Monday, May 24, 2010

ಗ್ರಾಹಕರ ತಾಳ್ಮೆ ಕೆಣಕುತ್ತಿರುವ ಬಿಎಸ್‌ಎನ್‌ಎಲ್

ಕೇಂದ್ರ ಸರ್ಕಾರ ಸ್ವಾಮ್ಯದ ಭಾರತೀಯ ದೂರ ಸಂಚಾರ ನಿಗಮ (ಬಿಎಸ್‌ಎನ್‌ಎಲ್) ಒಂದೇಡೆ ಗ್ಲೋಬಲ್ ಟೆಲಿಕಾಂ ದರ ಸಮರದಲ್ಲಿ ಸೇರ್ಪಡೆಗೊಳ್ಳುವ ಮೂಲಕ ಹೊಸ ಗ್ರಾಹಕರನ್ನು ಆಕರ್ಷಿಸುತ್ತಿದ್ದರೇ ಇತ್ತ ಬೆಳಗಾವಿಯಲ್ಲಿ ಇದ್ದ ಗ್ರಾಹಕರನ್ನು ಸಹ ಕಳೆದುಕೊಳ್ಳುತ್ತಿದೆ.
ಬೆಳಗಾವಿಯಲ್ಲಿ ಬಿಎಸ್‌ಎನ್‌ಎಲ್ ನೆಟವರ್ಕ್‌ಗೆ ಪದೇ ಪದೇ ಅದ್ಯಾವ ರೋಗ ಬರುತ್ತದೆಯೋ ಗೊತ್ತಿಲ್ಲ. ಒಂದೊಂದು ಸಲ ಈಡೀ ದಿನ ನೆಟವಕ್ ಡೆಡ್ ಆಗಿ ಬಿಟ್ಟಿರುತ್ತದೆ. ಇಂತಹ ಸಂದರ್ಭದಲ್ಲಿ ಬಿಎಸ್‌ಎನ್‌ಎಲ್ ಮೊಬೈಲ್ ಗ್ರಾಹಕರು ಪಡುವ ಪರಿಪಾಟಲು ಅಷ್ಟಿಷ್ಟಲ್ಲ. ಹೀಗಾಗಿ ಬಿಎಸ್‌ಎನ್‌ಎಲ್ ನೆಟವರ್ಕ್ ಕಿರಿಕಿರಿಯಿಂದ ಬೇಸತ್ತು ಹೋಗಿರುವ ಗ್ರಾಹಕರು ಈಗ ಬೇರೆ ಖಾಸಗಿ ಕಂಪನಿಗಳ ಸಿಮ್‌ಗಳಿಗೆ ಮೊರೆ ಹೋಗುವ ಮೂಲಕ ಬಿಎಸ್‌ಎನ್‌ಎಲ್‌ಗೆ ವಿದಾಯ ಹೇಳುತ್ತಿದ್ದಾರೆ.
ಬೆಳಗಾವಿಯಲ್ಲಿ ಈ ಟೆಲಿಕಾಂ ಸಂಸ್ಥೆ ಗ್ರಾಹಕರು ತಾಳ್ಮೆ ಪರೀಕ್ಷೆ ಮಾಡುವ ಸ್ಪರ್ಧೆಯನ್ನು ನಡೆಸುತ್ತಿದೆಯೋ ಏನೋ? ಎಂದು ಗ್ರಾಹಕರು ಈಗ ಆಡಿಕೊಳ್ಳುವಂತಾಗಿದೆ ಏಕೆಂದರೆ ರಿಚಾರ್ಜ್ ಮಾಡುವ ಕೆಲವೊಂದು ಅಂಗಡಿಗಳಲ್ಲಿ ಈಗ ಬಿಎಸ್‌ಎನ್‌ಎಲ್ ಗ್ರಾಹಕರು ಹೋಗಿ ರಿಚಾರ್ಜ್‌ಗೆ ಕೇಳಿಕೊಂಡರೆ ತಕ್ಷಣವೇ ಆಗುವುದಿಲ್ಲ. ಇಷ್ಟು ಗಂಟೆ ಅಂತ ಹೇಳುವುದಕ್ಕೂ ಆಗುವುದಿಲ್ಲ. ಯಾವಾಗ ಬೇಕಾದರೂ ಆಗಬಹುದು ಎಂದು ಹೇಳುತ್ತಾರೆ.
