ನಾನು ಯಾವತ್ತೂ ಚಂದನೆಯ ಹುಡುಗಿಯ ಶೋಧನೆಯಲ್ಲಿ ಇರುತ್ತೇವೆ. ತುಂಬಾ ಸೌಮ್ಯ, ಪ್ಯಾಷನ್ ಗಂಧ ಗಾಳಿಯೂ ಗೊತ್ತಿಲ್ಲ. ಉತ್ತಮ ಗುಣದ ಹುಡುಗಿಯ ಯಾವುದೇ ಜಾತಿಯಲ್ಲಿದ್ದರೂ ಮದುವೆಯಾಗಬೇಕು ಎನ್ನುವುದು ನನ್ನ ಕನಸ್ಸು.
ಹೀಗಾಗಿ ಇನ್ನುವರೆಗೂ ಯಾವುದೇ ಹುಡಗಿಯನ್ನು ಮನಸ್ಸಿಗೆ ಹಚ್ಚಿಕೊಂಡಿರಲಿಲ್ಲ. ಕಾರಣ ಮನಸ್ಸಿಗೆ ಹಚ್ಚಿಕೊಂಡ ಹುಡುಗಿಯನ್ನು ಮನೆ ಸೇರಿಸಿಕೊಳ್ಳಬೇಕು ಎನ್ನುವುದು ನನ್ನ ಬಯಕೆ.
ಊರಲ್ಲಿದ್ದಾಗ ದೊಡ್ಡ ಮನೆತನದ ಒಂದು ಹುಡುಗಿಯ ಹುಚ್ಚಿಗೆ ಬಿದ್ದಿದ್ದೆ. ಕಾರಣ ಅವಳ ಸೊಕ್ಕು ಇಳಿಸಬೇಕಾಯಿತು. ನನ್ನ ಎದುರಿಗೆ ಆಕೆಯ ಸೊಕ್ಕು ಇಳಿಯಿತು. ಅವಳ ಜೀವನದ ಶೈಲಿಯೇ ಬದಲಾಯಿತು. ಆದರೆ ಆಕೆ ಮಾತ್ರ ನನ್ನ ಜೀವನಕ್ಕೆ ಯಾವುದೇ ಸ್ವರೂಪ ನೀಡಲಿಲ್ಲ. ಅಂದರೆ ನನ್ನನ್ನು ಲವ್ ಮಾಡಲೇ ಇಲ್ಲ.
ನಾನು ಬಹಳ ಇಂತಹ ಪ್ರಕರಣಗಳನ್ನು ನೋಡಿದ್ದೇನೆ. ಹುಡುಗಿಗೊಂದು ಜೀವನ ದೊರಕಿಸಿ ಕೊಡ್ತೀನಿ ಅಂತಾ ಹುಡುಗರು ತಂದೆ-ತಾಯಿಯನ್ನು ತಿರಸ್ಕರಿಸಿ ಹೊರಗೆ ಬಂದರೂ ಹುಡುಗಿಗೆ ಯಾವನೋ ಮದುವೆಯಾದವನ ಜೊತೆ ಸಂಬಂಧ ಇರುತ್ತದೆ. ಅದನ್ನೆನ್ನೋ ಪ್ರೀತಿ ಅನ್ನಬೇಕೋ ಇಲ್ಲ ಕಾ.... ಅನ್ನಬೇಕು ನಂಗೆ ಗೊತ್ತಾಗೊಲ್ಲ.
ಆದರೆ ಈಗ ನಾನು ಹೇಳಲು ಹೊರಟಿದ್ದು, ಬೇರೊಂದು ಕಥೆಯನ್ನು ಅದು ಏನೆಂದರೆ ಇತ್ತೀಚೆಗೆ ನಾನು ಕೆಲವೊಂದು ಹುಡುಗಿಯರನ್ನು ನೋಡುತ್ತೇನೆ. ಅದರಲ್ಲಿ ಬಹುತೇಕ ಹುಡುಗಿಯರು ಮದುವೆಯಾಗಿ ಎರಡ್ಮೂರು ಮಕ್ಕಳಾದ ವಿವಾಹಿತರ ಪ್ರೀತಿಯ ಪಾಶಕ್ಕೆ ಏಕೆ ಬೀಳುತ್ತಾರೆಯೋ ಗೊತ್ತಿಲ್ಲ.
