ತಿಂಗಳಿಗೆ ೧೦ರೂಗೆ ದುಡಿಯೋದಕ್ಕೆ ಯಾಕ್ ಬೇಕು. ಸರ್ಕಾರಿ ಗುಲಾಮಾ ಆಗಿ. ಹೊಲದಾಗ್ ಕಬ್ಬಿಣ ಗಾನಾದಾಗ ಕೆಲಸಾ ಮಾಡು ದಿನಕ್ಕ ೫ರೂ. ಸಂಪಾದನೆ ಮಾಡೀತಿ ಅಂದರಂತೆ.
ನಮ್ಮ ಅಜ್ಜನ ಈ ನಿರ್ಧಾರವೇ ನಾವು ಕಷ್ಟದಲ್ಲಿ ಜೀವನ ಕಳೆಯಬೇಕಾದಂತಹ ಸ್ಥಿತಿಗೆ ಕಾರಣವಾತು. ಆದರೆ ಆತ ತನ್ನ ಸ್ವಾಭಿಮಾನವನ್ನು ಬಲಿಕೊಡಲಿಲ್ಲ. ಸ್ವಾತಂತ್ರ್ಯ ಹೋರಾಟಗಾರನಾಗಿದ್ದರೂ ನಮ್ಮ ಅಜ್ಜ ನಾನು ಸ್ವಾತಂತ್ರ್ಯ ಹೋರಾಟಗಾರ ಎಂದು ಹೇಳಿಕೊಮಡು ಸರ್ಕಾರಿ ಪಿಂಚಣಿ ಪಡೆಯಲಿಲ್ಲ. ಆತನಿಗೆ ಸರ್ಕಾರದ ಮೇಲೆ ದ್ವೇಷ ಇತ್ತು. ಒಂದೇಡೆ ಸ್ವಾತಂತ್ರ್ಯ ಬಂದು ಇನ್ನೊಂದಡೆ ನಮ್ಮ ದೇಶದಿಂದ ಪಾಕಿಸ್ತಾನ ಒಡೆದು ಹೋಗಲು ಇದೇ ಸರ್ಕಾರವೇ ಕಾರಣವಾತು ಎನ್ನುವ ದ್ವೇಷ ಅವನಲ್ಲಿತ್ತು. ಹಾಗಾಗಿ ಆತನ ಮಗನಾದ ನಮ್ಮ ಅಪ್ಪನವರನ್ನು ಸರ್ಕಾರಿ ಕೆಲಸಕ್ಕೆ ಆತನ ಅರ್ಥದಲ್ಲಿ ಸರ್ಕಾರಿ ಗುಲಾಮನಾಗುವುದಕ್ಕೂ ಬಿಡಲಿಲ್ಲ.
ತನ್ನ ಜೀ"ತದ ಕೊನೆಯಲ್ಲಿ ನಮ್ಮಜ್ಜ ತನ್ನ ಮೂವರು ಮಕ್ಕಳಿಗಗೆ ಹೇಳಿದ ವಾಕ್ಯವೆಂದರೆ ನಮ್ಮ ಕುಟುಂಬದಲ್ಲಿ ಯಾರೂ ಸರ್ಕಾರಿ ನೌಕರಿ ಸೇರಕೂಡದು. ಬೇರೆ ಕಡೆ ದುಡಿದು ತಿನ್ನಿ. ಆದರೆ ಸರ್ಕಾರದ ಗುಲಾಮರಾಗಬೇಡಿ ಎಂದು ಹೇಳಿದ್ದ. ಪರಿಣಾಮವಾಗಿ ನಾನು ಇವತ್ತು ಈ ಹಾಳು ಪತ್ರಿಕಾರಂಗದಲ್ಲಿ ನಯಾಪೈಸೆ ಕೈಗೆ ಸೇರದಂತಹ ಕೆಲಸಕ್ಕೆ ಸೇರಬೇಕಾತು.
ಇದಿಷ್ಟು ನನ್ನ ಪೂರ್ವಾಪರ. ಇನ್ನು ನನ್ನ ಬಗ್ಗೆ ಹೇಳಿಕೊಳ್ಳಬೇಕು ಅಂದರೆ. ನಮ್ಮಜ್ಜ ಬ್ರಿಟಿಷರನ್ನು "ರಿಸುವಷ್ಟು ಬಲಿಷ್ಠವಾದ ಬಾಂಬ್‌ಗಳ ತಯಾರಿಕೆಗೆ ಬೇಕಾಗುತ್ತಿದ್ದ ಕಚ್ಚಾಮದ್ದನ್ನು ಯಕ್ಕಗಿಡಿದ ಕಟ್ಟಿಗೆಗಳ ಇದ್ನಿಂದ ತಯಾರಿಸಿ ಕೊಟ್ಟು ಎಷ್ಟೊ ಬ್ರಿಟಿಷರ ಸಾ"ಗೆ ಕಾರಣವಾಗಿದ್ದ. ಆ ಪಾಪಕ್ಕಾಗಿ ಏನೋ ದೇವರು ಈಗ ಅಪ್ಪಟ ದೇಶಭಕ್ತನೊಬ್ಬನ ಮೊಮ್ಮಗನಾದ ನನಗೆ ಹಲವು ತೊಂದರೆಗಳನ್ನು ಕೊಡುತ್ತಿದ್ದಾನೆ.
