ಬಾಲ್ಯದಿಂದಲೂ ನನ್ನಲ್ಲಿದ್ದ ಸಿನಿಮಾ ಹುಚ್ಚು 6ನೇ ತರಗತಿಯಲ್ಲಿದ್ದಾಗೊಮ್ಮೆ ಪೇಚಿಗೆ ಸಿಲುಕಿಸಿತ್ತು. ಶಾಲೆಯಲ್ಲಿ ಅಪರೂಪಕ್ಕೊಮ್ಮೆ ಮುಖ್ಯೋಪಾಧ್ಯಾಯರ ಕೊಠಡಿಯಲ್ಲಿನ ಕಪಾಟು ತೆಗೆದು(ಆ ಪುಟ್ಟ ಕಪಾಟೇ ಹಳ್ಳಿ ಶಾಲೆಗಳ ಪಾಲಿಗೆ ಗ್ರಂಥಾಲಯ) ಪುಸ್ತಕಗಳನ್ನು ಓದಲು ಕೊಡುತ್ತಿದ್ದರು.
ನಮ್ಮ ಕೆ.ಎಂ. ಹಾವಣ್ಣವರ ಗುರುಗಳು ಪ್ರಭಾರ ಮುಖ್ಯೋಪಾಧ್ಯಾಯರಾಗಿದ್ದಾಗ ಅದೊಂದು ಶನಿವಾರ ಆ ಕಪಾಟು ಓಪನ್ ಮಾಡಿಸಿ ಪುಸ್ತಕಗಳನ್ನು ಟೇಬಲ್ ಮೇಲೆ ಹರವಿಕೊಂಡಿದ್ದರು. ಆಗ ನನ್ನ ಕಣ್ಣಿಗೆ ಬಿದ್ದ ಪುಸ್ತಕ ‘ರಣಧೀರ’;
ಆದಾಗಲೇ ನಮ್ಮೂರಲ್ಲಿ ಕೆಲ ಯುವಕ ಸಂಘದವರು ಆಗಾಗ ವಿಸಿಪಿ ತರಿಸಿ ತೋರಿಸುತ್ತಿದ್ದ ರಣಧೀರವನ್ನು 50 ಪೈಸೆ ಕೊಟ್ಟು ತುಂಬಾ ಸಲ ನೋಡಿ ಆಗಿತ್ತು. ಹೀಗಾಗಿ ಇದು ಅದೇ ರಣಧೀರನ ಪುಸ್ತಕ ಎಂದುಕೊಂಡು ಗಬಕ್ಕಂತ(ಛಕ್ಕನೆ) ತಗೊಂಡ ಬಿಟ್ಟೆ(ಕವರ್ ಪೇಜ್ ಹರಿದು ಹೋಗಿತ್ತು...!)
ರಣಧೀರ ಪುಸ್ತಕವನ್ನು ಕೈ ಚೀಲ(ಪ್ಲಾಸ್ಟಿಕ್‌ನ ಸಿಮೆಂಟ್ ಚೀಲದಿಂದ ಮಾಡಿದ್ದ ಕೈ ಚೀಲವೇ ನಮ್ಮ ಸ್ಕೂಲ್‌ಬ್ಯಾಗ್)ದಲ್ಲಿ ಹಾಕಿಕೊಂಡು ಏನೇನೋ ಕಲ್ಪಿಸಿಕೊಂಡು ಮನಗೆ ಬಂದವನೇ, ಗಡಬಡಿಯಿಂದ(ಅವಸರವಸರವಾಗಿ) ಊಟ ಮಾಡಿ, ಪುಸ್ತಕ ತೆಗೆದು ನೋಡಿದ್ರೆ ಅದು ರಾಜಾ ರಣಧೀರ ಕಂಠೀರವ ಕುರಿತ ಪುಟಾಣಿ ಕಾದಂಬರಿಯಾಗಿತ್ತು...!
Monday, October 26, 2015
ಸಿನಿಮಾ ಹುಚ್ಚು ಮತ್ತು ರಣಧೀರ ಕಾದಂಬರಿ...!

Subscribe to:
Post Comments (Atom)
ಮನೆಪಾಠ ಕೇಂದ್ರಗಳಿಗೆ ಬ್ಯಾಗ್ ಮತ್ತು ಬುಕ್ಸ್ ವಿತರಣೆ
Dharwad: ಗುರುಕುಲ ಪದ್ಧತಿಯಂತೆ ಒಬ್ಬರೇ ಶಿಕ್ಷಕರಿಂದ ನಡೆಸುವ ಈ ನವೀನ ಪ್ರಯೋಗವೇ ಏಕ ಶಿಕ್ಷಕ ವಿದ್ಯಾಲಯ ಅಂದರೆ ಮನೆಪಾಠ ಕೇಂದ್ರ ಎಂದು ವನವಾಸಿ ಕಲ್ಯಾಣ ಕರ್ನಾಟಕ ಸಂಸ್ಥ...
-
ಸೈರಾ ನರಸಿಂಹ ರೆಡ್ಡಿ ಸಿನಿಮಾ ಮೂಲ ತೆಲುಗು ಆಗಿದ್ರು ಕೂಡ ಕನ್ನಡದ ಡಬ್ಬಿಂಗ್ ತುಂಬಾ ಪರಿಪೂರ್ಣತೆ ಹೊಂದಿದೆ. ಮುಖ್ಯವಾಗಿ ಕಲಾವಿದರ ನಟನೆ, ತುಟಿಗಳ ಚಲನೆ ಮತ್ತು ಸಂಭಾಷಣೆ...
-
ಗೂಗ್ಲಿ ಚಿತ್ರದಲ್ಲಿ ಏನೆಂದರೆ ಏನೂ ಇಲ್ಲ. ನೆನಪಿಟ್ಟುಕೊಳ್ಳಬಹುದಾದ ಕಥೆಯಿಲ್ಲ. ಆದರೂ ಚಿತ್ರ ನೋಡಿದ ಬಳಿಕ ಕಾಡುತ್ತದೆ. ಮತ್ತೊಮ್ಮೆ ಹೋಗಿ ನೋಡಬೇಕು ಅನಿಸುತ್ತದೆ. ಅದಕ...
-
ದೇಶದಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿದೆ ಎಂದುಕೊಂಡು ಸುಮಾರು ನೂರಾರು ಸಾಹಿತಿಗಳು ಕೆಲ ತಿಂಗಳ ಹಿಂದೆ ತಾವು ಪಡೆದುಕೊಂಡಿದ್ದ ಪ್ರಶಸ್ತಿಗಳನ್ನು ವಾಪಸ್ ಕೊಟ್ಟಿದ್ದೆ ಕ...
No comments:
Post a Comment