ಇಜಿ ರಿಜಾರ್ಚ್ ಕಥೆ ಇದಾದರೇ ಇನ್ನು ರಿಜಾರ್ಚ್ ಕಾರ್ಡ್‌ಗಳನ್ನು ಪಡೆದುಕೊಂಡು ಗ್ರಾಹಕರು ತಾವೇ *೧೨೩* ಜೊತೆಗೆ ೧೮ ಅಂಕೆಗಳ ನಂಬರ್ ಹಾಕಿ # ಹೊಡೆದು ಕ್ಲಿಕ್ ಮಾಡಿದರೆ `ಯುವರ್ ರಿಕ್ವೇಸ್ಟ್ ನಾಟ್ ಕಂಪ್ಲೇಟ್' ಎಂದು ಬರುತ್ತದೆ ಹೊರತು ರಿಜಾರ್ಚ್ ಆಗುವುದೇ ಇಲ್ಲ. ಇದರಿಂದ ಬೇಸತ್ತು ಗ್ರಾಹಕರ ಸೇವಾ ಪ್ರತಿನಿಧಿಗಳನ್ನು ಸಂಪರ್ಕಿಸಿದರೆ ಅಲ್ಲಿಂದ ಬರುವ ಉತ್ತರವೇ ಬೇರೆ. `ನೀವೇ ಯಾವುದೋ ಸಂಖ್ಯೆಯನ್ನು ತಪ್ಪು ಹಾಕಿದ್ದೀರಿ. ನಿಮ್ಮ ಮೊಬೈಲ್ ಸ್ವಿಚ್ಛ್ ಆಫ್ ಮಾಡಿ ಅರ್ಧ ಗಂಟೆಯ ಬಳಿಕ ಆನ್ ಮಾಡಿ ರಿಜಾರ್ಚ್ ಮಾಡಿ ಆಗುತ್ತದೆ' ಎಂಬ ಸಲಹೆ ಬರುತ್ತದೆ.
ಇದೆನ್ನೆಲ್ಲಾ ನೋಡಿದರೆ ಬಿಎಸ್‌ಎನ್‌ಎಲ್ ಬೆಳಗಾವಿ ಜನತೆಯ ತಾಳ್ಮೆಯನ್ನು ಪರೀಕ್ಷಿಸಲು ಯಾವುದಾದರೂ ಸ್ಪರ್ಧೆಯನ್ನು ಏರ್ಪಡಿಸರಬಹುದು ಎಂದು ಈಗ ಜನ ಮಾತನಾಡಿಕೊತ್ತಿದ್ದಾರೆ. ಈಗ ಸಹನಶೀಲರು ಹಾಗೂ ತಾಳ್ಮೆ ಇದ್ದವರು ಮಾತ್ರ ಇನ್ನು ಬೆಳಗಾವಿಯಲ್ಲಿ ಬಿಎಸ್‌ಎನ್‌ಎಲ್ ಗ್ರಾಹಕರಾಗಬಹುದು. ಏಕೆಂದರೆ ಬಿಎಸ್‌ಎಲ್‌ಎನ್ ಇತ್ತೀಚೆಗೆ ಗ್ರಾಹಕರಿಗೆ ಕಿರಿಕಿರಿ ನೀಡುತ್ತಿದ್ದೆಯೋ ಅಥವಾ ಗ್ರಾಹಕರ ತಾಳ್ಮೆ ಪರೀಕ್ಷಿಸಿ ಹೆಚ್ಚು ತಾಳ್ಮೆಯಿಂದ ಇರುವವರೆಗೆ ಬಹುಮಾನ ನೀಡಲು ಮುಂದಾಗಿರಲೂಬಹುದು. ತಾಳ್ಮೆ ಕಳೆದುಕೊಳ್ಳುವವರೇನಾದರೂ ಬಿಎಸ್‌ಎನ್‌ಎಲ್ ಗ್ರಾಹಕರಾಗಿದ್ದರೇ ನೆಟವರ್ಕ್ ಕಿರಿಕಿರಿಯಿಂದ ಬೇಸತ್ತು ಮೊಬೈಲ್‌ನ್ನು ಮೂಲೆಗೆಸೆಯಬಹುದು.