ಈಗ ನಾನು ಹೇಳಲು ಹೊರಟಿದ್ದು, ನಾನು ಬೆಳಗಾವಿಗೆ ಬಂದಾಗಿನಿಂದ ಒಂದು ಹುಡುಗಿಯನ್ನು ನೋಡುತ್ತಿದ್ದೆ. ಅದು ನಾನು ಬೆಳಗಾವಿಯಲ್ಲಿ ಪ್ರಜಾವಾಣಿಯಲ್ಲಿ ಹಿರಿಯ ವರದಿಗಾರರ ಕೈಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ನಾನೇ ಆ ಕಚೇರಿಯ ಕಸಗೂಡಿಸುವ ಕೆಲಸವನ್ನು ಮಾಡುತ್ತಿದ್ದೆ. ಕಾರಣ ಆ ದಿನಗಳಲ್ಲಿ ಪರಿಸ್ಥಿತಿ ಹಾಗಿತ್ತು.
ನಾನು ಕಸಗೂಡಿಸುವುದಕ್ಕೆ ಬೆಳಿಗಿನ ಹೊತ್ತ ರೂಮಿನಿಂದ ಬರುತ್ತಿದ್ದಾಗ ಆ ಹುಡುಗಿ ಪ್ಯಾಂಟ್ ಮತ್ತು ಕೋಟ್ ಹಾಕಿಕೊಂಡು ಲಿಂಗರಾಜ ಬಸ್ ನಿಲ್ದಾಣದಲ್ಲಿ ನಿಲ್ಲುತ್ತಿದ್ದಳು. ಬಸ್‌ಗೆ ಹೋಗಲು. ಆಕೆ ಪ್ಯಾಂಟ್ ಮತ್ತು ಕೋಟ್‌ನ್ನು ಕಾಲೇಜಿನ ಯುನಿಫಾರ್ಮ ಅನ್ನಾಗಿ ಹಾಕಿಕೊಳ್ಳುತ್ತಿದ್ದಳು. ಆದರೆ ಅವಳ ಸೌಮ್ಯ ನಂಗೆ ತುಂಬಾ ಇಷ್ಟವಾಗಿತ್ತು.
ಹೀಗಾಗಿ ನಾನು ಅವಳ ಹಿಂದೆ ಬಿದ್ದೆ. ಆದರೆ ಪ್ರೀತಿ ಮಾಡಲಿಲ್ಲ. ಆಕೆಯನ್ನು ನಿನ್ನೆ ಮೊನ್ನೆಯವರೆಗೂ ಕಳೆದ ನಾಲ್ಕೈದು ವರ್ಷಗಳಿಂದ ನೋಡುತ್ತಲೇ ಇದ್ದೇನೆ. ಇತ್ತೀಚೆಗೆ ಹೈಸ್ಕೂಲ್ ವಿದ್ಯಾರ್ಥಿಗಳು ಸಹ ಮೊಬೈಲ್ ಇಟ್ಟುಕೊಂಡು ಸುತ್ತಾಡುತ್ತಾರೆ. ಆದರೆ ಈಕೆ ಹಾಗಿಲ್ಲ. ಸರಿಯಾದ ಒಂದು ಮೊಬೈಲ್ ಸಹ ಇಲ್ಲ. ಮನೆಯಲ್ಲಿ ಮೂರು ಬೈಕ್‌ಗಳಿವೆ. ತಂದೆಯ ಕಾರು ಇದೆ. ತಮ್ಮನ ಸ್ಕೂಟಿ ಇದೆ. ಅಲ್ಲದೇ ಈಗಷ್ಟೇ ಮೂರ್‍ನಾಲ್ಕು ತಿಂಗಳ ಹಿಂದೆ ಅವಳ ತಂಗಿಗೂ ಅವರಪ್ಪ ಬೈಕ್ ಕೊಡಿಸಿದಾನೆ. ಆದರೆ ಈಕೆ ಮಾತ್ರ ಕೆಲಸದ ಕಚೇರಿಗೆ ಹೋಗುವುದು ಬಸ್ ಮತ್ತು ನಡೆದುಕೊಂಡೇ.