ಮೈ ತುಂಬಾ ಕೆಲಸ ಕೈ ತುಂಬಾ ಸಂಬಳ"ಲ್ಲ. ಸಂಬಳ ಬಿಟ್ಟು ಗಿಂಬಳ ಸಾಕಷ್ಟು ಸಿಗುತ್ತದೆ ಅಲ್ಲೊ ಎಂದು ಎಷ್ಟೊ ಜನ ಸ್ನೇ"ತರ "ಗಳೆಯುತ್ತಾರೆ. ಆದರೆ ಯಾರದೋ ಮುಂದೆ ಕೈ ಚಾಚಿ ವ್ಯಭಿಚಾರ ಮಾಡಲು ನನ್ನ ಮನಸ್ಸು ಒಪ್ಪುತ್ತಿಲ್ಲ. ಇಲ್ಲದೇ ಹೋದಲ್ಲಿ ಈ "ಂದಿನ ಸಂಸತ್ ಚುನಾವಣೆಯಲ್ಲಿ ಚಿಕ್ಕೋಡಿಗೆ "ಶೇಷ ವರದಿಗಾರನಾಗಿ ಹೋದಾಗ ಹಾಗೂ ಅದಕ್ಕೂ ಮಂಚೆ ಅಪರೇಷನ್ ಕಮಲದಿಂದಾಗಿ ಎರಡು ಕ್ಷೇತ್ರಗಳಿಗೆ ಉಪಚುನಾವಣೆ ನಡೆದಾಗಲೇ ನಾನು ಕೆಲವೊಂದಿಷ್ಟು ಹಣ ಮಾಡಿಕೊಳ್ಳಬಹುದಿತ್ತು. ಆದರೆ ಎದುರಿಗೆ ಬಂದ್ ಲಕ್ಷ್ಮಿಯನ್ನು ಒದ್ದು ಕಳು"ಸಿದೆ.
ಇಷ್ಟೊಂದು ವೇದನೆ ಯಾಕಂದರೆ ಮೊನ್ನೆ ತಂದೆ ಆರೋಗ್ಯ ಸರಿಲ್ಲದಾಗ ಐದು ದಿನ ತಡವಾಗಿ ಹೋಗಬೇಕಾತು. ಅದಕ್ಕೆ ಕಾರಣ ಈ ದರಿದ್ರ ಬಿಜೆಪಿಯವರು ಬೆಳಗಾ"ಯಲ್ಲಿ ತಮ್ಮ ಹಡಪೆ ಸಭೆ ಇಟ್ಟುಕೊಂಡಿದ್ದರು. ಈ "ಂಡ್ರಿ ಮಕ್ಕಳ ಐಷಾರಾಗಿ ಸಭೆಯ ವರದಿ ಮಾಡೋದಕ್ಕಾಗಿ ನಮಗೆ ರಜೆಲ್ಲ. ಸಭೆಯಲ್ಲಿ ಎಷ್ಟೋ ತರತರಹದ ಅಡುಗೆ ಮಾಡಿದ್ದರೂ ಊಟ ಮಾಡಲು ಆಗಲಿಲ್ಲ. ಕಾರಣ ನನಗೆ ಬೇಗ ಸಭೆ ಮುಗಿಯಲಿ. ನಾನು ನಮ್ಮ ತಂದೆಯನ್ನು ನೋಡುವುದಕ್ಕೆ ಹೋಗಲಾಗುತ್ತದೆ ಎನ್ನುವ "ಚಾರದಲ್ಲಿಯೇ ಇದ್ದೆ. ಕೊನೆಗೆ ಸಭೆ ಮೂಗಿಸಿ ಮನೆಗೆ ಹೋದೆ.