ಸರ್ಕಾರಿ ಸಂಸ್ಥೆಗಳ ಕೆಲವೊಂದು ಎಡರು ತೊಡರುಗಳು ಖಾಸಗಿ ಸಂಸ್ಥೆಗಳ ಪ್ರಗತಿಗೆ ಯಾವ ರೀತಿಯ ಸಹಕಾರ ಒದಗಿಸಿಕೊಡುತ್ತವೆ ಎನ್ನುವುದಕ್ಕೆ ಬಿಎಸ್‌ಎನ್‌ಎಲ್‌ನ ಈ ಕಾರ್ಯವೈಖರಿ ಉತ್ತಮ ಉದಾಹರಣೆಯಾಗಿದೆ. ಇತ್ತೀಚೆಗೆ ದಿನದಿಂದ ದಿನಕ್ಕೆ ಬಹುತೇಕ ಬಿಎಸ್‌ಎನ್‌ಎಲ್ ಮೊಬೈಲ್ ಗ್ರಾಹಕರು ತಮ್ಮ ಸಿಮ್‌ಗಳನ್ನು ತೆಗೆದು ಮೂಲೆಗೆಸೆದು ಬೇರೆ ಕಂಪನಿಗಳಿಗೆ ಮಾರು ಹೋಗುತ್ತಿದ್ದಾರೆ ಇಷ್ಟೆಲ್ಲಾ ಆಗುತ್ತಿದ್ದರು ಸಹ ಈ ಸಂಸ್ಥೆ ಸುಧಾರಿಸಿಕೊಳ್ಳುವ ಗೋಜಿಗೆ ಹೋಗಿಲ್ಲ.
ಕಳೆದ ಎರಡು ದಿನಗಳಿಂದ ಗ್ರಾಹಕರು ರಿಜಾರ್ಚ್ ಮಾಡಿಸಿಕೊಳ್ಳಲು ನಾಲ್ಕೈದು ಗಂಟೆಗಳ ಕಾಲ ಕಾಯುವಂತಹ ಸ್ಥಿತಿ ಬಂದಿದ್ದು, ಇನ್ನಾದರೂ ಬಿಎಸ್‌ಎನ್‌ಎಲ್ ಗ್ರಾಹಕರಿಗೆ ಉತ್ತಮ ಸೇವೆ ನೀಡುವತ್ತ ಗಮನ ಹರಿಸುತ್ತದೆಯೋ ಕಾದು ನೋಡಬೇಕು.

No comments:

Post a Comment

ಮನೆಪಾಠ ಕೇಂದ್ರಗಳಿಗೆ ಬ್ಯಾಗ್ ಮತ್ತು ಬುಕ್ಸ್ ವಿತರಣೆ

Dharwad: ಗುರುಕುಲ ಪದ್ಧತಿಯಂತೆ ಒಬ್ಬರೇ ಶಿಕ್ಷಕರಿಂದ ನಡೆಸುವ ಈ ನವೀನ ಪ್ರಯೋಗವೇ ಏಕ ಶಿಕ್ಷಕ ವಿದ್ಯಾಲಯ ಅಂದರೆ ಮನೆಪಾಠ ಕೇಂದ್ರ ಎಂದು ವನವಾಸಿ ಕಲ್ಯಾಣ ಕರ್ನಾಟಕ ಸಂಸ್ಥ...