ಹೀಗಾಗಿ ನಾನು ಅವಳನ್ನು ತುಂಬಾ ಇಷ್ಟಪಟ್ಟಿದ್ದೆ. ಅಲ್ಲದೇ ಯುಎಸ್‌ಎ ಮೂಲದ ಮ್ಯಾಗಜಿನ್‌ವೊಂದಕ್ಕೆ ಭಾರತೀಯ ಎಡಿಷನ್‌ಗೆ ಸಹ ಸಂಪಾದಕಿಯಾಗಿರುವ ನನ್ನ ಸ್ಮೇಹಿತಿ ವೃಷಾಲಿಗೂ ಅವಳ ಬಗ್ಗೆ ಹೇಳಿದ್ದೆ. ಅದಕ್ಕೆ ಅವಳು ಡಿವಿ ತುಮ್ಹೆ ವೋ ಲಡ್ಲಿ ಸೂಟ್ ಹೋತಾ ಹೈ. ಇಸಕೆ ಸಾತ್ ಶಾದಿ ಕರಲೋ' ಅಂತಾ ಹೇಳಿದ್ದಳು.
ಹೀಗಾಗಿ ನನ್ನ ಸ್ನೇಹಿತೆ ತಲೆ ಕೆಡಿಸಿದ್ದರಿಂದ ನಾನು ಅವಳ ಹಿಂದೆ ಹುಚ್ಚನಂತೆ ಬಿದ್ದೆ. ಆಗಲೇ ಗೊತ್ತಾಗಿದ್ದು ನನಗೆ ಈ ಸೌಮ್ಯ ಮುಖದ ಹಿಂದೆ ಏನೇನಿದೆ ಅಂತಾ. ನನಗೆ ತಿಳಿದ ಮಟ್ಟಿಗೆ ಇವಳು ಸಹ ಚಾಲಾಕಿ ಹುಡುಗಿಯಾಗಿಯೇ ಕಂಡು ಬಂದಳು. ಈಕೆಗೂ ಪ್ರೀತಿ ಗೀತಿ ಬೇಕಾಗಿಲ್ಲ. ನಾನು ಮೊಬೈಲ್ ಇಲ್ಲ ಅಂತಾ ತಿಳಿದುಕೊಂಡಿದ್ದೆ. ಆದರೆ ಪುಂಡ ಪೋಕರಿಯಂತೆ ತಿರುಗಾಡುವ ಅವಳ ಬಾಯ್‌ಪ್ರೆಂಡ್ ಅವಳಿಗೆ ತನ್ನ ಹಳೆಯ ಮೊಬೈಲ್ ಕೊಡಿಸಿದ್ದಾನೆ. ಅದನ್ನು ತನ್ನ ಬಾಗ್‌ನಲ್ಲಿಯೇ ಆಕೆ ಇಟ್ಟುಕೊಳ್ಳುತ್ತಾಳೆ.
ವಿಷಯ ಇಷ್ಟೇ ಆದರೆ ಸುಮ್ಮನಿರಬಹುದು. ಈ ಚಾಲಾಕಿ ಹುಡುಗಿ ಬೆನ್ನು ಹತ್ತಿರುವ ಆತ ಪಕ್ಕಾ ಪುಂಡ ಪೋಕರಿ. ಗುರಿಯಿಲ್ಲ. ನೋಡೋದಕ್ಕೆ ಮಾತ್ರ ಚೆನ್ನಾಗಿದ್ದಾನೆ. ಸಿಕ್ಕಾಪಟ್ಟೆ ಅವರಿವರ ಕಡೆ ಸಾಲ ಮಾಡಿದ್ದಾನೆ.
ಛೇ ಈಕೆ ಬೇರೆ ಯಾರನ್ನಾದರೂ ಆಯ್ದುಕೊಳ್ಳಲಿ ನಡೆಯುತ್ತದೆ. ಆದರೆ ಹೋಗಿ ಹೋಗಿ ಇಂತಹ ಹಾಳಾದವರನ್ನು ಆಯ್ಕೆ ಮಾಡಿಕೊಂಡು ಏಕೆ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಾರೆಯೋ ಗೊತ್ತಿಲ್ಲ.