ದರೆ ಈಗ ಮತ್ತೊಂದು ಸಮಸ್ಯೆ ತಂದೆಯ ಆರೋಗ್ಯ ಸುಧಾರಿಸಿದೆ. ಎಲ್ಲವೂ ಸರಿಹೋತು. ನಾನು ಊರಿಗೆ ಹೋಗಿ ಮೂರು ದಿನ ಅಲ್ಲಿಯೇ ಉಳಿದು ಬಿತ್ತನೆ ಕಾರ್ಯ ಮಾಡಿ ಹೊಲ ನೋಡಿಕೊಳ್ಳಲು ಓರ್ವ ರೈತನನ್ನು ಗುರುತು ಮಾಡಿ ಬಂದೆ. ಆದರೀಗ ನಿರಾಳ ಆಗುತ್ತಿದ್ದಂತೆ ಮತ್ತೆ ತಾ ಆರೋಗ್ಯ ಸರಿಲ್ಲ. ಮೊನ್ನೆ ತಂದೆಯನ್ನು ನೋಡಲು ಹೋಗುವಾಗ ಕೈಯಲ್ಲಿ ಹಣ"ತ್ತು. ರಜೆರಲಿಲ್ಲ. ಈಗ ರಜೆದೆ ಆದರೆ .... .ಇಲ್ಲ.
ಇದೇ "ಧಿಯ ಆಟ. ಅಷ್ಟೇ ಏಕೆ ನಿನ್ನೆ ಮೊನ್ನೆಯವರೆಗೂ ಬಂದವರೆಲ್ಲಾ ಏನೇನನೋ ಆಗಿ ಹೋಗಿದ್ದಾರೆ ಆದರೆ ನಾವು ಮಾತ್ರ ಇಲ್ಲಿಯೇ ಇದ್ದೇವೆ. ಇದೇ "ಧಿಯ ಆಟ.
ಆ ಬ್ರಹ್ಮ ನನ್ನ ಹಣೆಬರಹ ಬರೆಯುವಾಗ್ ಪೆನ್ನಿನ್ ಇಂಕ್ ತೀರಿತ್ತು. ಅನಿಸುತ್ತೆ. "ಗಾಗಿ ಆ ನೀಚ ಪೆನ್ ಜಾಡಿಸಿ ಬರೆದಿರಬೇಕು. ಅದಕ್ಕೆ ನನ್ನ ಜೀವನ ಇಂಕ್ ಖಾಲಿಯಾದ ಪೆನ್‌ನಂತಾಗಿದೆ.
Monday, July 5, 2010
Subscribe to:
Post Comments (Atom)
ಮನೆಪಾಠ ಕೇಂದ್ರಗಳಿಗೆ ಬ್ಯಾಗ್ ಮತ್ತು ಬುಕ್ಸ್ ವಿತರಣೆ
Dharwad: ಗುರುಕುಲ ಪದ್ಧತಿಯಂತೆ ಒಬ್ಬರೇ ಶಿಕ್ಷಕರಿಂದ ನಡೆಸುವ ಈ ನವೀನ ಪ್ರಯೋಗವೇ ಏಕ ಶಿಕ್ಷಕ ವಿದ್ಯಾಲಯ ಅಂದರೆ ಮನೆಪಾಠ ಕೇಂದ್ರ ಎಂದು ವನವಾಸಿ ಕಲ್ಯಾಣ ಕರ್ನಾಟಕ ಸಂಸ್ಥ...
.jpeg)
-
ನನಗೆ ಇರುವ ಚಟಗಳಲ್ಲಿ ಟಿವಿ ನೋಡುವುದು ದೊಡ್ಡ ಚಟ. ಹೀಗಾಗಿ ಮನೆ ಹಾಗೂ ಕಚೇರಿಯಲ್ಲಿದ್ದರೂ ಸಹ ಸದಾ ಟಿವಿಯನ್ನು ನೋಡುತ್ತಲೇ ಇರುತ್ತೇನೆ. ಇನ್ನು ಹೊರಗಡೆ ಸುತ್ತಾಡುವಾಗಲೂ ...
-
ಬೆಳಗಾವಿ, ೧- ಹಣದುಬ್ಬರ ಹಾಗೂ ಬೆಲೆ ಏರಿಕೆ ಮಧ್ಯೆ ಈಗ ಬೆಳಗಾವಿ ನಗರ ಹಾಗೂ ಜಿಲ್ಲೆಯಲ್ಲಿ ಚಿಲ್ಲರೆ ನಾಣ್ಯಗಳ ಅಭಾವ ಸೃಷ್ಟಿಯಾಗಿದ್ದು, ಇದನ್ನು ಕೆಲವರು ದಂಧೆಯನ್ನಾಗಿಯೂ ...
-
ರಾಜ್ಯದಲ್ಲಿ ತನ್ನ ಖಜಾನೆ ತುಂಬಿಸಿಕೊಳ್ಳುತ್ತಿರುವ ಮಲ್ಟಿಪ್ಲೆಕ್ಸ್ಗಳು, ಒಂದಲ್ಲ ಒಂದು ರೀತಿಯಲ್ಲಿ ಕನ್ನಡ ಚಿತ್ರಗಳಿಗೆ ಧಕ್ಕೆ ಮಾಡುತ್ತಲೇ ಬರುತ್ತಿವೆ. ಕನ್ನಡ ಸಿನಿಮಾ...
No comments:
Post a Comment