ಸಿದ್ದಾರೂಢರ ಜೋಳಿಗೆ ಲೋಕಕ್ಕೆಲ್ಲ ಹೋಳಿಗೆ ಅನ್ನೋದು ಜಗಜನ್ನಿತ್ ವೇದವಾಕ್ಯ..
ಇಂದು ಬಾಲಿವುಡ್ ನಟಿ ಕಾಜೋಲ್ ಸಿದ್ದಾರೂಢರ ಮಠಕ್ಕೆ ಭೇಟಿ ನೀಡಿದಾಗ ದೊಡ್ಡ ಸುದ್ದಿಯಾಯ್ತು. ಹಾಗೆ ನೋಡಿದ್ರೆ ಸಿದ್ದಾರೂಢರ ಪಾದ ಸ್ಪರ್ಶಿಸಿ ಸಾಕ್ಷಾತ್ ದರ್ಶನ ಪಡೆದ ಕೀರ್ತಿ ಬಾಲಿವುಡ್ ಲೆಜಂಡ್ರಿ ಗುರುದತ್ ಅವರಿಗೆ ಸಲ್ಲುತ್ತೇ..
ಹೌದು..
ಗುರುದತ್ ಇನ್ನೂ ಪುಟ್ಟ ಬಾಲಕ ಆಗಿದ್ರು ಆಗ ಅವರ ತಾಯಿ ವಾಸಂತಿ ಪಡುಕೋಣೆಯವರು ಒಂದಷ್ಟು ದಿನ ಹುಬ್ಬಳ್ಳಿಯ ಸಂಬಂಧಿಗಳ ಮನೆಯಲ್ಲಿ ಉಳಿದಿರತಾರೆ.
ಆಗ ತಮಗೆ ಎದುರಾದ ಕಷ್ಟ ಪರಿಹಾರ ಆಗ್ಲಿ ಅಂತಾ ವಾಸಂತಿ ಅಮ್ಮ ಪುಟ್ಟ ಮಗು ಗುರುದತ್‌ನ ಕರಕೊಂಡು ಸಿದ್ದಾರೂಢರ ದರ್ಶನಕ್ಕೆ ಹೋಗ್ತಾರೆ.
ಸರತಿ ಸಾಲಿನಲ್ಲಿ ಜನ ನಿಂತಿರತಾರೆ ಅತ್ತ ಸಿದ್ಧಾರೂಢರು ಶಾಂತಚಿತ್ತರಾಗಿ ಕುಳಿತು ಬಂದ ಭಕ್ತರಿಗೆ ಆಶೀರ್ವಾದಮಾಡ್ತಾ ಇರ್ತಾರೆ ಆಗ ಇವರ ಪಾಳಿ ಬರುತ್ತೆ ಪುಟ್ಟ ಬಾಲಕ ಗುರುದತ್ ಶ್ರೀಗಳ ಪಾದಕ್ಕೆರಗುತ್ತಿದ್ದಂತೆ ಅಷ್ಟ ಅಷ್ಟೊತ್ತಿನವರೆಗೂ ಶಾಂತಚಿತ್ತರಾಗಿದ್ದ ಶ್ರೀಗಳು ಮಗುವಿನ ಮುಖ ನೋಡಿ ನಗಲಾರಂಭಿಸಿದರೆ ಆಗಲೇ ಇವನೊಬ್ಬ ಲೆಂಜಡ್ರಿ ಆಗ್ತಾನೆ ಅನ್ನೋ ಸೂಚನೆಯನ್ನ ಸಿದ್ದಾರೂಢರು ನೀಡಿದ್ರಂತೆ( ವಾಸಂತಿ ಪಡುಕೋಣೆಯವರು "ನನ್ನ ಮಗ ಗುರುದತ್" ಪುಸ್ತಕದಲ್ಲಿ ಇದನ್ನು ಪ್ರಸ್ತಾಪಿಸಿದ್ದಾರೆ)
ಇನ್ನೂ ಡಾ. ರಾಜ್‌ರ ಮೊದಲ ಚಿತ್ರ ಬೇಡರ ಕಣ್ಣಪ್ಪಗೆ ಆಫರ್ ಬಂದಿದ್ದು ಇದೇ ಮಠದಲ್ಲಿ ನೆಲೆಸಿದ್ದಾಗ. ಹೌದು ನಾಟಕಗಳಲ್ಲಿ ಪಾತ್ರ ಮಾಡತಿದ್ದ ರಾಜಕುಮಾರ ಅವರು, ಉತ್ತರ ಕರ್ನಾಟಕಕ್ಕೆ ಬಂದ್ರೆ ಶ್ರೀಮಠದಲ್ಲೆಇರ್ತಾ ಇದ್ರು. ಹಾಗೊಮ್ಮೆ ಬಂದು ಇಲ್ಲಿ ಇದ್ದಾಗಲೇ ಬೇಡರ ಕಣ್ಣಪ್ಪಗೆ ಆಫರ್ ಬಂತು ಆಗ ಗುರುನಾಥಾರೂಢರು ಇದ್ರು. ಅವರ ಆಶೀರ್ವಾದ ಪಡೆದು ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ರು, ಅದು ಸಿದ್ಧಾರೂಢರ ಕೃಪೆ ಎಂದರಿತ ರಾಜಕುಮಾರ ಅವರು ಕೊನೆಯವರೆಗೂ ಮಠದ ಭಕ್ತರಾಗಿದ್ರು ಅವರ ಬಳಿಕ ಇವತ್ತಿಗೂ ರಾಜಕುಮಾರ ಕುಟುಂಬದ ಯಾರೇ ಸಹ ಹುಬ್ಬಳ್ಳಿ ದಾಟಿ ಹೊರಟ್ರೆ ಮಠಕ್ಕೆ ಮೊದಲ ಭೇಟಿ ನೀಡ್ತಾರೆ. ಇವರ ಕುಟುಂಬ ಇವತ್ತಿಗೂ ಮಠಕ್ಕೆ ಅಪಾರ ದೇಣಿಗೆ ನೀಡಿದೆ. ಇವತ್ತಿಗೂ ದೇಣಿಗೆ ನೀಡುತ್ತಲೇ ಇದ್ದಾರೆ.



No comments:
Post a Comment