ಇಷ್ಟೆಲ್ಲಾ ಇದ್ದರೂ ಆಕೆ ಸೌಮ್ಯ ಸ್ವಭಾವದ ಹುಡುಗಿಯಂತೆ ರಸ್ತೆಯಲ್ಲಿ ಹೋಗುತ್ತಿರಬೇಕಾದರೆ ನೆಲ ನೋಡಿಕೊಂಡು ಓಡಾಡುತ್ತಾಳೆ. ಅದೇಕೋ ಗೊತ್ತಿಲ್ಲ. ಮುಖಕ್ಕೆ ಮೇಕಪ್ ಸಹ ಇಲ್ಲ. ಅಷ್ಟೇ ಏಕೆ ನಂಗೆ ಅವಳು ಪರಿಚಯವೂ ಇದೆ. ಏಕೆಂದರೆ ಆಕೆ ನನ್ನ ಸ್ನೇಹಿತೆ ವೃಷಾಲಿ ಕೈಯಲ್ಲಿ ಕೆಲವೊಂದಷ್ಟು ದಿನ ಕೆಲಸ ಮಾಡಿದಾಕೆ. ಆದರೆ ನಾವ್ಯಾರಾದರೂ ರಸ್ತೆಯಲ್ಲಿ ಸಿಕ್ಕರೇ ಮಾತನಾಡುವುದಕ್ಕೆ ಹೆದರುತ್ತಾಳೆ.
ನೋಡ್ರಿ ಸ್ವಾಮಿ ಎಂತಹ ಹುಡುಗಿಯರೆಲ್ಲಾ ನಮ್ಮ ಹೃದಯಕ್ಕೆ ಬೆಂಕಿ ಹಚ್ಚುತ್ತಾರೆ. ಛೇ ಹಾಳಾಗಿ ಹೋಗಲಿ ಬಿಡಿ. ಇಂತಹ ದಿನಗಳಲ್ಲಿ ನಮ್ಮಂತಹ ಹುಡುಗರು ಯಾವ ಹುಡುಗಿಗೆ ಬೇಕು ಹೇಳಿ. ಬೈಕ್ ಬೇಕು. ಪಾಕೇಟ್ ತುಂಬಾ ಮನಿ ಬೇಕು. ಸದಾ ಆಕೆಯ ಹಿಂದೆ ಬೀಳಬೇಕು.
ಛೆ ದುನಿಯಾ ಹಾಳಾಗಿ ಹೋಗಿದೆ ಕನ್ರಿ. ಅಂತಹುದರಲ್ಲಿ ನಾವು ಎಲ್ಲವನ್ನೂ ಸರಿ ಮಾಡ್ತೀವಿ ಎಂತಾ ಹೋಗೋದು ಉತ್ತರ ಕುಮಾರನ ಪೌರುಷ ಆಗಬಹುದು.
ಈ ಮೊದಲು:ಹೋಗಲಿ ಬಿಡಿ ಈ ಹುಡುಗಿಯರ ಹುಚ್ಚಿನಿಂದ ನನ್ನ ಜೀವನ ಏಕೆ ಹಾಳು ಮಾಡಬೇಕು ಎಂದುಕೊಂಡೆ ನನ್ನ ಮೊದಲ ಲವ್ ಕೈಗೆ ಸಿಗದಿದ್ದಾಗ ಆಗಲೇ ಊರು ಬಿಟ್ಟು ಬಂದಿದ್ದೆ. ಹೀಗಿರಬೇಕಾದರೆ ನನ್ನ ಸ್ನೇಹಿತನ ಜೀವನದಲ್ಲಿ ಒಂದು ಘಟನೆ ನಡೆಯಿತು. ಆತ ಪ್ರೀತಿ ಮಾಡಿದ ಹುಡುಗಿಯ ತಂದೆ ತೀರಿಕೊಂಡಿದ್ದ ಹೀಗಾಗಿ ಆಕೆಯ ಶಿಕ್ಷಣಕ್ಕೆ ಆತನೇ ಹಣ ಕೊಟ್ಟು ಕಲಿಸಿದ. ಇದಕ್ಕೆ ಅವಳ ತಾಯಿಯ ಸಮ್ಮಿತಿಯೂ ಇತ್ತು. ಹೀಗಾಗಿ ಇನ್ನೆನ್ನೂ ಕಲ್ಪನಾ ನನ್ನ ಜೀವನದಲ್ಲಿ ಬಂದೇ ಬಿಡ್ತಾಳೆ ಅಂತ ನನ್ನ ಸ್ನೇಹಿತ ರುದ್ರಪ್ಪ ನಿರ್ಧರಿಸಿ ಬಿಟ್ಟಿದ್ದ. ಆದರ ವಿಧಿಯಾಟ ಬೇರೇಯೇ ಆಗಿತ್ತು. ಅದೇನೆಂದರೆ ಆಕೆ ಡಿಗ್ರಿ ಮುಗಿಸುವ ಹೊತ್ತಿಗೆ ಪೂರ್ತಿ ಬದಲಾಗಿದ್ದರೂ ರುದ್ರಪ್ಪ ಗೌಂಡಿಯಾಗಿದ್ದ ಇವನನ್ನೆನ್ನು ಮದುವೆ ಆಗೋದು ಅಂದುಕೊಂಡು ಕಡ್ಡಿ ತುಂಡು ಮಾಡಿದಂತೆ ತುಂಡರಿಸಿ ಬಿಟ್ಟಳು. ಶಿಕ್ಷಕನೊಬ್ಬನನ್ನು ಮದುವೆಯಾಗಿ ಹೋದಳು.
ಹೀಗಾಗಿ ನನ್ನ ಸ್ನೇಹಿತನ ಜೀವನವೇ ಒಂದು ದೊಡ್ಡ ಮಾನಸ ಸರೋವರದ ಕಥೆಯಾಗುತ್ತೆ. ಏಕೆಂದರೆ ಆಕೆ ಮದುವೆಯಾದ ಬಳಿಕ ವಿಧವೆಯಾದಳು ಆ ಕಥೆ ನನ್ನ `ಮನಸ್ಸು' ಕಾದಂಬರಿಯಲ್ಲಿ ವಿವರವಾಗಿ ಬರಲಿದೆ.
Subscribe to:
Post Comments (Atom)
ಮನೆಪಾಠ ಕೇಂದ್ರಗಳಿಗೆ ಬ್ಯಾಗ್ ಮತ್ತು ಬುಕ್ಸ್ ವಿತರಣೆ
Dharwad: ಗುರುಕುಲ ಪದ್ಧತಿಯಂತೆ ಒಬ್ಬರೇ ಶಿಕ್ಷಕರಿಂದ ನಡೆಸುವ ಈ ನವೀನ ಪ್ರಯೋಗವೇ ಏಕ ಶಿಕ್ಷಕ ವಿದ್ಯಾಲಯ ಅಂದರೆ ಮನೆಪಾಠ ಕೇಂದ್ರ ಎಂದು ವನವಾಸಿ ಕಲ್ಯಾಣ ಕರ್ನಾಟಕ ಸಂಸ್ಥ...
.jpeg)
-
ನನಗೆ ಇರುವ ಚಟಗಳಲ್ಲಿ ಟಿವಿ ನೋಡುವುದು ದೊಡ್ಡ ಚಟ. ಹೀಗಾಗಿ ಮನೆ ಹಾಗೂ ಕಚೇರಿಯಲ್ಲಿದ್ದರೂ ಸಹ ಸದಾ ಟಿವಿಯನ್ನು ನೋಡುತ್ತಲೇ ಇರುತ್ತೇನೆ. ಇನ್ನು ಹೊರಗಡೆ ಸುತ್ತಾಡುವಾಗಲೂ ...
-
ಬೆಳಗಾವಿ, ೧- ಹಣದುಬ್ಬರ ಹಾಗೂ ಬೆಲೆ ಏರಿಕೆ ಮಧ್ಯೆ ಈಗ ಬೆಳಗಾವಿ ನಗರ ಹಾಗೂ ಜಿಲ್ಲೆಯಲ್ಲಿ ಚಿಲ್ಲರೆ ನಾಣ್ಯಗಳ ಅಭಾವ ಸೃಷ್ಟಿಯಾಗಿದ್ದು, ಇದನ್ನು ಕೆಲವರು ದಂಧೆಯನ್ನಾಗಿಯೂ ...
-
ರಾಜ್ಯದಲ್ಲಿ ತನ್ನ ಖಜಾನೆ ತುಂಬಿಸಿಕೊಳ್ಳುತ್ತಿರುವ ಮಲ್ಟಿಪ್ಲೆಕ್ಸ್ಗಳು, ಒಂದಲ್ಲ ಒಂದು ರೀತಿಯಲ್ಲಿ ಕನ್ನಡ ಚಿತ್ರಗಳಿಗೆ ಧಕ್ಕೆ ಮಾಡುತ್ತಲೇ ಬರುತ್ತಿವೆ. ಕನ್ನಡ ಸಿನಿಮಾ...
No comments:
Post a Comment